MS Dhoni: ಕೊನೆಗೊಳ್ಳಲಿದ್ಯಾ? ಧೋನಿ-CSK ಸಂಬಂಧ? 2024ರ ಐಪಿಎಲ್ ಮೊದಲೇ ಐದು ಆಟಗಾರರ ಹೆಸರನ್ನು ಕೈಬಿಡಲಿದೆ ಫ್ರಾಂಚೈಸಿ!
ಇಂಡಿಯನ್ ಪ್ರೀಮಿಯರ್ ಲೀಗ್ 2023 ಇತ್ತೀಚಿಗಷ್ಟೇ ಮುಗಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಕೈಗೆತ್ತಿಕೊಂಡು ಬೀಗಿದ್ದು ಆಗಿದೆ. ಈಗ ಮತ್ತೆ 2024ರ ಐಪಿಎಲ್ ಗಾಗಿ ತಯಾರಿಗಳು ಕೂಡ ಟೀಮ್ ಇಂಡಿಯಾ ಮಾಡಿಕೊಳ್ಳುತ್ತಿದೆ. ಈ ಬಾರಿ 2024ರ ಐಪಿಎಲ್ ಬಗ್ಗೆ ಮಾತನಾಡುವುದಾದರೆ ಕಣ್ಣೇದುರಿಗೆ ಬರುವ ಮೊದಲ ತಂಡವೇ ಚೆನ್ನೈ ಸೂಪರ್ ಕಿಂಗ್ಸ್. ಈ ಬಾರಿ 2024ರ ಐಪಿಎಲ್ ಮ್ಯಾಚ್ ನಲ್ಲಿ ಸಿ ಎಸ್ ಕೆ ತಂಡದಲ್ಲಿ ದೊಡ್ಡ ಬದಲಾವಣೆಗಳು ಆಗುವ ಸಾಧ್ಯತೆ ಇದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಗಲಿರುವ ಬದಲಾವಣೆಗಳು ಏನು?
ಕೆಲವು ವರ್ಷಗಳಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಕಿರೀಟವನ್ನು ಮೂಡಿಗೆರೆಸಿಕೊಂಡು ಬಂದಿದೆ. 2023ರ ಐಪಿಎಲ್ ನಲ್ಲಿ ಸಿಎಸ್ಕೆ ಚಾಂಪಿಯನ್ ಆಗಿ ಹೊರ ಬಿದ್ದಿತ್ತು. ಇದೀಗ 2024ರಲ್ಲಿಯೂ ಕೂಡ ಟ್ರೋಫಿ ಕೈಗೆತ್ತಿಕೊಳ್ಳುವುದಕ್ಕೆ ಈಗಿನಿಂದಲೇ ಸಿ ಎಸ್ ಕೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತದೆ ಅದರಲ್ಲಿ ಮೊಟ್ಟಮೊದಲನೆಯದಾಗಿ ಯಾರು ಚೆನ್ನಾಗಿ ಆಡುತ್ತಿಲ್ಲವೋ ಕೆಟ್ಟ ಫಾರ್ಮ್ ನಲ್ಲಿ ಇದ್ದರೋ ಅಂತಹ ಆಟಗಾರರನ್ನು ಕೈ ಬಿಡಲು ತಂಡ ನಿರ್ಧರಿಸಿದೆ.
ಮುಂದಿನ ಐಪಿಎಲ್ ನಲ್ಲಿ ಇಲ್ಲ ಧೋನಿ?
ಇದು ಸಿ ಎಸ್ ಕೆ ತಂಡಕ್ಕೆ ದೊಡ್ಡ ಆಘಾತವಾಗಬಹುದು. ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಐಪಿಎಲ್ ನಿಂದ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಹಾಗಾಗಿ ಅವರು 2024ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಸಾಧ್ಯತೆಗಳು ಕಡಿಮೆ. ಇಲ್ಲಿಯವರೆಗೆ ಧೋನಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಈಗ ಮೊಣಕಾಲಿನ ಗಾಯದಿಂದಾಗಿ ಧೋನಿ ಈ ಋತುವಿನಲ್ಲಿ ಸರಿಯಾಗಿ ಆಟವಾಡಲು ಸಾಧ್ಯವಾಗಿಲ್ಲ. ಈಗಾಗಲೇ ಮೊಣಕಾಲು ಶಸ್ತ್ರ ಚಿಕಿತ್ಸೆಗೂ ಒಳಗಾಗಿರುವ ಧೋನಿ 2024ರ ಐಪಿಎಲ್ ಆಡುವ ಸಾಧ್ಯತೆಗಳು ಬಹಳ ಕಡಿಮೆ. ಆದರೆ ಸಿಎಸ್‌ಕೆ ಖಂಡಿತ ಕೋಚ್ ಅಥವಾ ಮಾರ್ಗದರ್ಶಕರಾಗಿ ಧೋನಿ ಮುಂದುವರೆಯಬಹುದು.
ಈ 5 ಆಟಗಾರನ್ನು ಕೈಬಿದಲಿದ್ಯಾ CSK?
2022 ರಲ್ಲಿ ಐಪಿಎಲ್ ನಲ್ಲಿ 9ನೇ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ 2023ರಲ್ಲಿ ಎರಡನೇ ಸ್ಥಾನಕ್ಕೆ ಏರಿತು. ಸಿಎಸ್‌ಕೆ ಒಟ್ಟು 14 ಪಂದ್ಯಗಳನ್ನು ಆಡಿ 8 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದೆ. ಈ ಸಂದರ್ಭದಲ್ಲಿ ಕೆಲವು ಬ್ಯಾಟ್ಸ್ ಮ್ಯಾನ್ ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಹಾಗಾಗಿ ಮುಂದಿನ ಐಪಿಎಲ್ ನಲ್ಲಿ ಈ ಆಟಗಾರರು ಮುಂದುವರೆಯುವ ಸಾಧ್ಯತೆ ಇದೆ.
ಅದರಲ್ಲಿ ಮುಖ್ಯವಾಗಿ 2023ರ ಐಪಿಎಲ್ ನಲ್ಲಿ ಸಿಎಸ್‌ಕೆ ತಂಡಕ್ಕೆ ಬೆನ್ ಸ್ಟ್ರೋಕ್ ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಲಾಗಿತ್ತು. ಆದರೆ ಅವರು ಗಾಯಗೊಂಡಿದ್ದು ಜೊತೆಗೆ ಕಳಪೆ ಫಾರ್ಮ್ ನಿಂದಾಗಿ ಹೊರಗೆ ಬೇಕಾಯಿತು ಈ ಕಾರಣಕ್ಕೆ ಬೆನ್ ಸ್ಕ್ಟ್ರೋಕ್ ಅವರನ್ನು 2024ರ ಐಪಿಎಲ್ ನಿಂದ ತಂಡ ಕೈಬಿಡುವ ಸೂಚನೆ ಇದೆ. ಇದರ ಜೊತೆಗೆ ಸಿಮರ್ಜಿತ್ ಸಿಂಗ್, ಪ್ರಶಾಂತ್ ಸೋಲಂಕಿ, ನಿಶಾಂತ್ ಸಂಧು ಹಾಗೂ ಅಜಯ್ ಮಂಡಲ್ ಅವರನ್ನು ಕೂಡ ತಂಡದಿಂದ ಕೈಬಿಡುವ ಸಾಧ್ಯತೆಗಳು ಹೆಚ್ಚಾಗಿವೆ.