Karnataka Times
Trending Stories, Viral News, Gossips & Everything in Kannada

IPL Auction: ಈ ಬಾರಿ IPL ನಲ್ಲಿ ಈ ಒಬ್ಬ ಆಲ್ ರೌಂಡರ್ ಆಟಗಾರ 25 ಕೋಟಿ ರೂಗೆ ಹರಾಜಾಗುತ್ತಾನಂತೆ!

ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2023ರ ಐಪಿಎಲ್ ಅನ್ನು ಮಹೇಂದ್ರ ಸಿಂಗ್ ಧೋನಿ(MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ಗೆದ್ದು ಐದನೇ ಬಾರಿ ಚಾಂಪಿಯನ್ ಆಗಿದೆ. ಐಪಿಎಲ್ ಪ್ರಾರಂಭ ಆಗುವುದಕ್ಕಿಂತ ಮುಂಚೆ ಡಿಸೆಂಬರ್ ನಲ್ಲಿ ಐಪಿಎಲ್ ಹರಾಜು(IPL Auction) ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಈ ಒಬ್ಬ ಆಟಗಾರರನ್ನು ಖರೀದಿಸಲು ಖಂಡಿತವಾಗಿ ಪ್ರತಿಯೊಂದು ತಂಡಗಳು ಕೂಡ ಪ್ರಯತ್ನಿಸಲಿವೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಕ್ರಿಕೆಟ್ ಮೂಲಗಳು ತಿಳಿಸಿದ್ದು ಬನ್ನಿ ಆಟಗಾರ ಆಲ್ರೌಂಡರ್ ಯಾರು ಎಂಬುದನ್ನು ತಿಳಿದುಕೊಳ್ಳೋಣ.

Advertisement

ಹೌದು ಮುಂದಿನ ವರ್ಷ ಭಾರತದಲ್ಲಿ ಲೋಕಸಭೆ ಚುನಾವಣೆ ಕೂಡ ಇರುವುದರಿಂದ ಐಪಿಎಲ್ ಅನ್ನು ಯಾವಾಗ ಪ್ರಾರಂಭಿಸಲಾಗುತ್ತದೆ ಎನ್ನುವುದರ ಬಗ್ಗೆ ಕೂಡ ಸಾಕಷ್ಟು ಲೆಕ್ಕಾಚಾರಗಳು ಈ ಬಾರಿ ಅಕ್ಟೋಬರ್ ನಿಂದ ಪ್ರಾರಂಭವಾಗಲಿರುವಂತಹ ವಿಶ್ವಕಪ್ ನಂತರವಷ್ಟೇ ಬಿಸಿಸಿಐ(BCCI) ನಿರ್ಧಾರ ಮಾಡಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಐಪಿಎಲ್ ಪ್ರಾರಂಭ ಆಗುವುದಕ್ಕಿಂತ ಮುಂಚೆ ಮಿನಿ ಆಕ್ಷನ್ ನಡೆಯಲಿದೆ. ಈ ವರ್ಷ ಪೂರ್ತಿ ಏಷ್ಯಾ ಕಪ್ ನಿಂದ ಪ್ರಾರಂಭವಾಗಿ ಏಕದಿನ ವಿಶ್ವ ಕಪ್ ವರೆಗೂ ಕೂಡ ಕ್ರಿಕೆಟ್ ವರ್ಷ ಎನ್ನುವುದು ಸಂಪೂರ್ಣವಾಗಿ ಷೆಡ್ಯೂಲ್ ಅನ್ನು ಹೊಂದಿದೆ. ಇನ್ನು ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಆ ಒಬ್ಬ ಆಟಗಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತಹ ಭರವಸೆಯನ್ನು ಮೂಡಿಸಿದ್ದಾನೆ.

