Mobile Users: ದೇಶಾದ್ಯಂತ ಮೊಬೈಲ್ ಬಳಸುವ ಎಲ್ಲರಿಗೂ ಆಘಾತ ಇಲ್ಲಿದೆ ನೋಡಿ ಹೊಸ ರೂಲ್ಸ್.

Advertisement
ಈಗ ಹೊಸದಾಗಿ ಬಂದಿರುವಂತಹ ನಿಯಮಗಳ ಪ್ರಕಾರ ನಿಮ್ಮ 10 ಸಂಖ್ಯೆಗಳ ಮೊಬೈಲ್ ನಂಬರ್ ಯಾವುದೇ ಕ್ಷಣದಲ್ಲಿ ಕೂಡ ನಿಷ್ಕ್ರಿಯಗೊಳ್ಳಬಹುದಾಗಿದೆ. ಬನ್ನಿ ಹಾಗಿದ್ದರೆ ಇದರ ಹಿಂದಿನ ನಿಜವಾದ ಅಸಲಿಯತ್ತೇನು ಹಾಗೂ ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ. TRAI ಅಂದರೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ನೋಂದಾಯಿಸದೆ ಇರುವಂತಹ ಮೊಬೈಲ್ ಸಂಖ್ಯೆಗಳನ್ನು ಕೂಡಲೇ ನಿಷ್ಕ್ರಿಯಗೊಳಿಸುವಂತಹ ತಯಾರಿಯಲ್ಲಿದೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಒಮ್ಮೆ ನಿಷ್ಕ್ರಿಯಗೊಂಡ ನಂತರ ಮತ್ತೆ ಈ ಮೊಬೈಲ್ ಸಂಖ್ಯೆಯಿಂದ ಯಾವುದೇ ಫೋನ್ ಅಥವಾ ಮೆಸೇಜುಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಒಂದು ವೇಳೆ ಯಾರಾದರೂ ಪ್ರಚಾರದ ಉದ್ದೇಶಕ್ಕಾಗಿ ವೈಯಕ್ತಿಕ ಫೋನ್ ನಂಬರ್ ಗಳನ್ನು ಬಳಸುತ್ತಿದ್ದಾರೆ ಅಂತವರ ಸಂಖ್ಯೆಯನ್ನು TRAI ನಿಷ್ಕ್ರಿಯಗೊಳಿಸುವಂತಹ ಕೆಲಸವನ್ನು ಮಾಡುತ್ತಿದೆ. TRAI ಬಿಡುಗಡೆ ಮಾಡಿರುವಂತಹ ಕಟ್ಟುನಿಟ್ಟಿನ ನಿಯಮದ ಪ್ರಕಾರ ವೈಯಕ್ತಿಕ ನಂಬರ್ಗಳನ್ನು ಯಾವುದೇ ಪ್ರಚಾರದ ಉದ್ದೇಶದಿಂದ ಬಳಸುವಂತಿಲ್ಲ. ಸಾಮಾನ್ಯವಾಗಿ ವೈಯಕ್ತಿಕ ನಂಬರ್ ಎನ್ನುವುದು ಹತ್ತು ಸಂಖ್ಯೆಗಳನ್ನು ಹೊಂದಿರುತ್ತದೆ ಆದರೆ TRAI ಪ್ರಚಾರದ ದೃಷ್ಟಿಯಿಂದ ನಂಬರ್ ಅನ್ನು ಬಳಸುತ್ತಿದ್ದಾರೆ ಅವರಿಗೆ ಹೆಚ್ಚಿನ ಸಂಖ್ಯೆಯ ನಂಬರ್ ಗಳನ್ನು ನೀಡುತ್ತದೆ. ಈ ನಂಬರ್ ನಿಂದ ಬೇರೆ ಅವರಿಗೆ ಕರೆ ಮಾಡುವಾಗ ಇದು ಪ್ರಚಾರದ ನಂಬರ್ ಎಂಬುದಾಗಿ ತಿಳಿದು ಬರುತ್ತದೆ ಆದರೆ ರಿಸೀವ್ ಮಾಡುವುದು ಬೇರೆಯವರಿಗೆ ಬಿಟ್ಟ ವಿಚಾರ.
ಕೆಲವೊಮ್ಮೆ ಈ ಪ್ರಚಾರದ ಸಂಸ್ಥೆಗಳು ತಮ್ಮ ನಂಬರ್ ನಿಂದ ಯಾರಾದರೂ ಗ್ರಾಹಕರು ರಿಸಿವ್ ಮಾಡದೆ ಹೋದರೆ ತಮ್ಮ ವೈಯಕ್ತಿಕ ನಂಬರ್ ನಿಂದ ಪ್ರಚಾರಕ್ಕಾಗಿ ಕರೆಯನ್ನು ಮಾಡಲು ಪ್ರಾರಂಭಿಸುತ್ತಾರೆ. ಒಂದು ವೇಳೆ TRAI ಸಂಸ್ಥೆ ಇದನ್ನು ಕಂಡುಹಿಡಿದಲ್ಲಿ ಕೇವಲ ಐದು ದಿನಗಳ ಒಳಗಾಗಿ ನಿಮ್ಮ ನಂಬರ್ ಅನ್ನು ಕಾರ್ಯನಿರ್ವಹಿಸಿದಂತೆ ನಿಷ್ಕ್ರಿಯಗೊಳಿಸಿ ಬಿಡುತ್ತದೆ ಎನ್ನುವುದನ್ನು ಕೂಡ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.