ಐಪಿಎಲ್ ನಲ್ಲಿ ಅದೆಷ್ಟೊ ತಂಡ ಗೆದ್ದು ಬೀಗಿದರೂ ಕರ್ನಾಟಕದ ಜನತೆಯ ಕೂಗು ಮಾತ್ರ ಆರ್ ಸಿಬಿ RCB ಆಗಿದೆ ಎನ್ನಬಹುದು. 2008ರಿಂದ ಈ ವೆರೆಗೂ ಆರ್ ಸಿಬಿ ಕಪ್ ಗೆಲ್ಲದಿದ್ದರೂ ಅದಕ್ಕೆ ಕರ್ನಾಟಕದ ಜನತೆ ನೀಡುವ ಸಪೋರ್ಟ್ ಮಾತ್ರ ಕಮ್ಮಿ ಆಗಿಲ್ಲ ಎನ್ನಬಹುದು.
ಆರ್ ಸಿಬಿ ಮೊದಲಿಂದಲೂ ಅತೀ ಹೆಚ್ಚು ಫ್ಯಾನ್ಸ್ ಹೊಂದಿರುವ ತಂಡವಾಗಿದ್ದು ಪ್ರತಿ ಭಾರಿ ಪಂದ್ಯ ಆರಂಭವಾಗುವಾಗಲೇ ಈ ಸಲ ಕಪ್ ನಮ್ಮದೇ ಎನ್ನುತ್ತಲೇ ಇದ್ದಾರೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್ (S. Sreesanth) ಅವರು ಈ ಸಲ ಗೆಲ್ಲೊ ತಂಡದ ಬಗ್ಗೆ ಮಾತಾಡಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನ ಮಾಡಲಾಗಿದೆ. ಆಗ ಅವರು ಈ ಬಗ್ಗೆ ಮಾತನಾಡಿದ್ದಾರೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ (CSK) ಯಾವುದೇ ಕಾರಣಕ್ಕೂ ಟ್ರೋಫಿ ಗೆಲ್ಲುವುದಿಲ್ಲ ಎಂದು ಎಲ್ಲರಲ್ಲೂ ಈ ಗೆಸ್ ಸಕತ್ ಕುತೂಹಲ ಮೂಡಿಸಿದೆ.
ವಿರಾಟ್ ಕೊಹ್ಲಿ (Virat kohli) ಭಾರತೀಯ ಕ್ರಿಕೆಟ್ ರಂಗಕ್ಕೆ ನೀಡಿದ್ದ ಕೊಡುಗೆ ಅಗಣ್ಯವಾಗಿದ್ದು ಇದನ್ನು ಇಡೀ ಕ್ರಿಕೆಟ್ ತಂಡ ಮರೆವಂತಿಲ್ಲ. ಅದೇ ರೀತಿ ಆರ್ ಸಿಬಿ ಗೆದ್ದರೆ ವಿರಾಟ್ ಕೊಹ್ಲಿ ಅವರಿಗರ ಒಂದು ಗೌರವ ಸಂದಿದಂತಾಗುತ್ತದೆ. ಈ ಮೂಲಕ ಈ ಬಾರಿ RCB ಗೆಲ್ಲುವುದು ಎಂಬ ಭರವಸೆಯ ಮಾತನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಯಾವಾಗಲೂ ಒಂದೇ ತಂಡ ಗೆದ್ದರೆ ಆ ಆಟದಲ್ಲಿ ಮಜಾ ಇರೊಲ್ಲ ಗೆಲುವು ಬದಲಾರದರೆ ಆಟ ರೋಚಕವಾಗುತ್ತದೆ ಆ ಖುಷಿ ಕ್ರೀಡಾ ಅಭಿಮಾನಿಗಳ ನಿರೀಕ್ಷೆ ಇಮ್ಮಡಿಗೊಳಿಸುತ್ತದೆ. ಒಟ್ಟಾರೆಯಾಗಿ ಆರ್ ಸಿಬಿ ಒಂದು ಬಾರಿ ಕೂಡ ಪ್ರಶಸ್ತಿ ಗೆಲ್ಲದಿದ್ದರೂ ಆ ತಂಡದ ಮೇಲೆ ಜನರ ನಿರೀಕ್ಷೆ ಮಾತ್ರ ಹೆಚ್ಚಾಗೆ ಇದೆ. ಆರ್ ಸಿಬಿ ಈಗಾಗಲೇ ಹರಾಜು ಪ್ರಕ್ರಿಯೆಯಲ್ಲಿ ಬಲಿಷ್ಟತಂಡವಾಗಿ ಹೊರಹೊಮ್ಮಿದ್ದು ಈ ಬಾರಿಯಾದರೂ ಕಪ್ ನಮ್ಮದಾಗಬಹುದೊ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.