ಗಾಯದಿಂದ ಮರಳಿ ಬಂದ ಹಾರ್ದಿಕ್ ಪಾಂಡ್ಯ, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ T20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ ಭಾರತವನ್ನು ದೊಡ್ಡ ಗೆಲುವಿನತ್ತ ಕೊಂಡೊಯ್ದರು. ಕುಟ್ಟಕ್‌ನ
ಬರಬಟಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹಾರ್ದಿಕ್ 28 ಎಸೆತಗಳಲ್ಲಿ ಅಜೇಯ 59 ರನ್‌ಗಳನ್ನು ಬಾರಿಸಿದರು.
ಭಾರತ ಆರಂಭದಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡ ಸಣ್ನದರ್ಭದಲ್ಲಿ ಪಾಂಡ್ಯ ಕ್ರೀಸ್‌ಗೆ ಬಂದರು. ನಂತರ ದಿಟ್ಟ ದಾಳಿಗೆ ಕೈ ಹಾಕಿ, 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 59 ರನ್ ಗಳಿಸಿ ಪಂದ್ಯವನ್ನು ಸಂಪೂರ್ಣವಾಗಿ ಭಾರತದ ಪರ ತಿರುಗಿಸಿದರು. ಅವರ ಈ ಅಧ್ಭೂತ ಇನಿಂಗ್ಸ್‌ನಿಂದಾಗಿ ಭಾರತ 175/6 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ಆ ನಂತರ ಎರಡನೇ ಇನ್ನಿಂಗ್ಸ್ ನಲ್ಲಿ ಬುಮ್ರಾ ಸೇರಿದಂತೆ ಭಾರತದ ಬೌಲರ್‌ಗಳು ಪ್ರಭಾವಶಾಲಿ ಬೌಲಿಂಗ್ ಪ್ರದರ್ಶಿಸಿ ದಕ್ಷಿಣ ಆಫ್ರಿಕಾವನ್ನು 74 ರನ್‌ಗಳಿಗೆ ಆಲ್‌ಔಟ್ ಮಾಡಿ ಭಾರತಕ್ಕೆ
101 ರನ್‌ಗಳ ಭರ್ಜರಿ ಗೆಲುವು ದೊರಕುವಂತೆ ಮಾಡಿದ್ದಾರೆ .
ಈ ಪಂದ್ಯದಲ್ಲಿ ಗೆಲುವಿನ ಪ್ರಮುಖ ಪಾತ್ರ ವಹಿಸಿದ ಹಾರ್ದಿಕ್ ಪಾಂಡ್ಯಗೆ ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿ ಕೊಡಲಾಯಿತು.






