Arjun Tendulkar: ಈ ಬಾರಿ IPL ನಲ್ಲಿ ಅರ್ಜುನ್ ತೆಂಡೂಲ್ಕರ್ ಆಡ್ತಾರಾ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ರೋಹಿತ್ ಶರ್ಮ.
2008ರಲ್ಲಿ ಪ್ರಾರಂಭವಾದ ಐಪಿಎಲ್ ಈಗಾಗಲೇ ಭಾರತೀಯ ಕ್ರಿಕೆಟ್ ತಂಡಕ್ಕೆ ಸೇರಿದಂತೆ ಕ್ರಿಕೆಟ್ ಜಗತ್ತಿಗೆ ಸಾಕಷ್ಟು ಸೂಪರ್ ಸ್ಟಾರ್ ಗಳನ್ನು ನೀಡಿದೆ. ನಿಜಕ್ಕೂ ಕೂಡ ಈ ಬಿಲಿಯನ್ ಡಾಲರ್ ಕ್ರಿಕೆಟ್ ಅಲ್ಲಿ ಎನ್ನುವುದು ಕ್ರಿಕೆಟ್ ಜಗತ್ತಿನ ಏಳಿಗೆಗೆ ಸಾಕಷ್ಟು ಕೊಡುಗೆಯನ್ನು ನೀಡಿದೆ ಎಂದರು ಕೂಡ ತಪ್ಪಾಗಲಾರದು. ಸಾಕಷ್ಟು ತಳಮಟ್ಟದ ಪ್ರತಿಭೆಗಳಿಗೂ ಕೂಡ ಐಪಿಎಲ್(IPL) ನಲ್ಲಿ ಅವಕಾಶ ನೀಡುವ ಮೂಲಕ ಭಾರತೀಯ ಕ್ರಿಕೆಟ್ ಸಂಸ್ಥೆ ಕ್ರಿಕೆಟ್ ಲೋಕದಲ್ಲಿ ಕ್ರಾಂತಿಕಾರಿ ಬೆಳವಣಿಗೆಯನ್ನು ಸೃಷ್ಟಿಸಿದೆ ಎಂದರು ತಪ್ಪಾಗಲಾರದು.
ಇನ್ನು ಕ್ರಿಕೆಟ್ ಜಗತ್ತಿನ ದೇವರು ಆಗಿರುವಂತಹ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಮಗ ಅರ್ಜುನ್ ತೆಂಡೂಲ್ಕರ್(Arjun Tendulkar) ಕೂಡ ಕ್ರಿಕೆಟ್ ಕ್ಷೇತ್ರಕ್ಕೆ ಕಾಲಿಟ್ಟು ಈಗಾಗಲೇ ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವಂತೆ ಈಗಿನಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ಆಲ್-ರೌಂಡರ್ ಆಗಿ ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ.
ಈಗಾಗಲೇ ಸೈಯದ್ ಅಲಿ ಮುಸ್ಟಾಕ್ ಟ್ರೋಫಿ ಸೇರಿದಂತೆ ಹಲವಾರು ದೇಶಿಯ ಕ್ರಿಕೆಟ್ ನಲ್ಲಿ ಅರ್ಜುನ್ ತೆಂಡೂಲ್ಕರ್ ಅವರು ಗಮನಾರ್ಹ ಪ್ರದರ್ಶನವನ್ನು ನೀಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ನಿಮಗೆಲ್ಲರಿಗೂ ತಿಳಿದಿರಬಹುದು ಅವರನ್ನು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡಕ್ಕೆ ಕೂಡ ಆಯ್ಕೆ ಮಾಡಲಾಗಿದೆ.
ಹೌದು ಮಿತ್ರರೇ ಅರ್ಜುನ್ ತೆಂಡೂಲ್ಕರ್ ಅವರು ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಾರೆ ಎಂಬ ಪ್ರಶ್ನೆಗೆ ರೋಹಿತ್ ಶರ್ಮ(Rohit Sharma) ಅವರು ಖಂಡಿತವಾಗಿ ಯೋಚನೆ ಇದೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ನೋಡಬೇಕು ಎಂದು ಹೇಳಿದ್ದಾರೆ. ಖಂಡಿತವಾಗಿ ಇಂತಹ ದೊಡ್ಡ ವೇದಿಕೆಯಲ್ಲಿ ಅವಕಾಶ ನೀಡಿದರೆ ಅರ್ಜುನ್ ತೆಂಡೂಲ್ಕರ್ ಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಒಂದು ಒಳ್ಳೆ ಅವಕಾಶ ಸಿಕ್ಕಂತಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.