Sunil Narine: ಕ್ರಿಕೆಟ್ ಜಗತ್ತಿನಲ್ಲೇ ಮೊದಲಬಾರಿ ವಿಚಿತ್ರ ರೂಲ್ಸ್ ಗೆ ಔಟ್ ಆದ ನರೈನ್
ಕ್ರೀಡೆ ಅಂದಾಗ ಹೆಚ್ಚು ಇಷ್ಟ ಪಡುವಂತಹ ಆಟದಲ್ಲಿ ಕ್ರಿಕೆಟ್ ಕೂಡ ಒಂದು, ಅದರಲ್ಲೂ ಐ ಪಿ ಎಲ್ ಮ್ಯಾಚ್ ಅಂದಾಗ ಯುವಕರೆಲ್ಲ ಕಾದು ಕುಳಿತಿರುತ್ತಾರೆ, ಇನ್ನು ಕ್ರಿಕೆಟ್ ಕೂಡ ಅದರದೇ ಆದ ನಿಯಮ ಗಳಿವೆ, ಒಂದು ತಂಡ ಆ ನಿಯಮ ಗಳಿಗೆಲ್ಲ ಸಿದ್ದ ಇರಬೇಕಾಗುತ್ತವೆ, ಕ್ರೀಕೆಟ್ ನಲ್ಲಿ ಒಂದು ಟೀಮ್ ವಿನ್ ಆಗ ಬೇಕಾದರೆ, ತಮ್ಮ ಪರವಾಗಿ ಟೀಮ್ ಗೆಲ್ಲಲು ಕ್ರಿಕೆಟ್ನಲ್ಲಿ ಆಟಗಾರರು ವಿವಿಧ ತಂತ್ರಗಳನ್ನು ಬಳಸುತ್ತಾರೆ. ಎದುರಾಳಿ ತಂಡದ ಏಕಾಗ್ರತೆಗೆ ಭಂಗ ತರಲು ಕೂಡ ಸಮಯ ವೇಸ್ಟ್ ಮಾಡುತ್ತ ಎದುರಾಳಿ ಗಳನ್ನು ನಿಭಯಿಸುತ್ತಾರೆ, ಇದೀಗ ಮಾತ್ರ ಕ್ರಿಕೇಟ್ ಆಟಗಾರ ರಿಗೆ ಹೊಸದಾದ ನಿಯಮ ಜಾರಿಗೆ ತಂದಿದ್ದಾರೆ, ಒಂದು ವೇಳೆ ಆಟದ ಸಮಯದಲ್ಲಿ ಆಟಗಾರರ ನಿಯಮಗಳನ್ನು ಉಲ್ಲಂಘಿಸಿದರೆ, ಫೀಲ್ಡ್ ಅಂಪೈರ್‌ಗಳು ರೆಡ್ ಕಾರ್ಡ್ ತೋರಿಸಿ ಅವರನ್ನು ಮೈದಾನದಿಂದ ಹೊರಗಡೆ ಇರಿಸುವ ನಿಯಮ ವನ್ನು ಜಾರಿಗೆ ತಂದಿದ್ದಾರೆ.
ಮೊದಲ ಬಾರಿಗೆ ಈ ನಿಯಮ:
ಫುಟ್ಬಾಲ್ ಆಟದಲ್ಲಿ ಮಾತ್ರ ರೆಡ್ ಕಾರ್ಡ್ ಜಾರಿಗೆ ತರಲಾಗಿತ್ತು, ಇತರ ಹಲವು ಕ್ರೀಡೆಗಳಲ್ಲಿ, ಈ ನಿಯಮ ಇರಲಿಲ್ಲ, ರೆಫರಿ ಆಟದ ವೇಳೆ ನಡೆಯುವ ಉಲ್ಲಂಘನೆ ಗೆ ರೆಡ್ ಕಾರ್ಡ್ ತೋರಿಸಿ ಆಟಗಾರನನ್ನು ಮೈದಾನದಿಂದ ಹೊರಗೆ ಕಳುಹಿಸುತ್ತಾರೆ. ಆದರೆ ಇದೀಗ ಈ ನಿಯಮ ಕ್ರಿಕೆಟ್‌ನಲ್ಲೂ ಮೊದಲ ಬಾರಿಗೆ ಜಾರಿ ಯಾಗಿದೆ.
ಪ್ರೀಮಿಯರ್ ಲೀಗ್ ನಲ್ಲಿ ಹೊಸ ರೂಲ್ಸ್:

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ಹೊಸ ನಿಯಮ ಜಾರಿಗೆ ಬಂದಿದ್ದು, ಇದೀಗ ವೆಸ್ಟ್ ಇಂಡೀಸ್ ಆಟಗಾರ ಸುನಿಲ್ ನರೈನ್ (Sunil Narine) ಕೂಡ ರೆಡ್ ಕಾರ್ಡ್ ಶಿಕ್ಷೆಗೆ ಒಳಗಾಗಿದ್ದಾರೆ, ಈ ಮೂಲಕ ಈ ನಿಯಮದಡಿ ಶಿಕ್ಷೆಗೆ ಅರ್ಹರಾದ ಮೊದಲ ಕ್ರಿಕೆಟರ್ ಎಂಬ ಅಪಖ್ಯಾತಿ ಪಡೆದಿದ್ದಾರೆ.
SENT OFF! The 1st ever red card in CPL history. Sunil Narine gets his marching orders 🚨 #CPL23 #SKNPvTKR #RedCard #CricketPlayedLouder #BiggestPartyInSport pic.twitter.com/YU1NqdOgEX
— CPL T20 (@CPL) August 28, 2023
ಯಾಕಾಗಿ ?
ನಿಧಾನ ರೀತಿಯ ಓವರ್ ರೇಟ್ ಪಡೆದ ಪರಿಣಾಮ ದಿಂದಾಗಿ ನೈಟ್ ರೈಡರ್ಸ್ ಆಟಗಾರ ಸುನಿಲ್ ನರೈನ್ (Sunil Narine) ಮೈದಾನ ತೊರೆಯಬೇಕಾದ ಸಂದರ್ಭ ಬಂತು, ಇನ್ನು ಮುಂದೆಯು ಕ್ರಿಕೆಟ್ ನಲ್ಲಿ ಈ ನಿಯಮಗಳು ಜಾರಿ ಯಲ್ಲಿರುತ್ತವೆ.
ಪಂದ್ಯಗಳು ರೋಚಕ:
ಕ್ರಿಕೇಟ್ ನಲ್ಲಿ ಇಂತಹ ಹೊಸ ನಿಯಮ ಬಂದರೆ ಮುಂದೆ ಪಂದ್ಯಗಳು ಮತ್ತಷ್ಟು ರೋಚಕವಾಗಲಿದ್ದು ಇಡೀ ಪಂದ್ಯವೇ ಬದಲಿಸಬಹುದು. ಇನ್ನು ಮುಂದೆ ರೆಡ್ ಕಾರ್ಡ್ ನಿಯಮ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಮೂಡಲಿದೆ.