Virat Kohli: ವಿಶ್ವಕಪ್ ಗು ಮುನ್ನವೇ ಕೊಹ್ಲಿಗೆ ಗಂಗೂಲಿ ಮತ್ತು ಎಬಿಡಿಯಿಂದ ಹೊಸ ಸಲಹೆ! ಟ್ವಿಸ್ಟ್

Advertisement
ಇತ್ತೀಚಿಗೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರ ಗಂಗೂಲಿ ನೀಡಿದ ಹೇಳಿಕೆ ಒಂದು ನಿಮ್ಮ ಗಮನಕ್ಕೆ ಬಂದಿರಬಹುದು. ಇನ್ನೇನು ವಿಶ್ವಕಪ್ ಪಂದ್ಯ ಆರಂಭವಾಗಲಿದೆ. ಇದರಲ್ಲಿ ವಿರಾಟ ಕೊಹ್ಲಿ (Virat Kohli) ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಸೂಕ್ತ ಎಂದು ಗಂಗೂಲಿ ತಿಳಿಸಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಅನುಭವಿ ಆಟಗಾರ ಎ ಬಿ ಡೆವಿಲಿಯರ್ಸ್ (AB de Villiers) ಕೂಡ ವಿರಾಟ್ ಕೊಹ್ಲಿ ಯಾವ ಸ್ಥಾನದಲ್ಲಿ ಆಟವಾಡಿದರೆ ಉತ್ತಮ ಎನ್ನುವ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡೆವಿಲಿಯರ್ಸ್ ವಿರಾಟ್ ಕೊಹ್ಲಿ (Virat Kohli) ಬ್ಯಾಟಿಂಗ್ ಸ್ಥಾನದ ಬಗ್ಗೆ ಇತ್ತೀಚಿಗೆ ಹೇಳಿಕೆ ಒಂದನ್ನು ನೀಡಿದರು ಅವರ ಪ್ರಕಾರ ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಉತ್ತಮ. ಇದಕ್ಕೆ ಕಾರಣವನ್ನು ಕೂಡ ಎಬಿ ಡಿವಿಲಿಯರ್ಸ್ ನೀಡುತ್ತಾರೆ.
ಎ ಬಿ ಡಿವಿಲಿಯರ್ಸ್ ಪ್ರಕಾರ Virat Kohli ಬ್ಯಾಟಿಂಗ್ ಸ್ಥಾನ ನಾಲ್ಕನೇ ಕ್ರಮಾಂಕದಲ್ಲಿ!
ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನ ನೀಡಿರುವ ದಕ್ಷಿಣ ಆಫ್ರಿಕಾದ ಮಾಜಿ ಅನುಭವಿ ಆಟಗಾರ ಎಬಿ ಡೆವಿಲಿಯರ್ಸ್ ವಿರಾಟ್ ಕೊಹ್ಲಿ ನಂಬರ್ ನಾಲ್ಕನೇ ಬ್ಯಾಟಿಂಗ್ ಸ್ಥಾನವನ್ನು ಪಡೆದುಕೊಂಡರೆ ಒಳ್ಳೆಯದು ಎಂದು ನಾನು ನಂಬುತ್ತೇನೆ ಎಂದಿದ್ದಾರೆ. ಅವರು ಮಧ್ಯಮ ಕ್ರಮಾಂಕದಲ್ಲಿ ಯಾವುದೇ ರೀತಿಯಾದಂತಹ ಸಂದರ್ಭವನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಅದರಿಂದ ಅವರು ಮಧ್ಯಮ ಕ್ರಮಾಂಕಕ್ಕೆ ಬರಬೇಕು. ಆದರೆ ವಿರಾಟ್ ಕೊಹ್ಲಿ ಅವರಿಗೆ ಯಾವುದು ಇಷ್ಟ ಎನ್ನುವುದು ನನಗೆ ಗೊತ್ತಿಲ್ಲ ಆದಗ್ಯೂ ಒಬ್ಬ ಆಟಗಾರನಾಗಿ ತಂಡದ ಅಗತ್ಯತೆಗಳನ್ನು ನೋಡಿಕೊಳ್ಳುವುದು ಹಾಗೆ ಅದಕ್ಕೆ ತಕ್ಕಂತೆ ಪ್ಲಾನ್ ರೂಪಿಸುವುದು ಬಹಳ ಒಳ್ಳೆಯದು ಎಂದಿದ್ದಾರೆ.
ಅವತ್ತು ಗಂಗೂಲಿ ಕೂಡ ಹೇಳಿದ್ದು ಇದನ್ನೇ!
ಹೌದು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಕೂಡ ಇತ್ತೀಚಿಗೆ ವಿರಾಟ್ ಕೊಹ್ಲಿ (Virat Kohli) ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತನಾಡಿದರು. ವಿರಾಟ್ ಕೊಹ್ಲಿ ಮಾಧ್ಯಮ ಕ್ರಮಾಂಕ ಅಥವಾ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರೆ ಉತ್ತಮ. ಇನ್ನು ಮುಂಬರುವ ವಿಶ್ವಕಪ್ ನಲ್ಲಿ ತಂಡದ ಆರಂಭಿಕ ಆಟಗಾರರಾಗಿ ಮಾಜಿ ನಾಯಕ ರೋಹಿತ ಶರ್ಮ (Rohit Sharma) ಹಾಗೂ ಶುಭಮನ್ ಗಿಲ್ (Shubman Gill) ಆಯ್ಕೆಯಾದರೆ ಸೂಕ್ತ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ (Ishan Kisan) ಗೆ ಸ್ಥಾನವನ್ನು ನೀಡಬೇಕು.
ನಂತರ ಕೆಎಲ್ ರಾಹುಲ್, ಸೂರ್ಯಕುಮಾರ ಯಾದವ್, ಶ್ರೇಯಸ್ ಅಯ್ಯರ್ ನಂತಹ ಯುವ ಆಟಗಾರರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮ್ಯಾನ್ ಗಳಾಗಿ ಆಯ್ಕೆಗೊಂಡರೆ ವಿಶ್ವಕಪ್ ಗೆಲ್ಲುವುದಕ್ಕೆ ಸಹಾಯಕವಾಗುತ್ತದೆ ಎಂದು ಸೌರವ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ 2023ರ ವಿಶ್ವಕಪ್ ನಲ್ಲಿ ಭಾರತೀಯ ತಂಡ ಸಿದ್ಧತೆ ನಡೆಸಿದ್ದು ಯಾರೂ ಯಾವ ಸ್ಥಾನದಲ್ಲಿ ಆಟವಾಡಲಿದ್ದಾರೆ ಎಂಬುದು ಸದ್ಯದಲ್ಲೆ ನಿರ್ಧಾರವಾಗಲಿದೆ.