ಐಪಿಎಲ್ (IPL) 2023 ಸೀಸನ್ ವೇಳಾಪಟ್ಟಿ ಈಗಾಗಲೇ ಬಿಡುಗಡೆ ಗೊಂಡಿದೆ. ಮಾರ್ಚ್ 31ರಿಂದ ಐಪಿಎಲ್ (IPL) ಆರಂಭವಾಗಲಿದೆ, ಆರ್‌ಸಿಬಿ (RCB) ತಂಡವು 2023ರ ಐಪಿಎಲ್ ಪಂದ್ಯಾವಳಿಗಾಗಿ ಬಲಿಷ್ಠ ತಂಡವನ್ನು ರೂಪಿಸುತ್ತಿದೆ, ಫಾಫ್ ಡು ಪ್ಲೆಸಿಸ್ (Faf du Plessis) ವಿರಾಟ್ ಕೊಹ್ಲಿ (Virat Kohli) ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ದಿನೇಶ್ ಕಾರ್ತಿಕ್ (Dinesh Karthik) ಅವರಂತಹ ಬಿಗ್ ಆಟಗಾರರು ಇದರಲ್ಲಿ ಇದ್ದಾರೆ, ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಈ ಬಾರಿಯೂ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎನ್ನಲಾಗಿದೆ.
ದಿಗ್ಗಜ ಕ್ರಿಕೆಟಿಗರ ಸಮಗಮ:
ಆಟಗಾರರ ಅಭ್ಯಾಸದ ಪಂದ್ಯವು ನಡೆಯಲಿದೆ, ಜೊತೆಗೆ ದಿಗ್ಗಜ ಕ್ರಿಕೆಟಿಗರಾದ ವೆಸ್ಟ್ಇಂಡೀಸ್ನ ಕ್ರಿಸ್ ಗೇಲ್ (Chris Gayle) ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ರನ್ನು (AB de Villiers) ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮವೂ ನಡಯಲಿದೆ ಎನ್ನಲಾಗಿದೆ, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 31ರಿಂದ ಆರಂಭವಾಗಲಿದೆ, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ತಂಡ:
IPL 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ತಂಡವಾಗಿದೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಪ್ರಸಿದ್ದ ಆಟಗಾರರು ಈ ತಂಡದಲ್ಲಿದ್ದಾರೆ. ವಿರಾಟ್ ಕೊಹ್ಲಿಯಿಂದಾಗಿಯೇ ಆರ್ ಸಿ ಬಿಯಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ, ಈ ಸಲ ಕಪ್ ನಮ್ದೇ ಎಂದು ಆರ್ ಸಿ ಬಿ ತಂಡಕ್ಕೆ ಸಪೋರ್ಟ್ ನೀಡುತ್ತಾ ಅಭಿಮಾನಿಗಳು ಹೇಳುತ್ತಿದ್ದಾರೆ
ಸಂಗೀತ ಕಾರ್ಯಕ್ರಮಗಳ ಆಯೋಜನೆ:
ಆಟಗಾರರ ಅಭ್ಯಾಸದ ಜೊತೆಗೆ ಹಾಲ್ ಆಫ್ ಫೇಮ್‌ಗೆ ಸೇರ್ಪಡೆ ಕಾರ‍್ಯಕ್ರಮಗಳು ನಡೆಯಲಿದೆ, ಸೋನು ನಿಗಮ್, ಜೇಸನ್ ಡೆರುಲೊ ಸೇರಿದಂತೆ ವಿವಿಧ ಬ್ಯಾಂಡ್ಗಳಿಂದ ಸಂಗೀತ ಕಾರ‍್ಯಕ್ರಮ ಆಯೋಜಿಸಲಾಗಿದೆ, ಸಂಜೆ 4ರಿಂದ ರಾತ್ರಿ 10ರ ವರೆಗೆ ಅಭ್ಯಾಸ, ಸಂಗೀತ, ನಡೆಯಲಿವೆ ಎಂದು ಫ್ರಾಂಚೈಸಿಯು ತಿಳಿಸಿದೆ.