Karnataka Times
Trending Stories, Viral News, Gossips & Everything in Kannada

Darshan: ಆರ್ಸಿಬಿ ಪಂದ್ಯ ಆರಂಭಕ್ಕೂ ಮುನ್ನವೇ ಎಲ್ಲರ ಬಳಿ ಈ ಮನವಿ ಮಾಡಿದ ಡಿಬಾಸ್ ದರ್ಶನ್.

Advertisement

ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಹಾಗೂ ಲೀಗ್ ನಡೆಯುವುದು ನಮ್ಮ ಭಾರತದಲ್ಲಿ ಎನ್ನುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು. ಬಿಲಿಯನ್ ಡಾಲರ್ ಕ್ರಿಕೆಟ್ ಲೀಗ್ ಆಗಿರುವಂತಹ ಐಪಿಎಲ್(IPL) ಈಗಾಗಲೇ ಪ್ರಾರಂಭವಾಗಿದ್ದು ನಿನ್ನೆಯಷ್ಟೇ ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ(Narendra Modi Stadium) ಅದ್ದೂರಿಯಾಗಿ ಮೊದಲ ಪಂದ್ಯದಿಂದ ಪ್ರಾರಂಭವಾಗಿರುವ ಐಪಿಎಲ್ ದಿನೇ ದಿನೇ ಕಾವೇರಿ ಲಕ್ಷಣವನ್ನು ಈಗಾಗಲೇ ತೋರಿಸಿದೆ.

ಇನ್ನು ಈ ಲೀಗ್ ನಲ್ಲಿ ಕೇವಲ ಆಟಗಾರರ ಮೇಲೆ ಹಾಗೂ ಲೀಗ್ ಮೇಲೆ ಮಾತ್ರವಲ್ಲದೆ ಅನಧಿಕೃತವಾಗಿ ಬೆಟ್ಟಿಂಗ್ ಮೇಲೆ ಕೂಡ ದೊಡ್ಡ ಮಟ್ಟದಲ್ಲಿ ಹಣವನ್ನು ಸುರಿಯಲಾಗುತ್ತದೆ. ಇದು ನಮ್ಮ ಭಾರತ ದೇಶದಲ್ಲಿ ನಿಷೇಧವಾಗಿದ್ದರೂ ಕೂಡ ಹಲವಾರು ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳ ಮುಖಾಂತರ ಇನ್ನೂ ಕೂಡ ನಡೆಯುತ್ತಿದೆ. ಇದೇ ವಿಚಾರವಾಗಿ ಮಾತನಾಡಿರುವಂತಹ ದರ್ಶನ್(Darshan) ಅವರ ಹಳೆಯ ವಿಡಿಯೋ ಈ ಐಪಿಎಲ್(IPL) ಪ್ರಾರಂಭ ಆಗುತ್ತಿದ್ದಂತೆ ವೈರಲ್ ಆಗುತ್ತಿದ್ದು ಅದರಲ್ಲಿ ಅವರು ಹೇಳಿರುವ ಮಾತು ಏನೆಂದು ತಿಳಿಯೋಣ ಬನ್ನಿ.

ಬೆಟ್ಟಿಂಗ್ ಬಗ್ಗೆ ಮಾತನಾಡುತ್ತಾ ಡಿ ಬಾಸ್(Dboss) ” ಪಂದ್ಯವನ್ನು ನೋಡುತ್ತಾ ಕೆಲವರು ಮನೋರಂಜನೆಗಾಗಿ ಬಿಟ್ಟು ಸಾಲ ಸೋಲ ಮಾಡಿ ಬೆಟ್ಟಿಂಗ್ ಮಾಡಲು ಹೋಗುತ್ತಾರೆ. ಇವತ್ತು ಒಬ್ಬನ ಬಳಿ ಸಾಲ ಮಾಡಿ ಇನ್ನೊಬ್ಬನ ಬಳಿಯಿಂದ ಅದನ್ನು ತೀರಿಸಲು ಪ್ರಯತ್ನಿಸುತ್ತಾರೆ ಅದನ್ನು ಬಿಟ್ಟು ಮ್ಯಾಚ್ ನೋಡಿ ಎಂಜಾಯ್ ಮಾಡಿ. ಆಟಗಾರರು ಕಷ್ಟಪಟ್ಟು ತಮ್ಮ ತಂಡವನ್ನು ಗೆಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ ಆಡುತ್ತಾರೆ. ಕೇವಲ ಮ್ಯಾಚ್ ನೋಡಿ ನಿಮ್ಮ ಬದುಕನ್ನು ಹಾಳು ಮಾಡಿಕೊಳ್ಳಬೇಡಿ” ಎಂಬುದಾಗಿ ಸಂದೇಶವನ್ನು ನೀಡಿದ್ದಾರೆ.

 

Leave A Reply

Your email address will not be published.