Karnataka Times
Trending Stories, Viral News, Gossips & Everything in Kannada

Mobile Tips: ನಿಮ್ಮ ಮೊಬೈಲ್ ಕಳ್ಳತನವಾದಾಗ ಈ ಕೆಲಸ ಮಾಡಿದ್ರೆ ಬ್ಯಾಂಕ್ ವಿವರ ಹಣ ಸೇಫ್ ಮಾಡಬಹುದು.

Advertisement

ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನ ದುನಿಯಾದಲ್ಲಿ ಕಳ್ಳತನ ಮೋಸ ವಂಚನೆ ಎನ್ನುವುದು ದಿನ ಗಣನೀಯವಾಗಿ ಹೆಚ್ಚಾಗುತ್ತಿದೆ. ತರಲು ಪ್ರಮುಖವಾಗಿ ಬಹುತೇಕ ಎಲ್ಲರೂ ಕೂಡ ತಮ್ಮ ಜೀವನಕ್ಕೆ ಅತ್ಯಮೂಲ್ಯವಾಗಿರುವಂತಹ ದಾಖಲೆಗಳನ್ನು ಫೋನಿಗೆ ಕನೆಕ್ಟ್ ಮಾಡಿರುತ್ತಾರೆ. ಒಂದು ವೇಳೆ ಫೋನ್ ಕಳೆದಾಗ (Phone Theft) ಪ್ರತಿಯೊಬ್ಬರೂ ಕೂಡ ಭಯ ಪಡುವಂತಹ ವಿಚಾರ ಏನೆಂದರೆ ನಮ್ಮ ಬ್ಯಾಂಕ್ ಖಾತೆ (Bank Account) ಅಥವಾ ಹಣದ ಮೂಲಗಳಿಗೆ ಕಳ್ಳರು ಕನ್ನ ಹಾಕಬಹುದು ಎನ್ನುವ ಚಿಂತೆ. ಈ ಸಮಯದಲ್ಲಿ ನೀವು ಚಿಂತೆ ಮಾಡಿಕೊಳ್ಳಬೇಕಾದ ಅಗತ್ಯ ಇಲ್ಲ ಅದಕ್ಕೂ ಕೂಡ ಪರಿಹಾರವಿದೆ ತಿಳಿಯೋಣ ಬನ್ನಿ.

ಮೊದಲಿಗೆ ಬೇರೆಯವರ ಫೋನಿನಿಂದ ನಿಮ್ಮ ಕಸ್ಟಮರ್ ಕೇರ್ ಗೆ ಕರೆ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಲು ಹೇಳಬೇಕು. ಒಂದು ವೇಳೆ ನಿಮ್ಮ ಫೋನಿನಿಂದ ಬ್ಯಾಂಕಿಂಗ್ ವಿವರಗಳನ್ನು ಕದಿಯಲು ಪ್ರಯತ್ನಿಸಿದರೆ ಆಗ ಓಟಿಪಿ (OTP) ಇಲ್ಲದೆ ಅದನ್ನು ಪಡೆಯಲು ಕದ್ದವರಿಗೆ ಸಾಧ್ಯ ಇರುವುದಿಲ್ಲ. ಕೇವಲ ಇಷ್ಟು ಮಾತ್ರವಲ್ಲದೆ ನಿಮ್ಮ ಫೋನ್ ಕದ್ದ ಸಂದರ್ಭದಲ್ಲಿ UPI ಪೇಮೆಂಟ್ ಖಾತೆಗಳು ಕೂಡ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಕನೆಕ್ಟ್ ಆಗಿದ್ದರೆ ಅವುಗಳನ್ನು ಕೂಡ ನಿಷ್ಕ್ರಿಯಗೊಳಿಸಬೇಕು ಇಲ್ಲದಿದ್ದಲ್ಲಿ ಅಲ್ಲಿಂದಲೂ ಕೂಡ ಹಣವನ್ನು ಕದಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮೂರನೇ ಅಂಗವಾಗಿ ನಿಮ್ಮ ಬ್ಯಾಂಕ್ ನ ಸಿಬ್ಬಂದಿಗೆ ಕರೆ ಮಾಡಿ ಆನ್ಲೈನ್ ಬ್ಯಾಂಕಿಂಗ್ (Online Banking) ನ ಎಲ್ಲಾ ಸೇವೆಗಳನ್ನು ಕೂಡ ನಿಷ್ಕ್ರಿಯಗೊಳಿಸಲು ಹೇಳಿ. ಇದರಿಂದ ಕದ್ದ ವ್ಯಕ್ತಿ ಮೊಬೈಲ್ ಫೋನ್ ನಿಂದ ಆನ್ಲೈನ್ ಬ್ಯಾಂಕಿಂಗ್ ಸಂಬಂಧಿತ ಯಾವುದೇ ಟ್ರಾನ್ಸಾಕ್ಷನ್ ಮಾಡಲು ಸಾಧ್ಯವಿಲ್ಲ. ಇದೆಲ್ಲಾ ಆದ ನಂತರ ಕೊನೆಯದಾಗಿ ಹಾಗೂ ಪ್ರಮುಖವಾಗಿ ಪೊಲೀಸ್ ಕಂಪ್ಲೇಂಟ್ ಅನ್ನು ನೀಡುವ ಮೂಲಕ ನಿಮ್ಮ ಮೊಬೈಲ್ ಫೋನ್ ನಿಮಗೆ ವಾಪಸ್ ಸಿಗುವ ಸಾಧ್ಯತೆ ಕೂಡ ಹೆಚ್ಚಾಗಿ ಆ ಫೋನ್ ನಿಂದ ಬೇರೆ ಕೆಟ್ಟ ಕೆಲಸಗಳಿಗೆ ಬಳಕೆ ಆಗುವ ಸಾಧ್ಯತೆ ಕೂಡ ಕಡಿಮೆ ಆಗುತ್ತದೆ. ಇನ್ನು ಎಫ್ಐಆರ್ (FIR) ದಾಖಲೆ ಮಾಡಿರುವ ಪ್ರತಿಯನ್ನು ಕೂಡ ನಿಮ್ಮ ಜೊತೆಗೆ ತಪ್ಪದೆ ಇಟ್ಟುಕೊಳ್ಳಿ ಇದರಿಂದಾಗಿ ಮುಂದಿನ ದಿನಗಳಲ್ಲಿ ನಿಮಗೆ ಸಾಕಷ್ಟು ಪ್ರಯೋಜನವನ್ನು ಕೂಡ ಒದಗಿಸಬಹುದು. ಹೀಗಾಗಿ ಮೊಬೈಲ್ ಕಳೆದು ಹೋದಾಗ ಪ್ಯಾನಿಕ್ ಆಗಬೇಡಿ ಈ ವಿಧಾನಗಳನ್ನು ಫಾಲೋ ಮಾಡಿ.

Leave A Reply

Your email address will not be published.