Ziva Dhoni: ಅಪ್ಪ ಮ್ಯಾಚ್ ಗೆಲ್ಲುತ್ತಿದ್ದಂತೆ ಧೋನಿಯ ಮಗಳು ಮೈದಾನಕ್ಕೆ ಬಂದು ಮಾಡಿದ್ದೇನು ಗೊತ್ತಾ? ದೃಶ್ಯ ನೋಡಿದ ಎಲ್ಲರ ಕಣ್ಣಲ್ಲೂ ನೀರು.
ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ರವರು ನಿನ್ನೆ ನಡೆದಿರುವಂತಹ ಗುಜರಾತ್ ಅಭಿವೃದ್ಧಿದ ಪಂದ್ಯದಲ್ಲಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿ ಹಾಡಿರುವ 14 ಸೀಸನ್ ಗಳಲ್ಲಿ ಹತ್ತನೇ ಬಾರಿಗೆ ಫೈನಲ್ ತಲುಪುವ ಮೂಲಕ ಯಾರು ಮಾಡಲಾಗದಂತಹ ದಾಖಲೆಯನ್ನು 42ನೇ ವಯಸ್ಸಿನಲ್ಲಿ ಕೂಡ ಮಾಡಿದ್ದಾರೆ.
ಚೆನ್ನೈ ತಂಡ ಗೆಲುವಿನ ಸಂಭ್ರಮದಲ್ಲಿ ಇರುವುದಕ್ಕೆ ಮತ್ತೊಂದು ಕಾರಣವೆಂದರೆ ಆರಂಭಿಕ ಸಂದರ್ಭದಲ್ಲಿ ಚೆನ್ನೈ ತಂಡ ಖಂಡಿತವಾಗಿ ಲೀಗ್ ಹಂತದಲ್ಲಿ ಸೋಲನ್ನು ಕಾಣುವಂತಹ ತಂಡ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು. ಚೆನ್ನೈ ತಂಡದಲ್ಲಿ ಇರುವಂತಹ ದೊಡ್ಡ ದೊಡ್ಡ ಆಟಗಾರರೆಲ್ಲ ಇಂಜುರಿ ಕಾರಣದಿಂದಾಗಿ ತಂಡದಿಂದ ಹೊರ ಬರಬೇಕಾಗಿ ಬಂತು. ಹೀಗಿದ್ದರೂ ಕೂಡ ಇರುವಂತಹ ಆಟಗಾರರನ್ನೇ ಬಳಸಿಕೊಂಡು ಧೋನಿ (Dhoni) ರವರು ಚೆನ್ನ ತಂಡವನ್ನು ಇಂದು ಐಪಿಎಲ್ ಫೈನಲ್ ಗೆ ಕರೆದುಕೊಂಡು ಹೋಗಿರುವ ರೀತಿ ನಿಜಕ್ಕೂ ಕೂಡ ಸ್ಪೂರ್ತಿದಾಯಕ. ಇನ್ನು ಇದೇ ಮೈದಾನದಲ್ಲಿ ಮತ್ತೊಂದು ಎಮೋಷನಲ್ ಎನಿಸುವಂತಹ ಘಟನೆ ನಡೆದಿದೆ.
ಪಂದ್ಯ ಮುಗಿದ ನಂತರ ಧೋನಿ ಅವರ ಮಗಳಾಗಿರುವಂತಹ ಜೀವ ಧೋನಿ (Ziva Dhoni) ಅಪ್ಪನ ಕಡೆಗೆ ಭಾವಕಳಾಗಿ ಓಡಿಬಂದು ತಬ್ಬಿಕೊಂಡ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಇದನ್ನು ನೋಡಿರುವಂತಹ ಪ್ರತಿಯೊಬ್ಬರೂ ಕೂಡ ಸಂತೋಷದ ಕಣ್ಣೀರನ್ನು ಸುರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ವಿಡಿಯೋ ವೈರಲ್ ಆಗಿದ್ದು ಎಲ್ಲರೂ ಕೂಡ ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ.