Karnataka Times
Trending Stories, Viral News, Gossips & Everything in Kannada

Virat Kohli: ವಿರಾಟ್ ಕೊಹ್ಲಿ ಅವರ ನಂತರ ಅವರ ಸ್ಥಾನವನ್ನು ತುಂಬಬಲ್ಲ ಏಕೈಕ ಆಟಗಾರ ಇವರೊಬ್ರೆ!

ಭಾರತೀಯ ಕ್ರಿಕೆಟ್ ತಂಡ (Indian Cricket Team) ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಫಲತೆಗಳಿಂದ ಕುಂಠಿತಗೊಂಡಿದೆ ಎಂದರು ಕೂಡ ತಪ್ಪಾಗಲಾರದು. ಒಂದು ಲೆಕ್ಕದಲ್ಲಿ ಹೇಳುವುದಾದರೆ ರೋಹಿತ್ ಶರ್ಮ ಅವರ ಕ್ಯಾಪ್ಟನ್ ಸಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಮೊದಲಿನ ಹಾಗೆ ಅಗ್ರೆಸ್ಸಿವ್ ಆಗಿ ಆಡ್ತಾ ಇಲ್ಲ ಅನ್ನೋದು ಸ್ಪಷ್ಟವಾಗಿ ಕಂಡುಬರುತ್ತಿದೆ. ಖಂಡಿತವಾಗಿ ಕಳೆದ ಎರಡು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡ ಸಂಪೂರ್ಣವಾದ ಕಳಪೆ ಪ್ರದರ್ಶನ ನೀಡುತ್ತಿದೆ ಎನ್ನುವುದು ಆಟಗಾರರ ಪ್ರದರ್ಶನದಿಂದಲೇ ಕಂಡುಬರುತ್ತಿದೆ.

Advertisement

ಅದರಲ್ಲೂ ವಿಶೇಷವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ 15 ವರ್ಷಗಳಿಂದಲೂ ಕೂಡ ಭಾರತೀಯ ಕ್ರಿಕೆಟ್ ತಂಡದಲ್ಲಿ ಪ್ರತಿಯೊಂದು ಸಂದಿಗ್ದ ಸಂದರ್ಭದಲ್ಲಿ ಆಪದ್ಬಾಂಧವನಾಗಿ ಕಾಣಿಸಿಕೊಳ್ಳುವುದು ವಿರಾಟ್ ಕೊಹ್ಲಿ (Virat Kohli) ಅನ್ನುವಂತಹ ಒಬ್ಬನೇ ಒಬ್ಬ ಆಟಗಾರ. ಪ್ರತಿಯೊಂದು ಕಷ್ಟದ ಸಂದರ್ಭಗಳಲ್ಲಿ ಕೂಡ ವಿರಾಟ್ ಕೊಹ್ಲಿ (Virat Kohli) ಒಬ್ಬರ ಬ್ಯಾಟ್ ಮಾತ್ರ. ಪ್ರತಿ ಬಾರಿ ಕೂಡ ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ಮಾಡೋದ್ರಲ್ಲಿ ವಿರಾಟ್ ಕೊಹ್ಲಿ ಅವರ ಹೆಸರು ಮಾತ್ರ ಕೇಳಿ ಬರುತ್ತೆ ಆದರೆ ಉಳಿದ ಆಟಗಾರರು ಏನು ಮಾಡ್ತಾ ಇದ್ದಾರೆ ಅನ್ನೋದೇ ಕ್ರಿಕೆಟ್ ಅಭಿಮಾನಿಗಳಿಗೆ ಈಗ ತಲೆದೊರುತ್ತಿರುವ ದೊಡ್ಡ ಪ್ರಶ್ನೆಯಾಗಿದೆ.

Advertisement

ಸಾಕಷ್ಟು ಬಾರಿ ಆಟಗಾರರ ನಡುವೆ ತಂಡದ ನಾಯಕತ್ವ ಚೇಂಜ್ ಆಗ್ತಾ ಇದ್ದರೂ ಕೂಡ ತಂಡದ ಫಲಿತಾಂಶ ಮಾತ್ರ ಸೇಮ್ ಆಗಿದೆ. ಅದರಲ್ಲಿ ವಿಶೇಷವಾಗಿ ಐಸಿಸಿ ಟೂರ್ನಮೆಂಟ್ಗಳಲ್ಲಿ ಭಾರತೀಯ ತಂಡದ ಸಾಧನೆ ನಿಜಕ್ಕೂ ಕೂಡ ಅತ್ಯಂತ ಕಳಪೆಯಾಗಿದೆ. ಅದರಲ್ಲೂ ಈ ಬಾರಿ ವಿಶ್ವಕಪ್ (WC 2023) ಭಾರತದಲ್ಲಿ ನಡೆಯುತ್ತಿರುವುದು ಮತ್ತೊಂದು ಸಂತೋಷ ಹಾಗೂ ಬೇಸರ ಎರಡು ವಿಚಾರದ ಫಲಿತಾಂಶವನ್ನು ಕೂಡ ನೀಡುತ್ತಿದೆ. ಇದರಲ್ಲಿ ನಾಯಕತ್ವದ ತಪ್ಪಿದೆಯಾ ಅಥವಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ರವರ ಮಾರ್ಗದರ್ಶನದಲ್ಲಿ ಏನಾದರೂ ಕೊರತೆ ಇದೆಯಾ ಅನ್ನೋದೇ ತಿಳಿದು ಬರ್ತಿಲ್ಲ.

Advertisement

ಇನ್ನು ಎಲ್ಲದಕ್ಕಿಂತ ಪ್ರಮುಖವಾಗಿ ವಿರಾಟ್ ಕೊಹ್ಲಿ ಅವರು ಕೂಡ ಇನ್ನೂ ಹೆಚ್ಚು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡುತ್ತಾರೆ ಅನ್ನೋದು ಕೂಡ ಹೇಳಕ್ಕಾಗಲ್ಲ ಯಾಕೆಂದರೆ ಇದು ಅವರ ಕೊನೆಯ ವಿಶ್ವಕಪ್ ಎನ್ನುವಂತಹ ಮಾತುಗಳು ಕೂಡ ಕೇಳಿ ಬರುತ್ತಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಅವರು ಕೂಡ ನಿವೃತ್ತಿಯನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಂದರ್ಭದಲ್ಲಿ ಅವರ ಸ್ಥಾನವನ್ನು ಯಾರು ತುಂಬಬಲ್ಲರು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಅದರ ಬಗ್ಗೆ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ನಿಮಗೆ ತಿಳಿಸಲು ಹೊರಟಿದ್ದೇವೆ.

Advertisement

ಹೌದು ನಾವ್ ಮಾತಾಡ್ತಿರೋದು ಸೂರ್ಯಕುಮಾರ್ ಯಾದವ್ (Suryakumar Yadav) ರವರ ಬಗ್ಗೆ. ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಟಿ ಟ್ವೆಂಟಿ ಕ್ರಿಕೆಟ್ ಇಂಟರ್ನ್ಯಾಷನಲ್ ಫಾರ್ಮೆಟ್ ನಲ್ಲಿ ಭಾರತ ಕ್ರಿಕೆಟ್ ತಂಡ ಹೊಂದಿರುವಂತಹ ಅತ್ಯಂತ ನಂಬಿಕಸ್ಥ ಹಾಗೂ ನಂಬರ್ ಒನ್ ಬ್ಯಾಟ್ಸ್ಮನ್ ಆಗಿದ್ದಾರೆ. ಟಿ ಟ್ವೆಂಟಿ ಫಾರ್ಮೆಟ್ ನಲ್ಲಿ ಖಂಡಿತವಾಗಿ ನೀವು ಸೂರ್ಯಕುಮಾರ್ ಯಾದವ್ ಅವರನ್ನು ನಂಬಬಹುದಾಗಿದೆ.

 

 

ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಸ್ವಲ್ಪಮಟ್ಟಿಗೆ ತಮ್ಮ ಕ್ರಿಕೆಟ್ ಕೌಶಲ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿ ಕೂಡ ಅವರು ಕೆಲವೇ ವರ್ಷಗಳಾಗಿದ್ದು ಮುಂದಿನ ದಿನಗಳಲ್ಲಿ ಖಂಡಿತವಾಗಿ ವಿರಾಟ್ ಕೊಹ್ಲಿ ಅವರ ಸ್ಥಾನವನ್ನು ಸಂಪೂರ್ಣ ಯಶಸ್ವಿಯಾಗಿ ತುಂಬಬಲ್ಲಂತಹ ಕ್ರಿಕೆಟ್ ಸಾಮರ್ಥ್ಯವನ್ನು ಸೂರ್ಯಕುಮಾರ್ ಯಾದವ್ ಹೊಂದಿದ್ದಾರೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Leave A Reply

Your email address will not be published.