Advertisement

ಈ ಆಲ್ರೌಂಡರ್ ಖಂಡಿತವಾಗಿ ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ 25 ಕೋಟಿಗೆ ಸೇಲ್ ಆದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಎನ್ನುವ ಅಷ್ಟರ ಮಟ್ಟಿಗೆ ಭರವಸೇನು ಮೂಡಿಸಿದ್ದಾನೆ ಹಾಗಿದ್ರೆ ಆ ಆಟಗಾರ ಯಾರು ಅನ್ನೋದನ್ನ ಬನ್ನಿ ತಿಳ್ಕೊಳೋಣ. ಹೌದು ನಾವ್ ಮಾತಾಡ್ತಿರೋದು 23 ವರ್ಷದ ಸ್ಕಾಟ್ಲೆಂಡ್ ದೇಶದ ಆಟಗಾರ ಆಗಿರುವ Brendon McMullen.

Advertisement

ತನ್ನ ದೇಶದ ಪರವಾಗಿ ಜಬರ್ದಸ್ತ್ ಕ್ರಿಕೆಟ್ ಆಡುತ್ತಿರುವಂತಹ 23 ವರ್ಷದ Brendon McMullen 2022 ರಲ್ಲಿ ತನ್ನ ದೇಶದ ಪರವಾಗಿ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಕೂಡ ಉತ್ತಮ ಪ್ರದರ್ಶನವನ್ನು ತೋರ್ಪಡಿಸಿದ್ದಾನೆ. ವಿಶ್ವ ಕ್ರಿಕೆಟ್ ನಲ್ಲಿ ಕೂಡ ಈತನ ಹೆಸರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದ್ದು 23 ವರ್ಷದ ಯುವ ಕ್ರಿಕೆಟಿಗ ಕೂಡ ಆಗಿರುವ ಕಾರಣ ಈತ ಆಲ್ ರೌಂಡ್ ವಿಭಾಗದಲ್ಲಿ ಕೂಡ ಹೆಸರನ್ನು ಸಂಪಾದಿಸಿದ್ದು ಹರಾಜು ಪ್ರಕ್ರಿಯೆಯಲ್ಲಿ ಪ್ರತಿಯೊಂದು ತಂಡಗಳು ಕೂಡ ಈತನನ್ನು ಖರೀದಿಸುವುದಕ್ಕೆ ಟಾರ್ಗೆಟ್ ಮಾಡೋದು ಕನ್ಫರ್ಮ್ ಎಂಬುದಾಗಿ ಮೂಲಗಳು ಹೇಳುತ್ತಿವೆ.

Advertisement

Brendon McMullen ಈಗಾಗಲೇ ಸ್ಕಾಟ್ಲೆಂಡ್ ದೇಶದ ಅತ್ಯಂತ ಉದಯೋನ್ಮುಖ ಆಟಗಾರರಲ್ಲಿ ಇವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದು ಸಿಗುವಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಲೆಕ್ಕಾಚಾರ ಹಾಕಲಾಗಿದೆ. ಸ್ಕಾಟ್ಲಂಡ್ ದೇಶದ ಪರವಾಗಿ 15 ಏಕದಿನ ಪಂದ್ಯಗಳಲ್ಲಿ ಎರಡು ಶತಕಗಳ ಜೊತೆಗೆ 540 ರನ್ನುಗಳನ್ನು ಬಾರಿಸಿದ್ದಾರೆ. ಬೌಲರ್ ಆಗಿ 24 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾನೆ. ಇನ್ನು ಟಿ ಟ್ವೆಂಟಿ ಫಾರ್ಮೆಟ್ ನಲ್ಲಿ ಆರು ಟಿ20 ಪಂದ್ಯಗಳಲ್ಲಿ 96 ರನ್ನುಗಳನ್ನು ಬಾರಿಸಿದ್ದು ಒಂದು ವಿಕೆಟ್ ಅನ್ನು ಕೂಡ ಕಬಳಿಸಿದ್ದಾನೆ. ಖಂಡಿತವಾಗಿ ಈತ ಕ್ರಿಕೆಟ್ ದುನಿಯಾದಲ್ಲಿ ಫ್ಯೂಚರ್ ಸೂಪರ್ ಸ್ಟಾರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಬಹುದಾಗಿದೆ.

Leave A Reply

Your email address will not be published.