Karnataka Times
Trending Stories, Viral News, Gossips & Everything in Kannada

Team India: ಐಪಿಎಲ್ ನಂತರ ಮುಂದೇನು? ಇಲ್ಲಿದೆ ವರ್ಷದ ವೇಳಾಪಟ್ಟಿ!

ಇಂದು ಕ್ರಿಕೆಟ್ ಅಭಿಮಾನಿಗಳ ಬಹು ನಿರೀಕ್ಷಿತ ಐಪಿಎಲ್ ಕೊನೆಯ ಪಂದ್ಯ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಗುಜರಾತ್ ಟೈಟನ್ಸ್ (Gujarat Titans) ತಂಡಗಳು ಮುಖಾಮುಖಿಯಾಗಲಿವೆ. 2023ರ ಐಪಿಎಲ್ ಟ್ರೋಫಿ ಯಾರ ಮುಡಿಗೇರುತ್ತೆ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಕುತೂಹಲ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಈ ಫೈನಲ್ ಮ್ಯಾಚ್ ಸಾಕಷ್ಟು ರೋಚಕವಾಗಿ ಇರಲಿದೆ. ಈ ಎರಡು ತಂಡಗಳಲ್ಲಿ ಯಾವುದೇ ತಂಡ ಗೆದ್ದರೂ ನಂತರ ಟೀಮ್ ಇಂಡಿಯಾ ಮತ್ತೆ ಇತರ ಪಂದ್ಯಗಳನ್ನು ಆಡಲು ಹೋಗಲೇಬೇಕು. ಹಾಗಾದ್ರೆ ಐಪಿಎಲ್ ಮುಗಿದ ನಂತರ ಟೀಮ್ ಇಂಡಿಯಾ ಮುಂದೆ ಯಾವ ಮ್ಯಾಚ್ ಆಡಲಿದೆ ಗೊತ್ತಾ?

Advertisement

ಐಪಿಎಲ್ 2023 ಆರಂಭವಾಗಿದ್ದು ಮಾರ್ಚ್ 31 ರಿಂದ. ಆದರೆ ಮಾರ್ಚ್ 21ರ ವರೆಗೂ ಟೀಮ್ ಇಂಡಿಯಾ ಇಂಗ್ಲೆಂಡ್ ಸರಣಿಯನ್ನು ಆಡುತ್ತಿತ್ತು. ಐಪಿಎಲ್ ಮುಗಿದ ನಂತರ ಮತ್ತೆ ಇಂಗ್ಲೆಂಡ್ ಗೆ ತೆರಳಿ ಆಸ್ಟ್ರೇಲಿಯಾದ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮ್ಯಾಚ್ ಆಡಲಿದೆ ಟೀಮ್ ಇಂಡಿಯಾ. ಐಪಿಎಲ್ ಮುಗಿದು 9 ದಿನಗಳ ನಂತರ ಡಬ್ಲ್ಯೂ ಟಿ ಸಿ ಮ್ಯಾಚ್ ಆಡಬೇಕಿದೆ. ಹಾಗಾಗಿ ಟೀಮ್ ಇಂಡಿಯದ ಮುಖ್ಯ ಆಟಗಾರರಿಗೆ ಜೂನ್ 12ರ ನಂತರ ತುಸು ವಿಶ್ರಾಂತಿ ಸಿಗಬಹುದು.

Advertisement

ಆಸ್ಟ್ರೇಲಿಯಾ ಜೊತೆಗೆ ಡಬ್ಲ್ಯೂ ಟಿ ಸಿ ಮ್ಯಾಚ್:

Advertisement

ಐಪಿಎಲ್ ಪಂದ್ಯ ಮುಗಿಯುತ್ತಿದ್ದ ಹಾಗೆ ಜೂನ್ 7ರಿಂದ 11ರ ವರೆಗೆ ಆಸ್ಟ್ರೇಲಿಯಾದ ಜೊತೆಗೆ ಡಬ್ಲ್ಯೂ ಟಿ ಸಿ ಮ್ಯಾಚ್ ಆಡಬೇಕಿದೆ. ನಂತರ ಮಧ್ಯದಲ್ಲಿ ಆಟಗಾರರಿಗೆ ತುಸು ಬ್ರೇಕ್ ಸಿಗಬಹುದು. ಜೂನ್ ಅಂತ್ಯದ ವೇಳೆಗೆ ಆಫ್ಘಾನಿಸ್ತಾನದೊಂದಿಗೆ ಟಿ 20 ಮ್ಯಾಚ್ ಆಡುವ ಸಾಧ್ಯತೆ ಇದೆ. ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಈ ಕೆಲವು ಆಟಗಾರರಿಗೆ ಈ ಟಿ ಟ್ವೆಂಟಿ ಆಟದಿಂದ ಬ್ರೇಕ್ ಸಿಗಬಹುದು.

Advertisement

ಜುಲೈ -ಆಗಸ್ಟ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ:

ಟೀಮ್ ಇಂಡಿಯಾದ ಮುಂದಿನ ವೇಳಾಪಟ್ಟಿ ನೋಡುವುದಾದರೆ, ಜುಲೈ ನಿಂದ ಆಗಸ್ಟ್ ವರೆಗೆ ವೆಸ್ಟ್ ಇಂಡಿಸ್ ಪ್ರವಾಸ ಕೈಗೊಳ್ಳಲಿದ್ದು ಈ ಸಮಯದಲ್ಲಿ 3 ಏಕದಿನ ಸರಣಿ, ಎರಡು ಟೆಸ್ಟ್ ಮ್ಯಾಚ್ ಹಾಗೂ ಟಿ20 ಸರಣಿಯನ್ನು ಆಡಲಿಕ್ಕಿದೆ.

ನಂತರ ಸೆಪ್ಟೆಂಬರ್ ನಲ್ಲಿ ಆಸ್ಟ್ರೇಲಿಯಾದೊಂದಿಗೆ ಏಕದಿನ ಸರಣಿ, ಅಕ್ಟೋಬರ್ ನಿಂದ ನವೆಂಬರ್ ವರೆಗೆ ಓಡಿಐ ವಿಶ್ವ ಕಪ್, ನವೆಂಬರ್ ನಿಂದ ಡಿಸೆಂಬರ್ ವರೆಗೆ ಆಸ್ಟ್ರೇಲಿಯಾದ ಜೊತೆಗಿನ ಟಿ20 ಪಂದ್ಯಗಳು ಹಾಗೂ ಡಿಸೆಂಬರ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಮ್ಯಾಚ್ ನಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳಲಿದೆ. ಇವಿಷ್ಟು ಭಾರತೀಯ ಕ್ರಿಕೆಟ್ ತಂಡದ ಈ ವರ್ಷದ ವೇಳಾಪಟ್ಟಿ.

Leave A Reply

Your email address will not be published.