Karnataka Times
Trending Stories, Viral News, Gossips & Everything in Kannada

IPL Players: ಐಪಿಎಲ್ ನಿಂದ ರಾತ್ರೋರಾತ್ರಿ ಸ್ಟಾರ್ ಆಗಿ ಮರೆಯಾದ ಆಟಗಾರರ ಲಿಸ್ಟ್ ಇಲ್ಲಿದೆ

ಐಪಿಎಲ್ ಬಿಲಿಯನ್ ಡಾಲರ್ ಮೌಲ್ಯದ ಕ್ರಿಕೆಟ್ ಉತ್ಸವವಾಗಿದೆ. ಇಂದಿನಿಂದ ಐಪಿಎಲ್ (IPL) ಪ್ರಾರಂಭವಾಗಲಿದೆ. ಇನ್ನು ಇದೇ ಐಪಿಎಲ್ ನಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಿ ಮಿಂಚಿ ಮರೆದವರು ಇಂದು ಕಣ್ಮರೆಯಾಗಿದ್ದಾರೆ. ಅಂತಹ ಐದು ಆಟಗಾರರ ಕುರಿತಂತೆ ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಅಂತಹ ಆಟಗಾರರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

Advertisement

ಶಿವಲ್ ಕೌಶಿಕ್ (Shival Kaushik) 2016ರ ಐಪಿಎಲ್ ನಲ್ಲಿ ಸಿವಿಲ್ ಕೌಶಿಕ್ ಸುರೇಶ್ ರೈನ ನಾಯಕತ್ವದಲ್ಲಿ ಕಂಡುಬಂದಂತಹ ಗುಜರಾತ್ ಲಯನ್ಸ್ ತಂಡದ ಪರವಾಗಿ ಆಡಿದರು. ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದ ಇವರು ಮೊದಲ ಸೀಸನ್ ನಲ್ಲಿ 10 ಪಂದ್ಯಗಳಿಂದ ಆರು ವಿಕೆಟ್ಗಳನ್ನು ಪಡೆಯುತ್ತಾರೆ. ಸೀಸನ್ನಲ್ಲಿ ಚೆನ್ನಾಗಿ ಆಡಿದ ಹಿನ್ನೆಲೆಯಲ್ಲಿ ಅವರಿಗೆ 2017ರಲ್ಲಿ ಕೂಡ ಅವಕಾಶ ಸಿಗುತ್ತದೆ ಆದರೆ ಅದಾದ ನಂತರ ಅವರು ಕಾಣೆಯಾಗಿ ಬಿಡುತ್ತಾರೆ. ಸ್ವಪ್ನಿಲ್ ಅಸ್ನೋಡ್ಕರ್ (Swapnil Asnodkar) ಐಪಿಎಲ್ ನ ಮೊದಲ ಸೀಸನ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ 134ರ ಸ್ಟ್ರೈಕ್ ರೇಟ್ ನಲ್ಲಿ ಭರ್ಜರಿ 311 ರನ್ನುಗಳನ್ನು ಬಾರಿಸುವ ಮೂಲಕ ತಂಡ ಚಾಂಪಿಯನ್ ಆಗಲು ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದರು. ಎರಡನೇ ಸೀಸನ್ನಲ್ಲಿ ಕೂಡ ಅವಕಾಶ ಸಿಕ್ಕಿತ್ತಾದರೂ ಅದನ್ನು ಉಪಯೋಗಿಸಿಕೊಳ್ಳಲು ಸಂಪೂರ್ಣವಾಗಿ ವಿಫಲರಾಗುತ್ತಾರೆ. ಅದಾದ ನಂತರ ಐಪಿಎಲ್ ನಿಂದಲೇ ಮಾಯವಾಗಿ ಬಿಡುತ್ತಾರೆ.

Advertisement

ಪಾಲ್ ವಲ್ತಾಟಿ (Paul Valthaty) ಇವರು ಐಪಿಎಲ್ ನಲ್ಲಿ ಜನಪ್ರಿಯತೆಗೆ ಬಂದಷ್ಟೇ ವೇಗವಾಗಿ ಮಾಯವಾಗಿ ಬಿಡುತ್ತಾರೆ. 2011ರಲ್ಲಿ ಚೆನ್ನೈ ವಿರುದ್ಧ 63 ಎಸೆತಗಳಲ್ಲಿ 120ರನ್ನು ಬಾರಿಸುವ ಮೂಲಕ ಜನಪ್ರಿಯತೆಗೆ ಬರುತ್ತಾರೆ ಮಾತ್ರವಲ್ಲದೆ ಬೌಲಿಂಗ್ ನಲ್ಲಿ ಕೂಡ ಮೋಡಿ ಮಾಡಿರುತ್ತಾರೆ. ಕಮ್ರಾನ್ ಖಾನ್ (Kamran Khan); ರಾಜಸ್ಥಾನ್ ತಂಡದ ಪರವಾಗಿ 140 ಕಿಲೋಮೀಟರ್ ವೇಗಕ್ಕಿಂತ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ಇವರನ್ನು ಶೇನ್ ವಾರ್ನ್ ಡೇಂ’ ಜರಸ್ ಪ್ಲೇಯರ್ ಎನ್ನುವುದಾಗಿ ಕರೆಯುತ್ತಿದ್ದರು. ಐಪಿಎಲ್ ನ ಮೊದಲ ಸೂಪರ್ ಓವರ್ ಅನ್ನು ಇವರ ಎಸೆದಿದ್ದು ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಗೆಲುವಿಗೆ ಮೂಲ ಕಾರಣರಾಗಿದ್ದರು. ಬರುತ್ತಾ ಕಳಪೆ ಬೌಲಿ ಪ್ರದರ್ಶನದಿಂದಾಗಿ ತಂಡದಿಂದ ಸ್ಥಾನವನ್ನು ಕಳೆದುಕೊಂಡು ಐಪಿಎಲ್ ನಿಂದಲೇ ದೂರ ಹೋಗಿಬಿಡುತ್ತಾರೆ.

Advertisement

ಪರ್ವಿಂದರ್ ಅವಾನಾ (Parwinder Awana) ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ 2012ರಿಂದ 15ರವರೆಗೆ ಪ್ರಮುಖ ಬೌಲರ್ ರೂಪದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಐಪಿಎಲ್ ನಲ್ಲಿ ತೋರಿದ ಯಶಸ್ವಿ ಬೌಲಿಂಗ್ ಪ್ರದರ್ಶನದ ಕಾರಣದಿಂದಾಗಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡಲು ಅವಕಾಶ ಸಿಗುತ್ತದೆ ಆದರೆ ಅಲ್ಲಿ ಇವರು ವಿಫಲರಾಗುತ್ತಾರೆ. ಈಗ ಐಪಿಎಲ್ ಹಾಗೂ ಕ್ರಿಕೆಟ್ ನಿಂದ ದೂರವಾಗಿ ಕ್ರಿಕೆಟ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೇ ಮಿತ್ರರೇ ಐಪಿಎಲ್ ನಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಿ ನಂತರ ಕಾಣದಂತೆ ಮಾಯವಾದಂತಹ ಟಾಪ್ 5 ಕ್ರಿಕೆಟಿಗರು.

Leave A Reply

Your email address will not be published.