ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ಆಗಿರುವಂತಹ ಅಂಭಾಟಿ ರೈಡ್ ಈ ಬಾರಿ ಚೆನ್ನೈ ಸೂಪರ್ ಕಿಂಗ್ ತಂಡ ಫೈನಲ್ ನಲ್ಲಿ ಗೆದ್ದ ನಂತರ ಕ್ರಿಕೆಟ್ನಿಂದ ಸನ್ಯಾಸವನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ಹೇಳುವ ಮೂಲಕ ನಿವೃತ್ತಿಯನ್ನು ಘೋಷಿಸಿದ್ದರು. ಆದರೆ ಈಗ ಅಂಬಾಟಿ ರಾಯುಡು ಮತ್ತೆ ಕ್ರಿಕೆಟ್ ದುನಿಯಾ ಗೆ ಕಾಲಿಟ್ಟಿದ್ದಾರೆ. ಅದು ಕೂಡ ಕೆರೆಬಿಯನ್ ಪ್ರೀಮಿಯರ್ ಲೀಗ್ (CPL) ನಲ್ಲಿ. ಹಾಗಿದ್ರೆ ಬನ್ನಿ ಅವರ ಸಿಪಿಎಲ್ ಕ್ರಿಕೆಟ್ ಯಾವ ರೀತಿ ಇತ್ತು ಅನ್ನೋದನ್ನ ತಿಳಿದುಕೊಳ್ಳೋಣ.
ಹೌದು ನಿವೃತ್ತಿಯನ್ನು ಮುಗಿಸಿಕೊಂಡು ನೇರವಾಗಿ ಅಂಬಾಟಿ ರಾಯ್ಡು (Ambati Rayudu) ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಪ್ರಾರಂಭಿಸಿದ್ದು ಸೆಂಟ್ ಕೀಟ್ಸ್ ಆಂಡ್ ನೆವಿಸ್ ಪೆಟ್ರಿಯಾಟ್ಸ್ ತಂಡದ ಪರವಾಗಿ ರಾಯುಡು ಆಡಲು ಪ್ರಾರಂಭಿಸಿದ್ದು ಆರಂಭದಿಂದಲೇ ಎಲ್ಲಾ ಕಡೆ ಮೆಚ್ಚುಗೆ ಏನು ಸೂಚಿಸುವ ರೀತಿಯಲ್ಲಿ ಅವರು ಆಡುತ್ತಿರುವುದು ಎಲ್ಲರ ಗಮನವನ್ನು ಸೆಳೆದಿದ್ದು ತಮ್ಮ ಜಬರ್ದಸ್ತ್ ಬ್ಯಾಟಿಂಗ್ ಪ್ರದರ್ಶನದ ಮೂಲಕ ಲೀಗ್ ನಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚಿಗಷ್ಟೇ ನಡೆದಿರುವಂತಹ ಪಂದ್ಯದಲ್ಲಿ ರಾಯುಡು ನೀಡಿರುವಂತಹ ಬ್ಯಾಟಿಂಗ್ ಪ್ರದರ್ಶನ ಈಗ ಎಲ್ಲಾ ಕಡೆ ಸುದ್ದಿಯಾಗುತ್ತಿದೆ. 2 ಸಿಕ್ಸರ್ ಹಾಗೂ ಎರಡು ಬೌಂಡರಿ ಸಮೇತ ರಾಯುಡು ಕೇವಲ 22 ಎಸೆತಗಳಲ್ಲಿ ಭರ್ಜರಿ 32 ರನ್ನುಗಳನ್ನು ಬಾರಿಸಿದ್ದಾರೆ. ಒಳ್ಳೆ ಲಯದಲ್ಲಿದ್ದ ಅಂಬಾಟಿ ಎದುರಾಳಿ ತಂಡದ ಬೌಲರ್ ಗಳನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.
ರಾಯುಡು ಸ್ವಲ್ಪ ಹೊತ್ತು ಕ್ರಿಸ್ ನಲ್ಲಿದ್ದರೆ ಇನ್ನೂ ಹೆಚ್ಚಿನ ರನ್ ಗಳಿಸುತ್ತಿದ್ದರು ಆದರೆ ಮುನ್ನುಗಿ ಬಾರಿಸುವ ಭರದಲ್ಲಿ ಗುಡ್ಕೇಶ್ ಮೋತಿ ರವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುತ್ತಾರೆ. ಎದುರಾಳಿ ತಂಡ Guyana Amazon Warriors ನಿಗದಿತ 20 ಓವರ್ ಗಳ ಪಾಳಿಯಲ್ಲಿ ಏಳು ವಿಕೆಟ್ ನಷ್ಟಕ್ಕೆ 197 ರನ್ನುಗಳನ್ನು ಬಾರಿಸಿತು. ಆದರೆ ರಾಯುಡು ಅವರ ತಂಡ 16.2 ಓವರ್ ಗಳಿಗೆ ಕೇವಲ 132 ರನ್ನುಗಳನ್ನು ಬಾರಿಸುವ ಮೂಲಕ ಆಲ್ ಔಟ್ ಆಗಿ ಶರಣಾಯಿತು. ಹೀಗಿದ್ರೂ ಕೂಡ ರಾಯುಡು ರವರ 32 ರನ್ನುಗಳ ವನ್ ಮ್ಯಾನ್ ಶೋ ಮಾತ್ರ ಬ್ಯಾಟಿಂಗ್ನಲ್ಲಿ ಎಲ್ಲರ ಮನಸು ಗೆದ್ದಿತು.
Ambati Rayudu’s first six in CPL.
He becomes the first Indian player to hit a six in CPL.pic.twitter.com/4mTt8vu6Rk
— Johns. (@CricCrazyJohns) August 26, 2023
ರಾಯುಡು (Rayudu) ರವರ ಟಿ ಟ್ವೆಂಟಿ ಕರಿಯರ್ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ 294 ಮ್ಯಾಚ್ಗಳಲ್ಲಿ 272 ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. 26.94 ಆವರೇಜ್ ನಲ್ಲಿ 125 ಸ್ಟ್ರೈಕ್ ರೇಟ್ ನಲ್ಲಿ 6060 ರನ್ನುಗಳನ್ನು ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 31 ಅರ್ಧ ಶತಕಗಳು ಕೂಡ ಸೇರಿವೆ. ಟಿ ಟ್ವೆಂಟಿ ಫಾರ್ಮೆಟ್ ನಲ್ಲಿ ಎಲ್ಲರೂ ಇಷ್ಟ ಪಡುವಂತಹ ಆಟಗಾರರಲ್ಲಿ ರಾಯುಡು ಕೂಡ ಒಬ್ಬರಾಗಿದ್ದಾರೆ ಎಂದು ಹೇಳಬಹುದಾಗಿದೆ.