Karnataka Times
Trending Stories, Viral News, Gossips & Everything in Kannada

Harbhajan Singh: ಏಷ್ಯಾ ಕಪ್ ನಲ್ಲಿ ಚಾನ್ಸ್ ಸಿಗದೇ ಇರೋ ಈ ಆಟಗಾರರನ್ನು ವರ್ಲ್ಡ್ ಕಪ್ ಗೆ ಆಯ್ಕೆ ಮಾಡಲೇಬೇಕು ಎಂದ ಹರ್ಭಜನ್ ಸಿಂಗ್

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಗಸ್ಟ್ 30 ರಿಂದ ಪ್ರಾರಂಭವಾಗಲಿರುವಂತಹ ಏಷ್ಯಾಕಪ್ಗಾಗಿ (Team India For Asia Cup) ತಂಡವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ತಂಡದಲ್ಲಿ ಈಗಾಗಲೇ ಯಾರೆಲ್ಲ ಇದ್ದಾರೆ ಎನ್ನುವ ಮಾಹಿತಿ ನಿಮಗೆ ಅಧಿಕೃತವಾಗಿ ತಿಳಿದಿದೆ ಆದರೆ ಯಾರನ್ನೆಲ್ಲ ತೆಗೆದು ಹಾಕಿದ್ದಾರೆ ಎನ್ನುವಂತಹ ಮಾಹಿತಿ ಕೂಡ ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಅವಶ್ಯಕ. ಇದೇ ವಿಚಾರದ ಬಗ್ಗೆ ಅಸಹನೀಯ ರೀತಿಯಲ್ಲಿ ಹರ್ಭಜನ್ ಸಿಂಗ್ (Harbhajan Singh) ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದು ಒಬ್ಬ ಆಟಗಾರರನ್ನು ವಿಶ್ವಕಪ್ ತಂಡದಲ್ಲಿ ಹಾಕಿಸಿಕೊಳ್ಳಲೇಬೇಕು ಎಂಬುದಾಗಿ ಪಟ್ಟು ಹಿಡಿದುಕೊಳ್ಳುತ್ತಿದ್ದಾರೆ.

Advertisement

ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ಭಾರತೀಯ ಕ್ರಿಕೆಟ್ ತಂಡ ಕಳಪೆ ಕ್ರಿಕೆಟ್ ಪ್ರದರ್ಶನವನ್ನು ನೀಡುತ್ತಿದ್ದು ಇದರ ಕುರಿತಂತೆ ಸಾಕಷ್ಟು ಮಾಜಿ ಕ್ರಿಕೆಟಿಗರು ಕೂಡ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ವಿಶೇಷವಾಗಿ ಬೌಲಿಂಗ್ ವಿಭಾಗದಲ್ಲಿ ಸಂಪೂರ್ಣವಾದ ಕಳಪೆ ಪ್ರದರ್ಶನ ನೀಡುತ್ತಿರುವುದು ಹಾಗೂ ಈ ಬಾರಿ ವಿಶ್ವಕಪ್ ಕೂಡ ಭಾರತದಲ್ಲಿ ಇರುವುದು ಎರಡು ಕೂಡ ತಲೆನೋವಿನ ವಿಚಾರವಾಗಿದೆ ಎಂಬುದಾಗಿ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಕೂಡ ಬೇಸರದಲ್ಲಿ ಮಾತನಾಡುತ್ತಾರೆ.

Advertisement

ಈಗಾಗಲೇ ಏಷ್ಯಾ ಕಪ್ ತಂಡವನ್ನು ಪ್ರಕಟಿಸಿರುವುದು ಪ್ರತಿಯೊಬ್ಬರಿಗೂ ಕೂಡ ಖುಷಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಕೆಲವೊಂದು ಪ್ರಮುಖ ಆಟಗಾರರನ್ನು ಕೂಡ ತಂಡದಿಂದ ಹೊರಗಿಟ್ಟಿರುವುದು ಹಾಗೂ ಇದೇ ತಂಡವನ್ನು ಬಹುತೇಕ ವಿಶ್ವಕಪ್ ಗೆ ಆಯ್ಕೆ ಮಾಡುವುದು ಖಚಿತವಾಗಿರುವುದು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಬೇಸರವನ್ನು ಉಂಟುಮಾಡಿದೆ.

Advertisement

ಅದರಲ್ಲೂ ವಿಶೇಷವಾಗಿ ವಿಶ್ವಕಪ್ ವಿಜೇತ ತಂಡದ ಸದಸ್ಯ ಆಗಿರುವಂತಹ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಒಬ್ಬ ಆಟಗಾರನನ್ನು ಮಾತ್ರ ಈ ಬಾರಿಯ ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಸೇರಿಸಿಕೊಳ್ಳಲೇಬೇಕು ಎನ್ನುವಂತಹ ಖಡ ಖಂಡಿತ ಹೇಳಿಕೆಯನ್ನು ನೀಡಿದ್ದಾರೆ. ಹಾಗಿದ್ದರೆ ಭಜ್ಜಿ ಪ್ರಕಾರ ಟೀಮ್ ಇಂಡಿಯಾದಲ್ಲಿ, ವರ್ಲ್ಡ್ ಕಪ್ ಟೀಮ್ (World Cup Team) ಗೆ ಯಾರಿರಬೇಕು ಎಂಬುದನ್ನು ತಿಳಿಯೋಣ ಬನ್ನಿ. ಇನ್ನು ಭಜ್ಜಿ ಆಯ್ಕೆ ಮಾಡಿರುವುದು ಕೂಡ ತನ್ನಂತೆ ಒಬ್ಬ ಸ್ಪಿನ್ನರನ್ನು.

 

Advertisement

 

ಹೌದು ಹರ್ಭಜನ್ ಸಿಂಗ್ ರವರ ಪ್ರಕಾರ ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಇರುವಂತಹ ಅತ್ಯಂತ ಪ್ರಭಾವಶಾಲಿ ಸ್ಪಿನ್ನರ್ ಆಗಿರುವ ಯಜುವೇಂದ್ರ ಚಹಾಲ್ (Yuzvendra Chahal) ಅವರನ್ನು ವಿಶ್ವ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಸೇರಿಸಿಕೊಳ್ಳಲೇಬೇಕು ಯಾಕೆಂದರೆ ಭಾರತದಲ್ಲಿ ಇರುವಂತಹ ಸದ್ಯದ ಮಟ್ಟಿಗಿನ ರಿಯಲ್ ಸ್ಪಿನ್ನರ್ ಅಂದ್ರೆ ಅದು ಚಹಾಲ್ ಮಾತ್ರ ಅನ್ನೋದಾಗಿ ಟರ್ಬನೇಟರ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಏಷ್ಯಾಕಪ್ ನಲ್ಲಿ ತಮ್ಮನ್ನು ತಂಡದಿಂದ ಹೊರಗೆ ಹಾಕಿರುವುದಕ್ಕೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚಹಾಲ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವುದನ್ನು ನೀವು ಇತ್ತೀಚಿಗಷ್ಟೇ ನೋಡಿರಬಹುದು.

Leave A Reply

Your email address will not be published.