ಇನ್ನೇನು ಐಪಿಎಲ್ 2023 ಆರಂಭವಾಗಲಿದೆ. ಆದರೆ ಈ ಸಮಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಬಿಗ್ ಶಾಕ್ ಆಗಿದೆ. ಇಂಗ್ಲೆಂಡ್ ನ ಆಟಗಾರ ಆರ್ ಸಿ ಬಿ ತಂಡದ ಆಲ್ ರೌಂಡರ್ ವಿಲ್ ಜ್ಯಾಕ್ಸ್ ತಂಡದಿಂದ ಹೊರಗೆ ಉಳಿದಿದ್ದಾರೆ. ಅವರು IPL 2023 ಯಲ್ಲಿ ಆಟವಾಡುವುದು ಬಹುತೇಕ ಡೌಟ್ ಎಂದು ಈ ಎಸ್ ಪಿ ಎನ್ ಕ್ರಿಕ್ ಇನ್ಫೋ (ESPN Crikinfo) ಮಾಹಿತಿ ನೀಡಿದೆ.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದ ಹರಾಜಿನಲ್ಲಿ ಆರ್ ಸಿಬಿ 3.2 ಕೋಟಿಗಳಿಗೆ ವಿಲ್ ಜ್ಯಾಕ್ಸ್ (Will Jacks) ಅವರನ್ನು ಖರೀದಿ ಮಾಡಿತ್ತು. ಆದರೆ ಇದೀಗ ಬ್ಯಾಕ್ಸ್ ತನ್ನ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಬಾಂಗ್ಲಾ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಸಮಯದಲ್ಲಿ ಜ್ಯಾಕ್ಸ್ ಗೆ ಮಂಡಿ ರಜ್ಜು ಗಾಯವಾಗಿದೆ. ಈಗಾಗಲೇ ಆಪ್ತ ವೈದ್ಯರಿಂದ ಹಾಗೂ ತಜ್ಞರಿಂದ ಮಾಹಿತಿ ಲಭ್ಯವಾಗಿದ್ದು, ಅವರ ಪ್ರಕಾರ ಜ್ಯಾಕ್ಸ್ IPL ನಿಂದ ಹಿಂದೆ ಸರಿಯುವಂತೆ ಸಲಹೆ ನೀಡಲಾಗಿದೆ.
ಈ ಗಾಯ ವಿಲ್ ಜ್ಯಾಕ್ಸ್ ಗೆ ದೊಡ್ಡ ಹೊಡೆತ ನೀಡಿದೆ. ಮೊದಲ ಬಾರಿಗೆ ಐಪಿಎಲ್ ಆಡುವ ಮೂಲಕ ಭಾರತೀಯರಿಗೆ ಹೆಚ್ಚು ಪರಿಚಿತರಾಗುವ ಸಾಧ್ಯತೆ ಇತ್ತು. ಅದೇ ರೀತಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯುವ ಓ ಡಿ ಐ ವಿಶ್ವಕಪ್ ಗಾಗಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಬೇಕಿತ್ತು. ಆದರೆ ಅವರ ಗಾಯದ ಕಾರಣ ಅವರು ಈ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ.
ಎ ಎಸ್ ಪಿಎನ್ ಕ್ರಿಕ್ ಇನ್ಫೋ ಪ್ರಕಾರ ಆರ್ ಸಿ ಬಿ ವಿಲ್ ಜ್ಯಾಕ್ಸ್ ಬದಲಿಗೆ ನ್ಯೂಜಿಲ್ಯಾಂಡ್ ನ ಆಲ್ ರೌಂಡರ್ ಮೈಕಲ್ ಬ್ರೇಸ್ ವೆಲ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳುವ ಮಾತುಕತೆ ನಡೆಸಿದೆ. ಅಂದಹಾಗೆ ಬ್ರೇಸ್ ವೆಲ್ ಹಿಂದೆಂದೂ ಐಪಿಎಲ್ ಆಡಿಲ್ಲ ಮತ್ತು ಡಿಸೆಂಬರ್ ಹರಾಜಿನಲ್ಲಿ ಅವರನ್ನು ಯಾರು ಖರೀದಿ ಮಾಡಿರಲಿಲ್ಲ.
ಆರ್ ಸಿ ಬಿ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಎಪ್ರಿಲ್ 2ರಿಂದ ತನ್ನ ಪ್ರಥಮ ಮ್ಯಾಚ್ ಆರಂಭಿಸಲಿದೆ. 2019ರ ನಂತರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂದರೆ ತನ್ನ ತವರು ಮೈದಾನದಲ್ಲಿ ಮೊದಲ ಪಂದ್ಯ ಆಡಲಿದೆ ಆರ್‌ಸಿಬಿ. ಆರ್‌ಸಿಬಿ ತಂಡದಿಂದ ಹೊರಗುಳಿದಿರುವ ಜಾಕ್ಸ್ ಕಳೆದ ವರ್ಷವಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟಿದ್ದರು. ಮಾರ್ಚ್ 2023ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಆಡಿದ ಜಾಕ್ಸ್ ಕಳೆದ ವರ್ಷ ಪಾಕಿಸ್ತಾನ ಪ್ರವಾಸ ಮಾಡುವುದರ ಮೂಲಕ T20 ಹಾಗೂ ಟೆಸ್ಟ್ ಕ್ರಿಕೆಟ್ ಕೂಡ ಆಡಲು ಆರಂಭಿಸಿದ್ದರು.