ಸದ್ಯ ಬಾರ್ಡರ್ – ಗವಾಸ್ಕರ್ ಟೆಸ್ಟ್ ಸರಣಿ ಬಳಿಕ (Border Gavaskar Test Series) ಆಸ್ಟ್ರೇಲಿಯಾ (Australia) ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ (ODI Series) ಭಾರತ 1-2 ಅಂತರಲ್ಲಿ ಸರಣಿಯನ್ನ ಬಿಟ್ಟುಕೊಟ್ಟಿದ್ದು ಇದರ ಜೊತೆಗೆ ಸೂರ್ಯಕುಮಾರ್ ಯಾದವ್ (Suryakumar Yadav) ರವರು ಮೂರು ಪಂದ್ಯದಲ್ಲೂ ಕೂಡ ಶೂನ್ಯ ಸುತ್ತುವ ಮೂಲಕ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಈ ನಡುವೆ ಇದೀಗ ಭಾರತ ತಂಡದ (Team India) ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಸೂರ್ಯಕುಮಾರ್ ಯಾದವ್ ಅವರಿಗೆ ಕಿವಿಮಾತು ಹೇಳಿದ್ದು ಆಸ್ಟ್ರೇಲಿಯಾ ಎದುರಿನ ಈ ಮೂರು ಪಂದ್ಯಗಳ ಸರಣಿಯನ್ನು ಮರೆತು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಒಳ್ಳೆಯ ರನ್ ಗಳಿಸುವ ಮೂಲಕ ಏಕದಿನ ವಿಶ್ವಕಪ್ (ODI World Cup) ಟೂರ್ನಿಗೂ ಮುನ್ನ ಫಾರ್ಮ್‌ಗೆ ಮರಳಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ರವರು ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಕೂಡ ಗೋಲ್ಡನ್ ಡಕ್ (Golden Duck) ಆಗಿದ್ದು ನಿಜಕ್ಕೂ ಇದು ದುರಾದೃಷ್ಟವೇ ಸರಿ. ಅತ್ಯುತ್ತಮ ಬ್ಯಾಟರ್‌ಗಳು ಸಹ ಒಮ್ಮೊಮ್ಮೆ ಈ ರೀತಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಾರೆ ಎಂದು ಸುನಿಲ್ ಗವಾಸ್ಕರ್ ರವರು ಅಭಿಪ್ರಾಯಪಟ್ಟಿದ್ದು ಶ್ರೇಯಸ್ ಅಯ್ಯರ್ ರವರು ಗಾಯಗೊಂಡು ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದರು. ಈ ಕಾರಣದಿಂದಾಗಿ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸೂರ್ಯಕುಮಾರ್ ಯಾದವ್ ರಚರಿಗೆ ಸುವರ್ಣಾವಕಾಶ ಬಂದೊದಗಿದ್ದು ಆದರೆ ಸೂರ್ಯಕುಮಾರ್ ಯಾದವ್ ರವರು ಮೂರು ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕವಾಗಿ ನಿರಾಸೆ ಅನುಭವಿಸಿದರು. ಇನ್ನು ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗೋಲ್ಡನ್ ಡಕ್ (Golden Duck) ಆದ ಮೊದಲ ಭಾರತೀಯ ಬ್ಯಾಟರ್ ಎನ್ನುವ ಕುಖ್ಯಾತಿಗೂ ಕೂಡ ಸೂರ್ಯಕುಮಾರ್ ಯಾದವ್ ಪಾತ್ರರಾಗಿದ್ದಾರೆ.
ಇನ್ನು ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿರುವ ಸುನಿಲ್ ಗವಾಸ್ಕರ್ ರವರು ಹೌದು ಸೂರ್ಯಕುಮಾರ್ ಯಾದವ್ ಮೂರೂ ಪಂದ್ಯಗಳಲ್ಲೂ ಮೊದಲ ಎಸೆತದಲ್ಲೇ ಔಟ್ ಆಗಿದ್ದಾರೆ. ಎಲ್ಲಿ ಅವರು ತಪ್ಪು ಮಾಡಿದರು ಎಂದು ಹೇಳುವುದು ಕಷ್ಟವಾಗಿದ್ದು ಮೊದಲೆರಡು ಏಕದಿನ ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ ಎಸೆದ ಒಳ್ಳೆಯ ಚೆಂಡಿಗೆ ಸೂರ್ಯಕುಮಾರ್ ಯಾದವ್ ರವರು ವಿಕೆಟ್ ಒಪ್ಪಿಸಿದರು. ಅವರು ಮೊದಲ ಚೆಂಡನ್ನು ಎದುರಿಸುವಾಗ ಕೊಂಚ ಆತಂಕಕ್ಕೆ ಒಳಗಾಗಿದ್ದರು ಎನಿಸುತ್ತದೆ ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಪಂದ್ಯದ ವಿಶ್ಲೇಷಣೆ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸೂರ್ಯಕುಮಾರ್ ಯಾದವ್ ರವರು ಭಾರತ ಏಕದಿನ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುತ್ತಾರೋ ಅಥವಾ ಇಲ್ಲವೀ ಎನ್ನುವುದು ಅವರು ಐಪಿಎಲ್‌ನಲ್ಲಿ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವುದರ ಮೇಲೆ ನಿರ್ಧರಿತವಾಗಲಿದ್ದು ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಲಯ ಹೊಂದಿರುವ ಸೂರ್ಯಕುಮಾರ್ ಯಾದವ್ ರವರು ಏಕದಿನ ಕ್ರಿಕೆಟ್‌ನಲ್ಲಿ 23 ಏಕದಿನ ಪಂದ್ಯಗಳನ್ನಾಡಿ ಕೇವಲ 24ರ ಸರಾಸರಿಯಲ್ಲಿ 433 ರನ್ ಬಾರಿಸಿದ್ದಾರೆ. ನನ್ನ ಪ್ರಕಾರ, ಐಪಿಎಲ್‌ನಲ್ಲಿ ಯಾವ ರೀತಿ ಆಡುತ್ತಾರೆ ಎನ್ನುವುದರ ಮೇಲೆ ಅವರ ಸ್ಥಾನ ಏಕದಿನ ತಂಡದಲ್ಲಿ ನಿರ್ಧಾರವಾಗಲಿದೆ. ಹೌದು ಐಪಿಎಲ್ ಮುಗಿದ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಸೇರಿದಂತೆ ಕೆಲವು ಸರಣಿಗಳನ್ನಾಡಲಿದ್ದು ಆ ಎಲ್ಲಾ ಸರಣಿಗಳಲ್ಲಿ ಯಾವ ರೀತಿ ಆಡುತ್ತಾರೆ ಎನ್ನುವುದನ್ನು ಆಧರಿಸಿ ಅವರು ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ನಿರ್ಧಾರವಾಗಲಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