Karnataka Times
Trending Stories, Viral News, Gossips & Everything in Kannada

Sourav Ganguly: ಈ ಬಾರಿ ಐಪಿಎಲ್ ಪಂದ್ಯಗಳಲ್ಲಿ ಈ 5 ಆಟಗಾರರದ್ದೇ ಹವಾ ಎಂದು ಗಂಗೂಲಿ, ಯಾರ್ಯಾರು ಗೊತ್ತೇ?

Advertisement

16ನೇ ಆವೃತ್ತಿಯ 2023ರ ಐಪಿಎಲ್ ಪಂದ್ಯಕ್ಕೆ ದಿನಗಣನೆ ಶುರುವಾಗಿದೆ ಐಪಿಎಲ್ ಟ್ರೋಫಿ (IPL Trophy) ಗಾಗಿ ಹಣಾಹಣಿ ನಡೆಯಲಿದೆ. ಐಪಿಎಲ್ ಪಟ್ಟ ಗೆದ್ದುಕೊಳ್ಳಲು ಎಲ್ಲಾ ಟೀಮ್ ಗಳು ಕೂಡ ಶತಾಯಗತಾಯ ಪ್ರಯತ್ನದಲ್ಲಿ ತೊಡಗಿವೆ ಪ್ರಾಕ್ಟೀಸ್ ಕೂಡ ಜೋರಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸೌರವ ಗಂಗೂಲಿ (Sourav Ganguly) ಈ ವರ್ಷ ಐಪಿಎಲ್ ನಲ್ಲಿ ಯಾವ ಆಟಗಾರರು ಮೋಡಿ ಮಾಡಲಿದ್ದಾರೆ ಎಂದು ಅವರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ. ಇಷ್ಟಕ್ಕೂ ಸೌರವ್ ಗಂಗೂಲಿ 100 ಮಾರ್ಕ್ಸ್ ನೀಡಿರುವ ಆ ಟಾಪ್ 5 ಆಟಗಾರರು ಯಾರು ಅಂದ್ರೆ..

ಸೂರ್ಯ ಕುಮಾರ್ ಯಾದವ್:

ಯಂಗ್ ಅಂಡ್ ಎನರ್ಜೆಟಿಕ್ ಆಗಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಇತ್ತೀಚಿಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಐಪಿಎಲ್ ಮ್ಯಾಚ್ ಆಡಳಿದ್ದಾರೆ. ಸೂರ್ಯ ಕುಮಾರ್ ಇದುವರೆಗೆ ಐಪಿಎಲ್ ನಲ್ಲಿ 123 ಪಂದ್ಯಗಳನ್ನು ಆಡಿದ್ದು 16 ಅರ್ಧ ಶತಕ ಭಾರಿಸಿ 2664 ರನ್ ತಮ್ಮದಾಗಿಸಿಕೊಂಡಿದ್ದಾರೆ.

ಪೃಥ್ವಿ ಶಾ:

ಸೌರವ್ ಗಂಗೂಲಿ ಸೂಚಿಸಿರುವ ಮತ್ತೊಂದು ಹೆಸರು ಪೃಥ್ವಿ ಶಾ (Prithvi Shaw) ಟಿ 20 ಪಂದ್ಯಗಳಲ್ಲಿ ಚೆನ್ನಾಗಿ ಆಡುವ ಶಕ್ತಿ ಇವರಲ್ಲಿದೆ ಎಂದು ಸೌರವ್ ಹೇಳಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಳಿರುವ ಪೃಥ್ವಿ ಶಾ 63 ಐಪಿಎಲ್ ಪಂದ್ಯಗಳನ್ನು ಆಡಿದ್ದು 12 ಅರ್ಥ ಶತಕ ಸಿಡಿಸಿದ್ದಾರೆ. 1588 ರನ್ ಗಳಿಸಿದ್ದಾರೆ.

ಉಮ್ರಾನ್ ಮಲಿಕ್:

ಐಪಿಎಲ್ ನಲ್ಲಿ 17 ಪಂದ್ಯಗಳನ್ನು ಆಡಿ 24 ವಿಕೆಟ್ಸ್ ಉರುಳಿಸಿದ್ದಾರೆ ಉಮ್ರಾನ್ ಮಲಿಕ್ (Umran Malik). ಇವರ ವೇಗದ ಬೌಲಿಂಗ್ ಎದುರಾಳಿ ಬ್ಯಾಟ್ಸ್ಮನ್ ಗಳಿಗೆ ಭಯ ಹುಟ್ಟಿಸುವುದು ಗ್ಯಾರಂಟಿ ಅಂತ ಸೌರವ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

ಶುಭಮನ್ ಗಿಲ್:

ಸೌರವ್ ಗಂಗೂಲಿ ಸೂಚಿಸಿರುವ ನಾಲ್ಕನೇ ಹೆಸರು ಶುಭಮನ್ ಗಿಲ್ (Shubman Gill). 74 ಐಪಿಎಲ್ ಪಂದ್ಯಗಳನ್ನು ಆಡಿರುವ ಗಿಲ್, 14 ಅರ್ಧ ಶತಕ ಸಿಡಿಸಿ 1900 ರನ್ಗಳನ್ನ ಪಡೆದಿದ್ದಾರೆ. ಕಳೆದ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ಪರವಾಗಿ ಗಿಲ್ ಆಡಿದ್ದರು.

ಋತುರಾಜ್ ಗಾಯಕ್ವಾಡ್:

ಸದ್ಯ ಐಪಿಎಲ್ ಕ್ರಿಕೆಟ್ ಮಂಡಳಿಯ ದೃಷ್ಟಿ ಋತುರಾಜ್ ಗಾಯಕ್ವಾಡ್ (Ruturaj Gaikwad) ಅವರ ಮೇಲಿದೆ. ಈವರಿಗೆ 36 ಐಪಿಎಲ್ ಪಂದ್ಯಗಳನ್ನು ಆಡಿದ ಇವರು ಹತ್ತು ಅರ್ಧ ಶತಕ ಮತ್ತು ಒಂದು ಶತಕ ಗಳಿಸಿದ್ದಾರೆ. ಸೌರವ್ ಗಂಗೂಲಿ ಅವರು ಋತುರಾಜ ಗಾಯಕ್ವಾಡ್ ಅವರ ಹೆಸರನ್ನು ಕೂಡ ಟಾಪ್ 5 ಯಂಗ್ ಆಟಗಾರರ ಹೆಸರಿನಲ್ಲಿ ಸೂಚಿಸಿದ್ದಾರೆ.

Leave A Reply

Your email address will not be published.