ಟೀಮ್ ಇಂಡಿಯಾದ ವಿಕೆಟ್ ಕೀಪರ್ ಹಾಗೂ ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ ಆಗಿದ್ದ ರಿಷಬ್ ಪಂತ್ (Rishabh Pant) ಅಪಘಾತಕ್ಕೆ ಒಳಗಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಶೀಘ್ರವಾಗಿ ಚೇತರಿಕೆ ಕಂಡುಕೊಂಡಿರುವ ರಿಷಬ್ ಪಂತ್ ಅವರ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್ 30, 2022 ರಂದು ಕಾರಿನ ಅಪಘಾತದಲ್ಲಿ ರಿಷಬ್ ಪಂತ್ ಅವರಿಗೆ ತೀವ್ರವಾಗಿ ಗಾಯಗಳಾಗಿತ್ತು. ಈ ಅಪಘಾತದ ನಂತರ ರಿಷಬ್ ಪಂತ್ ಅವರನ್ನ ಶಸ್ತ್ರ ಚಿಕಿತ್ಸೆಗೂ ಒಳಪಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ ಪ್ರತಿದಿನ ಮೂರು ಫಿಸಿಯೋಥೆರಪಿ ಸೆಷನ್ ಪಡೆದುಕೊಳ್ಳುತ್ತಿದ್ದಾರಂತೆ ರಿಷಬ್ ಪಂತ್.
ಇತ್ತೀಚಿಗೆ ರಿಷಬ್ ಪಂತ್ ಅವರು ತಮ್ಮ Instagram ಖಾತೆಯಲ್ಲಿ ತಮ್ಮ ಆರೋಗ್ಯದ ವಿಷಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಈಗಿನ ಫಿಟ್ನೆಸ್ ಬಗ್ಗೆ ಹೇಳಿಕೊಂಡಿದ್ದಾರೆ. ಕಾರು ಅಪಘಾತದ ಮೂರು ತಿಂಗಳ ನಂತರ ಮೊದಲ ಬಾರಿಗೆ ನೆಲಕ್ಕೆ ಕಾಲಿಟ್ಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ರಿಷಬ್ ಪಂತ್ ಅವರು ಹೇಳಿಕೊಂಡಿರುವಂತೆ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ವಿಷಯ ಕೇಳಿ ರಿಷಬ್ ಪಂತ್ ಅವರ ಅಭಿಮಾನಿಗಳಂತೂ ತುಂಬಾ ಖುಷಿಯಾಗಿದ್ದಾರೆ ಐಪಿಎಲ್ 2023ರ ಮೊದಲು ಕ್ರಿಕೆಟ್ ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ರಿಷಬ್ ಪಂತ್ ಈಗಿರುವ ಸ್ಥಿತಿಯಲ್ಲಿ ಅದು ಸಾಧ್ಯವಾಗದೇ ಇರಬಹುದು. ಆದರೆ ಅವರು ಅತ್ಯಂತ ಶೀಘ್ರವಾಗಿ ಚೇತರಿಕೆ ಕಂಡುಕೊಳ್ಳುತ್ತಿರುವುದಂತೂ ಸತ್ಯ.
ಇನ್ನು ತನಗೆ ಆಗಿರುವ ಆಘಾತವನ್ನು ಕೂಡ ಬಹಳ ಸುಲಭವಾಗಿ ತೆಗೆದುಕೊಂಡಿರುವ ರಿಷಬ್ ಪಂತ್, ತಮ್ಮ ದೈನಂದಿನ ಜೀವನದ ಬಗ್ಗೆಯೂ ಹೇಳಿಕೊಂಡಿದ್ದಾರೆ ಅಪಘಾತದ ನಂತರ ಪ್ರತಿದಿನ ನಾನು ಆನಂದವನ್ನು ಅನುಭವಿಸುತ್ತಿದ್ದೇನೆ. ವಿಶೇಷವಾಗಿ ಹಲ್ಲುಜ್ಜುವುದು, ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಎಲ್ಲವೂ ನನಗೆ ಖುಷಿ ನೀಡುತ್ತಿದೆ ಎಂದು ಹೇಳಿದ್ದಾರೆ.
ರಿಷಬ್ ಪಂತ್ ಪೋಸ್ಟ್ ನಲ್ಲಿ ಏನಿದೆ!
“ನಾನು ನನ್ನ ದಿನಚರಿಯ ವೇಳಾಪಟ್ಟಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಬೆಳಿಗ್ಗೆ ಎದ್ದ ಕೂಡಲೇ ನನಗೆ ಫಿಸಿಯೋಥೆರಪಿ ಸೆಶನ್ ಶುರುವಾಗುತ್ತದೆ. ಅದಾದ ಬಳಿಕ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ನಂತರ ಎರಡನೇ ಫಿಸಿಯೊಥೆರಪಿಗೆ ತಯಾರಿ ನಡೆಸುತ್ತೇನೆ. ನೋವು ಸಹಿಸಲು ಸಾಧ್ಯವಾಗುವಷ್ಟು ಕಾಲ ತರಬೇತಿ ತೆಗೆದುಕೊಳ್ಳುತ್ತೇನೆ. ಇದಾದ ನಂತರ ಮತ್ತೆ ಮೂರನೇ ಫಿಸಿಯೋಥೆರಪಿ ಅವಧಿ ಶುರುವಾಗುತ್ತದೆ. ಎಲ್ಲ ಸೆಷನ್ ಗಳ ನಡುವೆ ನಾನು ಹಣ್ಣು ನೀರು ಸೇವಿಸುತ್ತೇನೆ” ಎಂದು ರಿಷಬ್ ಪಂತ್ ಬರೆದುಕೊಂಡಿದ್ದಾರೆ. ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ ರಿಷಬ್ ಪಂತ್ ಗುಣಮುಖರಾಗಿ ಬೇಗ ಫೀಲ್ಡ್ ಗೆ ಬರಲಿ ಎನ್ನುವುದು ಎಲ್ಲರ ಆಶಯ.