Karnataka Times
Trending Stories, Viral News, Gossips & Everything in Kannada

Rishabh Pant: ಮನೆಯಲ್ಲಿ ಕುಳಿತ್ರು Zomato ದಿಂದ ರಿಷಬ್ ಪಂತ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ದೊರಕಿರುವಂತಹ ಅತ್ಯಂತ ಭರವಸೆಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಗಳಲ್ಲಿ ರಿಷಬ್ ಪಂತ್ (Rishabh Pant) ರವರು ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ನಿಮಗೆಲ್ಲರಿಗೂ ತಿಳಿದಿರಬಹುದು ಈ ವರ್ಷದ ಆರಂಭದಲ್ಲಿ ತಾಯಿಗೆ ಸರ್ಪ್ರೈಸ್ ನೀಡಲು ವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ರಿಷಬ್ ಪಂತ್ ರವರು ಅಪ’ ಘಾತದಿಂದ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

ಹೀಗಿದ್ದರೂ ಕೂಡ ಅವರು ಖಾಲಿ ಕೈಯಲ್ಲಿ ಕುಳಿತಿಲ್ಲ ಅವರಿಗೂ ಕೂಡ ಸಾಕಷ್ಟು ಬ್ರಾಂಡ್ ಡೀಲ್ಸ್ ಗಳು ಹಾಗೂ ಇನ್ನಿತರ ಪ್ರಮೋಷನ್ ಗಳು ಇರುತ್ತವೆ ಹೀಗಾಗಿ ಅದರಲ್ಲಿ ನಿರತರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಝೋಮ್ಯಾಟೋ (Zomato) ಜಾಹೀರಾತುಗಳಲ್ಲಿ ರಿಷಬ್ ಪಂತ್ (Rishabh Pant) ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಒಂದು ಲೆಕ್ಕದಲ್ಲಿ ಆ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಎಂದರು ಕೂಡ ತಪ್ಪಾಗಲಾರದು. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೂ ಕೂಡ ರಿಷಬ್ ಪಂತ್ ಅವರು ಝೋಮ್ಯಾಟೋ ಜಾಹೀರಾತಿನ ಮೂಲಕ ಈ ಐಪಿಎಲ್ ಸೀಸನ್ ನಲ್ಲಿ ಗಳಿಸುತ್ತಿರುವ ಹಣ ಎಷ್ಟು ಅಂತ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡ್ತೀರಾ. ಹಾಗಿದ್ದರೆ ಬನ್ನಿ ಈ ಝೋಮ್ಯಾಟೋ ಜಾಹೀರಾತಿನಿಂದ ರಿಷಬ್ ಪಂತ್ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.

Advertisement

ಎರಡು ತಿಂಗಳ ಅವಧಿಯಲ್ಲಿ ನಡೆಯುವಂತಹ ಈ ಐಪಿಎಲ್ ಉದ್ದಕ್ಕೂ ಕೂಡ ಝೋಮ್ಯಾಟೋ ಪ್ರೀಮಿಯರ್ ಲೀಗ್ (ZPL) ಎನ್ನುವ ಝೋಮ್ಯಾಟೋ ಸಂಸ್ಥೆಯ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ರಿಷಬ್ ಪಂತ್ (Rishabh Pant) ಕೆಲವೊಂದು ಪೋಸ್ಟ್ಗಳನ್ನು ಹಾಕುವುದು ಹಾಗೂ ಕೆಲವೊಂದು ಜಾಹಿರಾತುಗಳಲ್ಲಿ ಕುಳಿತಲ್ಲಿಂದಲೇ ಕಾಣಿಸಿಕೊಳ್ಳುವುದು ಸೇರಿದಂತೆ ಇನ್ನಿತರ ಪ್ರಮೋಷನ್ಗಳಿಗಾಗಿ ಭರ್ಜರಿ ಆರರಿಂದ ಎಂಟು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸ್ಟಾರ್ ಆಟಗಾರ ಕುಳಿತುಕೊಂಡರು ಕೂಡ ಎಷ್ಟು ಸಂಪಾದನೆ ಮಾಡಬಹುದು ಎನ್ನುವುದಕ್ಕೆ ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ರಿಷಬ್ ಪಂತ್ ಅವರು ಉದಾಹರಣೆಯಾಗಿ ನಿಂತಿದ್ದಾರೆ.

Leave A Reply

Your email address will not be published.