Karnataka Times
Trending Stories, Viral News, Gossips & Everything in Kannada

Fast Bowler: ಅಫ್ಘಾನಿಸ್ತಾನದ ವಿರುದ್ಧದ ಪಂದ್ಯಕ್ಕೂ ಮುನ್ನವೇ ಈ ವೇಗದ ಬೌಲರ್ ನಿವೃತ್ತಿ

advertisement

ಭಾರತೀಯ ಕ್ರಿಕೆಟ್ ತಂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ (T20 Worldcup) ನಲ್ಲಿ ಅತ್ಯಂತ ಉತ್ತಮವಾದಂತಹ ಪ್ರದರ್ಶನವನ್ನು ತೋರ್ಪಡಿಸಿದ್ದು ಸೂಪರ್ ಎಂಟು ಹಂತಕ್ಕೆ ತನ್ನ ಗ್ರೂಪ್ನಿಂದ ಅಗ್ರಸ್ಥಾನ ಯಾಗಿ ತೇರ್ಗಡೆಯಾಗಿದೆ. ರಾಹುಲ್ ದ್ರಾವಿಡ್ (Rahul Dravid) ರವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಆಡುತ್ತಿರುವಂತಹ ಕೊನೆಯ ಐಸಿಸಿ ಟೂರ್ನಮೆಂಟ್ (ICC Tournament) ಇದಾಗಿದೆ ಎಂದು ಹೇಳಬಹುದು. ಮಾತ್ರವಲ್ಲದೆ ಇದಾದ ನಂತರ ರೋಹಿತ್ ಶರ್ಮ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಅವರು ಕೂಡ ಭಾರತೀಯ ಕ್ರಿಕೆಟ್ ತಂಡದಲ್ಲಿ ಮುಂದಿನ ವಿಶ್ವ ಕಪ್ ಗಳಲ್ಲಿ ಕಾಣಿಸಿಕೊಳ್ಳುವಂತಹ ಅನುಮಾನ ದಟ್ಟವಾಗಿ ಎದ್ದು ಕಾಣುತ್ತಿದೆ. ಹೀಗಾಗಿ ಈ ಬಾರಿ ವಿಶ್ವಕಪ್ ಗೆಲ್ಲುವುದು ಸಾಕಷ್ಟು ವಿಚಾರಗಳಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತದೆ.

ಇನ್ನು ಆಫ್ಘಾನಿಸ್ತಾನದ (Afghanistan) ವಿರುದ್ಧ ಭಾರತೀಯ ಕ್ರಿಕೆಟ್ ತಂಡ ಸೂಪರ್ 8 ಪಂದ್ಯವನ್ನ ಇಂದು ರಾತ್ರಿ 8 ಗಂಟೆಗೆ ಆಡಲಿದೆ. ಇದಕ್ಕಿಂತಲೂ ಮುಂಚೆ ಈಗ ಭಾರತ ಮೂಲದ ಒಬ್ಬ ಕ್ರಿಕೆಟಿಗರು ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ರೆ ಬನ್ನಿ ಆ ಕ್ರಿಕೆಟ್ ಆಟಗಾರರು ಯಾರು ಅನ್ನೋದನ್ನ ತಿಳಿದುಕೊಳ್ಳೋಣ.

ಇನ್ಮುಂದೆ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡಲ್ಲ ಈ ಆಟಗಾರ್ತಿ:

ಹೌದು ನಾವ್ ಮಾತಾಡ್ತಿರೋದು 35 ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಆಗಿರುವಂತಹ ನಿರಂಜನ ನಾಗರಾಜನ್ (Niranjana Nagarajan) ರವರ ಬಗ್ಗೆ. ಇವರು ಭಾರತೀಯ ಕ್ರಿಕೆಟ್ ತಂಡಕ್ಕೆ ಕೇವಲ 19 ವರ್ಷ ವಯಸ್ಸಿರಬೇಕಾದರೆ ಪಾದಾರ್ಪಣೆ ಮಾಡುತ್ತಾರೆ.

 

advertisement

Image Source: Times of Sports News

 

ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ನ ಪಾದರ್ಪಣ ಪಂದ್ಯಗಳಲ್ಲಿ ಮೂರು ಫಾರ್ಮೆಟ್ಗಳಲ್ಲಿ ಕೂಡ ಇವರು ಪಾದರ್ಪಣೆ ಮಾಡಿದ್ದು ಇಂಗ್ಲೆಂಡ್ ತಂಡದ ವಿರುದ್ಧ ಅನ್ನೋದು ಮತ್ತೊಂದು ಇಂಟರೆಸ್ಟಿಂಗ್ ವಿಚಾರ. ಇವರು 22 ಏಕದಿನ 14 t20 ಹಾಗೂ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರು ಮೂರು ಫಾರ್ಮಾಟ್ ಗಳಲ್ಲಿ 37 ವಿಕೆಟ್ಗಳನ್ನು ಕಬಳಿಸಿದ್ದಾರೆ ಎನ್ನುವುದಾಗಿ ತಿಳಿದು ಬಂದಿದೆ, ಡೊಮೆಸ್ಟಿಕ್ ನಲ್ಲಿ ಇವರು ಮೊದಲಿಗೆ ರೈಲ್ವೆ ಪರವಾಗಿ ಹಾಗೂ ನಂತರ ತಮಿಳುನಾಡು ತಂಡದ ಪರವಾಗಿ ಕೂಡ ಪ್ರತಿನಿಧಿಸಿದ್ದರು.

 

Image Source: Sportzwiki Hindi

 

ತಮ್ಮ ನಿವೃತ್ತಿಯ ವಿಚಾರದ ಬಗ್ಗೆ ನಿರಂಜನ ಅವರು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದಾರೆ ಹಾಗೂ ಎಲ್ಲಕ್ಕಿಂತ ಬೇಸರ ಮಾಡಿಕೊಳ್ಳಬೇಕಾಗಿರುವಂತಹ ಮತ್ತೊಂದು ವಿಚಾರ ಅಂದ್ರೆ ನಿರಂಜನ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಆಡೋದಕ್ಕೆ ಕಳೆದ ಎಂಟು ವರ್ಷಗಳಿಂದಲೂ ಕೂಡ ಅವಕಾಶ ಸಿಕ್ಕಿಲ್ಲ ಅನ್ನೋದು. 2016ರಲ್ಲಿ ರಾಂಚಿಯಲ್ಲಿ ನಡೆದಿರುವಂತಹ ಶ್ರೀಲಂಕಾ ವಿರುದ್ಧ ಪಂದ್ಯವೇ ಅವರ ಕೊನೆಯ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಗಿತ್ತು. ಅದೇನೆ ಇರಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಅವರ ಕೊಡುಗೆ ಶಾಶ್ವತವಾಗಿ ಉಳಿದುಕೊಳ್ಳಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.