Google Map: ಗೂಗಲ್ ಮ್ಯಾಪ್ ನಲ್ಲಿ ನಿಮ್ಮ Place Add ಮಾಡುವ ವಿಧಾನ ಇಲ್ಲಿದೆ

Advertisement
ನೀವು ಸಾಮಾನ್ಯವಾಗಿ ಗೂಗಲ್ ಮ್ಯಾಪ್ ಓಪನ್ ಮಾಡಿದಾಗ ಹಲವಾರು ಸ್ಥಳಗಳು ಮತ್ತು ಅಂಗಡಿ ಮುಂಗಟ್ಟುಗಳ ಹೆಸರು ನಿಮಗೆ ಅದರಲ್ಲಿ ಕಂಡು ಬರುತ್ತದೆ. ಒಂದು ವೇಳೆ ನಿಮ್ಮ ಸ್ಥಳ ಅಥವಾ ಅಂಗಡಿ ಮುಂಗಟ್ಟುಗಳು ಕೂಡ ಗೂಗಲ್ ಮ್ಯಾಪ್(Google Map) ನಲ್ಲಿ ಆ ರೀತಿ ಬರಬೇಕು ಎಂದರೆ ಯಾವ ವಿಧಾನವನ್ನು ಹಿಂಬಾಲಿಸಬೇಕು ಎನ್ನುವುದರ ಕುರಿತಂತೆ ನಿಮಗೆ ಗೊಂದಲ ಇದ್ದರೆ ಈ ಲೇಖನಿಯಲ್ಲಿ ನಾವು ಹೇಳುವಂತಹ ಸುಲಭ ವಿಧಾನಗಳನ್ನು ಹಿಂಬಾಲಿಸಿ, ನಿಮ್ಮ ಸ್ಥಳವನ್ನು ಕೂಡ ಗೂಗಲ್ ಮ್ಯಾಪ್ ನಲ್ಲಿ ಆಡ್ (Add) ಮಾಡಿ.
ಮೊದಲಿಗೆ ಗೂಗಲ್ ಮ್ಯಾಪ್ ಅಪ್ಲಿಕೇಶನ್ (Application) ಅನ್ನು ಓಪನ್ ಮಾಡಬೇಕು. ನಂತರ ಮೊದಲಿಗೆ ಮ್ಯಾಪ್ ನಲ್ಲಿ ನಿಮ್ಮ ಸ್ಥಳವನ್ನು ಸರಿಯಾಗಿ ಪಾಯಿಂಟ್ ಮಾಡಬೇಕು. ನಂತರ ಮೇಲಿನ ಎಡಬಾಗದಲ್ಲಿರುವ ಮೂರು ಗೆರೆಗಳ ಆಪ್ಷನ್ ಅನ್ನು ಕ್ಲಿಕ್ ಮಾಡಿ Add Missing Place ಅನ್ನು ಆಯ್ಕೆ ಮಾಡಬೇಕು. ನಂತರ ಅದರಲ್ಲಿ ನಿಮ್ಮ ಅಂಗಡಿ ಅಥವಾ ಕಂಪನಿಯ ಹೆಸರನ್ನು ಹಾಕಬೇಕು. ಅದಾದ ಮೇಲೆ ಕೆಳಗೆ ಬರುವಂತಹ ಅಡ್ರೆಸ್ ಬಟನ್ ಅನ್ನು ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಲೊಕೇಶನ್ ನ Exact ಸ್ಥಳವನ್ನು ಪಾಯಿಂಟ್ ಮಾಡಿ ಗುರುತಿಸಿಕೊಳ್ಳಬೇಕು.
ಇದಾದ ನಂತರ ನಿಮ್ಮ ಕಚೇರಿ ಅಥವಾ ಆಫೀಸ್ ಯಾವ ಕ್ಯಾಟಗರಿಯಲ್ಲಿ ಬರುತ್ತದೆ ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಬೇಕು. ಇನ್ನು ನಿಮ್ಮ ಆಫೀಸ್ ಅಥವಾ ಕಚೇರಿ ಎಷ್ಟು ದಿನಗಳ ಕಾಲ ಕೆಲಸ ಮಾಡುತ್ತದೆ ಹಾಗೂ ಯಾವ ಸಮಯದಿಂದ ಯಾವ ಸಮಯದವರೆಗೆ ತೆರೆದಿರುತ್ತದೆ ಎಂಬ ಡೀಟೇಲ್ಸ್ (Details) ಅನ್ನು ಕೂಡ ಆಡ್ ಮಾಡಬೇಕು. ನಂತರ ನಿಮ್ಮ ವೆಬ್ಸೈಟ್ ಹಾಗೂ ಮೊಬೈಲ್ ನಂಬರ್ ಕೂಡ ಆಡ್ ಮಾಡಬಹುದು ಹಾಗೂ ಫೋಟೋವನ್ನು ಕೂಡ ಸೇರಿಸಬಹುದಾಗಿದೆ. ಇವೆಲ್ಲ ಕೆಲಸವನ್ನು ಮುಗಿಸಿದ ನಂತರ ನಿಮಗೆ ಗೂಗಲ್ನಿಂದ ರಿವ್ಯೂ ಮಾಡುತ್ತಿರುವಂತಹ ನೋಟಿಫಿಕೇಶನ್ ಬರುತ್ತದೆ. ಎಲ್ಲವು ಸರಿಯಾಗಿದ್ದರೆ ಗೂಗಲ್ ನಲ್ಲಿ ನಿಮ್ಮ ಲೊಕೇಶನ್ ಅನ್ನು ಆಡ್ ಮಾಡಲಾಗುತ್ತದೆ.