Karnataka Times
Trending Stories, Viral News, Gossips & Everything in Kannada

Team India: ಯಾರು ಮುಟ್ಟಲಾಗದ ಇನ್ನೊಂದು ದಾಖಲೆ ಬರೆದ ಭಾರತ! ಆಸ್ಟ್ರೇಲಿಯಾ ಕೂಡ ಮಾಡಿಲ್ಲ

advertisement

ರೋಹಿತ್ ಶರ್ಮಾ (Rohit Sharma) ಅವರ ನಾಯಕತ್ವದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ವರ್ಷ ಅಹಮದಾಬಾದ್ ನಲ್ಲಿ ನಡೆದಿರುವಂತಹ ಏಕದಿನ ವಿಶ್ವಕಪ್ ಫೈನಲ್ (ODI World Cup Final) ಅನ್ನು ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯ ವಿರುದ್ಧ ತವರು ದೇಶ ಆಗಿರುವಂತಹ ಭಾರತದ ಅಹ್ಮದಾಬಾದ್ ನಲ್ಲಿ ತೋಳುವ ಮೂಲಕ ನೂರಾರು ಕೋಟಿ ಭಾರತೀಯರಿಗೆ ನಿರಾಶೆಯನ್ನು ಮೂಡಿಸಿತ್ತು. ಆದರೆ ಈ ಬಾರಿ ವೆಸ್ಟ್ ಇಂಡೀಸ್ ನಲ್ಲಿ ಭಾರತದ ಬಾವುಟವನ್ನು ನೆಡುವ ಮೂಲಕ ರೋಹಿತ್ ಶರ್ಮ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ನಿಜಕ್ಕೂ ಕೂಡ ಯಾರು ಮಾಡಲಾಗದಂತಹ ಸಾಧನೆಯನ್ನು ಮಾಡಿದೆ ಎಂದು ಹೇಳಬಹುದಾಗಿದೆ.

ಈ ಬಾರಿ ಟಿ ಟ್ವೆಂಟಿ ವಿಶ್ವಕಪ್ಗಾಗಿ (T20 World Cup) ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದಾಗ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಟಿ ಕೆ ಟಿಪ್ಪಣಿಗಳನ್ನು ಕೇಳಬೇಕಾಗಿ ಬಂದಿತ್ತು. ಆದರೆ ಅಂದುಕೊಂಡ ರೀತಿಯಲ್ಲಿ ಈಗಾಗಲೇ ಟಿ20 ವಿಶ್ವಕಪ್ ಅನ್ನು 17 ವರ್ಷಗಳ ನಂತರ ಗೆದ್ದಿರುವಂತಹ ರೋಹಿತ್ ಶರ್ಮ (Rohit Sharma) ನಾಯಕತ್ವದ ಭಾರತೀಯ ಕ್ರಿಕೆಟ್ ತಂಡಕ್ಕೆ (Team India) ಪ್ರತಿಯೊಬ್ಬರೂ ಕೂಡ ಸಲಾಂ ಹೊಡೆಯಲೇಬೇಕು.

ವಿಶ್ವ ಕಪ್ ಜೊತೆಗೆ ಯಾರು ಮುರಿಯಲಾಗದಂತಹ ಸಾಧನೆಯನ್ನು ಕೂಡ ಮಾಡಿದ ಭಾರತೀಯ ಕ್ರಿಕೆಟ್ ತಂಡ:

 

Image Source: www.espncricinfo.com

 

advertisement

ಟೀಮ್ ಇಂಡಿಯ (Team India) ನಿಮಗೆಲ್ಲರಿಗೂ ತಿಳಿದಿರಬಹುದು ಕಳೆದ ಬಾರಿಯ ಭಾರತದಲ್ಲಿ ನಡೆದಿರುವಂತಹ ಏಕದಿನ ವಿಶ್ವ ಕಪ್ (ODI World Cup) ನಲ್ಲಿ ಭಾರತೀಯ ಕ್ರಿಕೆಟ್ ತಂಡ 10 ಸತತ ಪಂದ್ಯಗಳನ್ನು ಗೆದ್ದುಕೊಂಡು ಬಂದಿತ್ತು ಆದರೆ ಫೈನಲ್ ನಲ್ಲಿ ಮಾತ್ರ ಆಸ್ಟ್ರೇಲಿಯ ವಿರುದ್ಧ ಸೋತು ಮನೆಗೆ ಹೋಗಿತ್ತು.

ಆದರೆ ಈ ಬಾರಿ ಆಡಿರುವಂತಹ ಪ್ರತಿಯೊಂದು ಪಂದ್ಯಗಳನ್ನು ಗೆದ್ದಿರುವಂತಹ ಭಾರತೀಯ ಕ್ರಿಕೆಟ್ ತಂಡ (Team India) ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ (South Africa) ತಂಡವನ್ನು ಕೂಡ ವಿರೋಚಿತವಾಗಿ ಸೋಲಿಸುವಂತಹ ಕೆಲಸವನ್ನು ಮಾಡಿದ್ದು ಯಾವುದೇ ಪಂದ್ಯಗಳನ್ನು ಸೋಲದೆ ವಿಶ್ವಕಪ್ ಗೆದ್ದಿರುವಂತಹ ತಂಡಗಳ ವಿಚಾರದಲ್ಲಿ ಭಾರತ ಮೊದಲನೆಯ ಗುರಿಯನ್ನು ಸ್ಥಾಪಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿದೆ ಎಂದು ಹೇಳಬಹುದಾಗಿದೆ.

ಯಾವುದೇ ಸೋಲನ್ನು ಅನುಭವಿಸದೆ ಆಡಿರುವಂತಹ ಪ್ರತಿಯೊಂದು ಪಂದ್ಯಗಳಲ್ಲಿ ಕೂಡ ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಅಜೇಯವಾಗಿ ಉಳಿದುಕೊಂಡಿದ್ದು ಕೊನೆಯ ಹಂತದಲ್ಲಿ ಫೈನಲ್ ನಲ್ಲಿ ಕೂಡ ಬಲಿಷ್ಠ ಸೌತ್ ಆಫ್ರಿಕಾ ತಂಡದ ವಿರುದ್ಧ ಸೋಲಿನ ಹಂತದಲ್ಲಿಂದ ಗೆಲುವಿನ ದಡಕ್ಕೆ ಸೇರಿರುವಂತಹ ಘಟನೆ ನಿಜಕ್ಕೂ ಕೂಡ ರೋಚಕ ಎನ್ನಬಹುದಾಗಿದೆ.

ಈ ಮೂಲಕವೇ ನೀವು ಟೂರ್ನಮೆಂಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಎಷ್ಟರ ಮಟ್ಟಿಗೆ ಸ್ಟ್ರಾಂಗ್ ಆಗಿತ್ತು ಅನ್ನೋದನ್ನ ತಿಳಿದುಕೊಳ್ಳಬಹುದಾಗಿದೆ. ಮುಂದಿನ ವರ್ಷ ನಡೆಯಲಿರುವಂತಹ ಚಾಂಪಿಯನ್ಸ್ ಟ್ರೋಫಿನಲ್ಲಿ ಇದೇ ರೀತಿ ಭಾರತೀಯ ಕ್ರಿಕೆಟ್ ತಂಡ ಮುಂದಿನ ಹೊಸ ಕೋಚ್ ನೇತೃತ್ವದಲ್ಲಿ ಪ್ರದರ್ಶನ ನೀಡಲಿ ಎಂಬುದಾಗಿ ಹಾರೈಸೋಣ.

advertisement

Leave A Reply

Your email address will not be published.