Karnataka Times
Trending Stories, Viral News, Gossips & Everything in Kannada

Pension: ಭಾರತೀಯ ಮಾಜಿ ಕ್ರಿಕೆಟಿಗರು ಪಡೆದುಕೊಳ್ಳುತ್ತಿರುವ ಪೆನ್ಷನ್ ಎಷ್ಟು ಗೊತ್ತಾ?

Advertisement

ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತವಾದ ಕ್ರಿಕೆಟ್ ಸಂಸ್ಥೆ ಯಾವುದು ಎಂದು ಕೇಳುವುದಾದರೆ ನಮಗೆ ಸಿಗುವಂತಹ ಮೊದಲ ಪ್ರಶ್ನೆ ಬಿಸಿಸಿಐ (BCCI). ಆದರೆ ಸಾಕಷ್ಟು ದಶಕಗಳ ಹಿಂದೆ ಇದೇ ಪ್ರಶ್ನೆಯನ್ನು ಕೇಳಿದರೆ ಅತ್ಯಂತ ಬಡ ಕ್ರಿಕೆಟ್ ಸಂಸ್ಥೆಗಳಲ್ಲಿ ಭಾರತೀಯ ಕ್ರಿಕೆಟ್ ಬೋರ್ಡಿನ ಹೆಸರು ಕೇಳಿ ಬರುತ್ತಿತ್ತು.

1983 ಒಂದು ವಿಶ್ವಕಪ್ ವಿಜಯ ಭಾರತೀಯ ಕ್ರಿಕೆಟ್ ತಂಡವನ್ನು ಭೂಮಿಯಿಂದ ಚಂದ್ರನ ಸ್ಥಾನಕ್ಕೆ ನೆಗೆಯುವಂತೆ ಮಾಡಿತು. ವರ್ಷದಿಂದ ವರ್ಷಕ್ಕೆ ಬಿಸಿಸಿಐ ತನ್ನ ಆದಾಯವನ್ನು ಹೆಚ್ಚಿಸಿಕೊಂಡು ಬಂದ ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚುವಂತದ್ದಾಗಿದೆ. ಅದರಲ್ಲೂ ವಿಶೇಷವಾಗಿ ಭಾರತೀಯ ಕ್ರಿಕೆಟ್ ಬೋರ್ಡ್ ಆಗಿರುವಂತಹ ಬಿಸಿಸಿಐ ನಿಜಕ್ಕೂ ಇಂದು ವಿಶ್ವದ ಕ್ರಿಕೆಟ್ ಜಗತ್ತಿನ ದೊಡ್ಡಣ್ಣ ಆಗಿದೆ ಎಂದರೆ ಅದಕ್ಕೆ ಕಾರಣ ಐಪಿಎಲ್ ನಿಂದ ಹರಿದು ಬರುವ ಹಣ.

ಹೌದು ಸುನಿಲ್ ಗಾವಸ್ಕರ್ (Sunil Gavaskar) ಅವರಿಂದ ಪ್ರಾರಂಭಿಸಿ ಇಂದಿನ ವಿರಾಟ್ ಕೊಹ್ಲಿ (Virat Kohli) ಅವರವರೆಗೂ ಕೂಡ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ಕ್ರಿಕೆಟ್ ಸೂಪರ್ ಸ್ಟಾರ್ ಗಳನ್ನು ನೋಡಿದೆ. ಭಾರತದಲ್ಲಿ ಸಾಮಾನ್ಯ ಜನರು ಸಿನಿಮಾ ಬಿಟ್ಟರೆ ಹೆಚ್ಚಾಗಿ ಆರಾಧಿಸುವುದೇ ಕ್ರಿಕೆಟನ್ನು. ಸಿನಿಮಾ ಸೆಲೆಬ್ರಿಟಿ ಗಳಿಗಿಂತ ಹೆಚ್ಚಾಗಿ ಕ್ರಿಕೆಟಿಗರನ್ನು ದೇವರಂತೆ ಪೂಜಿಸುತ್ತಾರೆ. ಇದೇ ಕಾರಣಕ್ಕಾಗಿ ಕ್ರಿಕೆಟ್ ಇಂದು ಭಾರತದ ಮನೆ ಮನೆಯಲ್ಲಿ ಕೂಡ ಜನಪ್ರಿಯವಾಗಿದೆ. ಈ ಜನಪ್ರಿಯತೆ ಹಾಗೂ ಜನರ ಬೇಡಿಕೆಯ ಕ್ರಿಕೆಟ್ ಇಂದು ಶ್ರೀಮಂತ ಕ್ರೀಡೆಯಾಗಿ ಉದ್ಭವವಾಗುವಂತೆ ಮಾಡಿರೋದು. ಇನ್ನು ಇಷ್ಟೊಂದು ಸೂಪರ್ ಸ್ಟಾರ್ ಹಾಗೂ ದೊಡ್ಡ ಮಟ್ಟದ ಸೆಲೆಬ್ರಿಟಿಗಳನ್ನು ಹೊಂದಿರುವಂತಹ ದೇಶದ ಪ್ರತಿಯೊಂದು ಸಂಸ್ಥೆಗಳನ್ನು ಕೇಂದ್ರದ ರೀತಿಯಲ್ಲಿ ಮೈನ್ಟೈನ್ ಮಾಡುವಂತಹ ಶಕ್ತಿಯನ್ನು ಹೊಂದಿರುವುದು ಬಿಸಿಸಿಐ (BCCI).

