Facebook: ಬಂದ್ ಆದ ಫೇಸ್ಬುಕ್ ಅನ್ನು ಮತ್ತೆ ತರೆಯುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಸುಲಭ ವಿಧಾನ.
ಫೇಸ್ಬುಕ್ (Facebook) ಇಡೀ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿರುವಂತಹ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಆಗಿದೆ. ಇನ್ನು ಫೇಸ್ಬುಕ್ ಖಾತೆಗಳು ಬ್ಲಾಕ್ ಆಗುವುದಕ್ಕೆ ಎರಡು ಕಾರಣಗಳಿರುತ್ತವೆ. ಮೊದಲನೆಯದಾಗಿ ಆ ಖಾತೆಯ ಬಳಕೆದಾರರೇ ಅದನ್ನು ಡಿ ಆಕ್ಟಿವೇಟ್ ಮಾಡಿರುತ್ತಾರೆ. ಎರಡನೇ ರೂಪದಲ್ಲಿ ಫೇಸ್ಬುಕ್ನ ಕಮ್ಯುನಿಟಿ ಗೈಡ್ ಲೈನ್ಸ್ (Facebook Community Guidelines) ಅನ್ನು ಉಲ್ಲಂಘನೆ ಮಾಡಿದ್ದಾರೆ ಫೇಸ್ಬುಕ್ ಆ ಖಾತೆಯನ್ನು ಬ್ಲಾಕ್ ಮಾಡಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಅಕೌಂಟ್ ಅನ್ನು ರಿಕವರಿ ಮಾಡಿಕೊಳ್ಳುವುದು ಹೇಗೆ ಎಂಬ ಸುಲಭ ವಿಧಾನವನ್ನು ಅಪೀಲ್ ಮೂಲಕ ತಿಳಿದುಕೊಳ್ಳೋಣ.
ಒಂದು ವೇಳೆ ನೀವು ಟೆಂಪರವರಿ ಆಗಿ ಅಕೌಂಟ್ ಅನ್ನು ಡಿ ಆಕ್ಟಿವೇಟ್ ಮಾಡಿದರೆ ಅದನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಒಂದು ವೇಳೆ ಪರಮನೆಂಟ್ ಅಕೌಂಟ್ ಡಿ ಆಕ್ಟಿವೇಟ್ ಮಾಡಿದರೆ 30 ದಿನಗಳ ಒಳಗೆ ಅದನ್ನು ರಿಕವರಿ ಮಾಡಿಕೊಳ್ಳುವಂತಹ ಅವಕಾಶವಿದ್ದು ಒಂದೊಂದೇ ವಿಧಾನವನ್ನು ಅನುಸರಿಸೋಣ ಬನ್ನಿ. ಮೊದಲ ಹೆಜ್ಜೆಯಾಗಿ ಫೇಸ್ಬುಕ್ ಅನ್ನು ಓಪನ್ ಮಾಡಿ. ಇಲ್ಲಿ ರಿಜಿಸ್ಟರ್ ಮಾಡಲಾಗಿರುವಂತಹ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಬೇಕು. ನಿಮಗೆ ಪಾಸ್ವರ್ಡ್ ತಿಳಿದಿದ್ದರೆ ಇದು ಸುಲಭವಾಗಿ ನಡೆಯುತ್ತದೆ ಒಂದು ವೇಳೆ ಪಾಸ್ವರ್ಡ್ ಮರೆತು ಹೋಗಿದ್ದರೆ ಫಾರ್ಗೆಟ್ ಪಾಸ್ವರ್ಡ್ ಅನ್ನು ಪ್ರೆಸ್ ಮಾಡಿ ನಂತರ ಅಲ್ಲಿ ಬರುವಂತಹ ಮೆಸೇಜ್ ಮೂಲಕ ಡಿ ಆಕ್ಟಿವೇಟ್ ಮಾಡಿರುವುದನ್ನು ಕ್ಯಾನ್ಸಲ್ ಮಾಡಬೇಕಾಗುತ್ತದೆ.
ಒಂದು ವೇಳೆ ಫೇಸ್ಬುಕ್ (Facebook) ನಿಮ್ಮ ಖಾತೆಯನ್ನು ಬ್ಲಾಕ್ ಮಾಡಿದ್ದರೆ ”Account Disabled” ಆಕ್ಷನ್ ಅನ್ನು ಪ್ರೆಸ್ ಮಾಡಬೇಕಾಗುತ್ತದೆ. ನೀವು ಏನಾದರೂ ತಪ್ಪು ಕೆಲಸ ಮಾಡಿದ್ದಲ್ಲಿ ಮಾತ್ರ ಫೇಸ್ಬುಕ್ ನಿಮ್ಮ ಖಾತೆಯನ್ನು ಬ್ಲಾಕ್ ಮಾಡುತ್ತದೆ. ಇದಾಗಿ ಇದನ್ನು ರಿಕವರಿ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಸಾಧ್ಯವೇ ಎಂದು ಹೇಳಬಹುದು. ಹೀಗಾಗಿ ಈ ಸಂದರ್ಭದಲ್ಲಿ ಮೊದಲಿಗೆ ಫೇಸ್ಬುಕ್ನ ಹೆಲ್ಪ್ ಸೆಂಟರ್ (Facebook Help Center) ಆಪ್ಷನ್ ಕ್ಲಿಕ್ ಮಾಡಬೇಕು. ಸಂದರ್ಭದಲ್ಲಿ ನಿಮ್ಮ ಖಾತೆಯ ಜೊತೆಗೆ ಏನಾಗಿದೆ ಎಂಬುದು ರಿಜಿಸ್ಟರ್ ಮಾಡಲಾಗಿರುವ ಇಮೇಲ್ ಮೂಲಕ ತಿಳಿದು ಬರುತ್ತದೆ. ನಿಮ್ಮ ಇಮೇಲ್ ಜೊತೆಗೆ ನಿಮ್ಮ ಅಧಿಕೃತ ನಂಬರ್ ಅನ್ನು ಕೂಡ ಹಾಕಿ. ಇಲ್ಲಿ ನಿಮ್ಮ ಐಡಿ ಪ್ರೂಫ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಒದಗಿಸಿ ಕಾರಣಗಳನ್ನು ಸರಿಯಾಗಿ ನೀಡಿ ಕಳುಹಿಸಿದರೆ ಫೇಸ್ಬುಕ್ ಪರಿಶೀಲಿಸಿ ನಿಮ್ಮ ಅಕೌಂಟ್ ರಿಕವರ್ ಆಗುತ್ತದೆಯೋ ಇಲ್ಲವೋ ಎಂಬುದರ ಕುರಿತಂತೆ ಅಧಿಕೃತ ಇ-ಮೇಲ್ ಅನ್ನು ಕಳುಹಿಸುತ್ತದೆ. ಈ ವಿಧಾನಗಳನ್ನು ಹಿಂಬಾಲಿಸುವ ಮೂಲಕ ಈ ರೀತಿಯಾಗಿ ಕೂಡ ನಿಮ್ಮ ಫೇಸ್ ಬುಕ್ ಐಡಿಯನ್ನು ವಾಪಾಸ್ ಪಡೆದುಕೊಳ್ಳಬಹುದಾಗಿದೆ.