Women’s IPL 2023: ಮೊದಲ ಐಪಿಎಲ್ ಗೆದ್ದ ರಾಜಸ್ಥಾನ್ ರಾಯಲ್ಸ್‌ಗಿಂತ ಹೆಚ್ಚು ಹಣ ಗಳಿಸಿದ ಮಹಿಳಾ ಐಪಿಎಲ್ ಗೆದ್ದ ತಂಡ
ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ಮೊದಲ ಆವೃತ್ತಿಯ ಕೊನೆಯ ಕ್ಷಣ ಅದ್ಭುತವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವೆ ಹಣಾ ಹಣಿ ನಡೆದಿತ್ತು. ಮಹಿಳಾ ಐಪಿಎಲ್ (Women’s IPL) ನಲ್ಲಿಯೂ ಕೂಡ ರಾಯಲ್ ಚಾಲೆಂಜರ್ಸ್ (Royal Challengers) ತಂಡ ನಿರಾಸೆಯನ್ನು ಉಂಟುಮಾಡಿದೆ. ಮುಂಬೈ ಇಂಡಿಯನ್ಸ್ (Mumbai Indians) ಡಬ್ಲ್ಯೂ ಪಿ ಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
WPL 2023ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಡಬ್ಲ್ಯೂಪಿಎಲ್ ವಿಜೇತ ತಂಡವಾಗಿ ಹೊರ ಬಿದ್ದಿದ್ದು, ಭರ್ಜರಿ ಹಣ ಗಳಿಕೆ ಮಾಡಿದೆ. ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ನ ಬೆಲೆ 10 ಕೋಟಿ ರೂಪಾಯಿಗಳು. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಅನ್ನು ಸೋಲಿಸುವುದರ ಮೂಲಕ ಮುಂಬೈ ಇಂಡಿಯನ್ಸ್ (Mumbai Indians) ಫೈನಲ್ ಪಂದ್ಯ ಆಡಿ ಈ ದೊಡ್ಡ ಮೊತ್ತದ ಹಣವನ್ನು ತಮ್ಮದಾಗಿಸಿಕೊಂಡಿದೆ. ಡಬ್ಲ್ಯೂಪಿಎಲ್ ಟ್ರೋಫಿ ಗೆದ್ದವರಿಗೆ 6 ಕೋಟಿ ರೂಪಾಯಿ ರನ್ನರ್ ಅಪ್ ತಂಡಕ್ಕೆ ಮೂರು ಕೋಟಿ ಹಾಗೂ ಮೂರನೇ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ (UP Warriors) ಗೆ ಒಂದು ಕೋಟಿ ಬಹುಮಾನ ನೀಡಲಾಗಿದೆ.
ಈ ಸಮಯದಲ್ಲಿ ಮೊದಲ ಐಪಿಎಲ್ ಸೀಸನ್ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಕ್ಕೆ ಸಿಕ್ಕಿದ್ದು ಕೇವಲ 4.8 ಕೋಟಿ ಮಾತ್ರ. ಆದರೆ ಮಹಿಳಾ ಪ್ರೀಮಿಯರ್ ಅಲ್ಲಿ ಮೊದಲ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರು ಕೋಟಿ (Six Crores) ರೂಪಾಯಿಗಳ ಹಣ ಸಿಕ್ಕಿದೆ. ಡೆಲ್ಲಿ ಕ್ಯಾಪಿಟಲ್ಸ್ ರನ್ನರ್ ಅಪ್ ಆಗಿದ್ದು ಮೂರು ಕೋಟಿ ರೂಪಾಯಿಗಳನ್ನು ಗಳಿಸಿದೆ.
PSL ಗಿಂತ ಹೆಚ್ಚಿನ ಹಣ ಪಡೆದ WPL ವಿಜೇತ ತಂಡ:
ಪಾಕಿಸ್ತಾನ್ ಸೂಪರ್ ಲೀಗ್ (Pakistan Super League) ಪಿಎಸ್ಎಲ್ ಅಂತಿಮ ಪಂದ್ಯ ಇತ್ತೀಚಿಗೆ ಅಂತ್ಯಗೊಂಡಿದೆ. ಶಾಹಿದ್ ಆಫ್ರಿದಿ (Shahid Afridi) ಕ್ಯಾಪ್ಟನ್ ಶಿಪ್ ನಲ್ಲಿ ಲಾಹೋರ್ ಖಲಂದರ್ಸ್ ಟ್ರೋಫಿ ಗೆದ್ದಿದ್ದಾರೆ. ಪಿಎಸ್ಎಲ್ ನ ವಿಜೇತ ತಂಡಕ್ಕೆ 3.4 ಕೋಟಿ ರೂಪಾಯಿಗಳು ಹಾಗೂ ಮುಲ್ತಾನ್ ಸುಲ್ತಾನ್ ತಂಡ (Multan Sultan Team) ಸೋತಿದ್ದರೂ 1.37 ಕೋಟಿ ರೂಪಾಯಿಗಳನ್ನು ತನ್ನದಾಗಿಸಿಕೊಂಡಿದೆ.