1928 ರಲ್ಲಿ ಪ್ರಾರಂಭ ಆಗುವಂತಹ ಈ ಸಂಸ್ಥೆ ಬಡ ರಾಷ್ಟ್ರದ ಬಡ ಕ್ರಿಕೆಟ್ ಸಂಸ್ಥೆಯಾಗಿ ಕಾಣಿಸಿಕೊಂಡಿತ್ತು. ಇಂದು ದೇಶ ವೇಗವಾಗಿ ಬೆಳೆಯುತ್ತಿರುವಂತಹ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ ಅದೇ ರೀತಿಯಲ್ಲಿ ಬಿಸಿಸಿಐ ಕೂಡ ಇಡಿ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ಈ ಬೆಳೆದು ನಿಂತಿರುವ ಕ್ರಿಕೆಟ್ ಸಂಸ್ಥೆ ಈಗ ಸದ್ಯಕ್ಕೆ ಆಡುತ್ತಿರುವ ಕ್ರಿಕೆಟಗರಿಗೆ ವರ್ಷಕ್ಕೆ ಎಷ್ಟು ಹಣ ಸಂಬಳದ ರೂಪದಲ್ಲಿ ನೀಡುತ್ತದೆ ಎಂಬುದು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಆದರೆ ಈಗಾಗಲೇ ಆಟವಾಡಿ ನಿವೃತ್ತಿಯನ್ನು ಪಡೆದುಕೊಂಡಿರುವಂತಹ ಕ್ರಿಕೆಟಿಗರಿಗೆ ಯಾವ ರೀತಿಯಲ್ಲಿ ಸಂಭಾವನೆಯನ್ನು ನೀಡುತ್ತದೆ ಎಂಬುದನ್ನು ಇವತ್ತಿನ ಈ ಆರ್ಟಿಕಲ್ ನಲ್ಲಿ ಸಂಪೂರ್ಣವಾಗಿ ತಿಳಿಯುವಂತಹ ಪ್ರಯತ್ನವನ್ನು ಮಾಡೋಣ ಬನ್ನಿ. ಖಂಡಿತವಾಗಿ ಇದು ನಿಮ್ಮ ಕ್ರಿಕೆಟಿಂಗ್ ಜ್ಞಾನವನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

First Class Cricket ನಿಂದ ನಿವೃತ್ತಿ ಹೊಂದಿರುವಂತಹ ಕ್ರಿಕೆಟಿಗರಿಗೆ ಈ ಮೊದಲು 15000 ಪ್ರತಿ ತಿಂಗಳಿಗೆ Pension ಸಿಗುತ್ತಿತ್ತು ಆದರೆ ಅದನ್ನು ಈಗ 30,000 ರೂಪಾಯಿಗೆ ಹೆಚ್ಚಿಸಲಾಗಿದೆ. ಇನ್ನು ಭಾರತೀಯ ಕ್ರಿಕೆಟ್ ತಂಡದ ಟೆಸ್ಟ್ ಆಟಗಾರರು ನಿವೃತ್ತಿ ಹೊಂದಿರುವವರಿಗೆ 37,500 ಸಿಗುತ್ತಿತ್ತು ಅವರಿಗೆ 60 ಸಾವಿರ ರೂಪಾಯಿ ಹೆಚ್ಚಿಸಲಾಗಿದೆ. ಯಾರಿಗೆಲ್ಲ ಐವತ್ತು ಸಾವಿರ ರೂಪಾಯಿ ಪೆನ್ಷನ್ ಸಿಗುತ್ತಿತ್ತು ಅವರ Pension ಹಣವನ್ನು 70000 ರೂಪಾಯಿಗೆ ಏರಿಸಲಾಗಿದೆ.

ಮಹಿಳಾ ಅಂತರಾಷ್ಟ್ರೀಯ ಆಟಗಾರ್ತಿಯರು ಪೆನ್ಷನ್ (Pension) ರೂಪದಲ್ಲಿ ಇದುವರೆಗೂ ಪ್ರತಿ ತಿಂಗಳಿಗೆ 30000 ಹಣವನ್ನು ಪಡೆದುಕೊಳ್ಳುತ್ತಿದ್ದರು ಆದರೆ ಅದನ್ನು ಈಗ 52500 ರೂಪಾಯಿ ಗಳಿಗೆ ಹೆಚ್ಚಿಸಲಾಗಿದೆ. 2003 ಕ್ಕಿಂತ ಮುಂಚೆ ರಿಟೈರ್ ಆಗಿರು ಮೊದಲ ದರ್ಜೆಯ ಆಟಗಾರರು 22500 ಪಡೆದುಕೊಳ್ಳುತ್ತಿದ್ದರು ಆದರೆ ಅವರ ಪೆನ್ಷನ್ (Pension) ಹಣವನ್ನು ಈಗ 45,000 ರೂಪಾಯಿ ಗಳಿಗೆ ಹೆಚ್ಚಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. BCCI ಕೇವಲ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಮಾತ್ರವಲ್ಲದೆ ಜವಾಬ್ದಾರಿಯುತ ಕ್ರಿಕೆಟ್ ಸಂಸ್ಥೆಯಾಗಿ ಕೂಡ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಿಕೊಳ್ಳುವ ವಿಚಾರವಾಗಿದೆ.

Leave A Reply

Your email address will not be published.