ಇತ್ತೀಚಿಗೆ ಏರ್ಟೆಲ್ (Airtel) ತನ್ನ ರಿಚಾರ್ಜ್ ಬೆಲೆಯನ್ನು ಹೆಚ್ಚಿಸಿದ್ದರಿಂದ ತನ್ನ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಈಗ ಹಬ್ಬದ ಆಫರ್ ಆಗಿ ದೀರ್ಘಾವಧಿಯ ವ್ಯಾಲಿಡಿಟಿ ಪ್ಲಾನನ್ನು ಅತಿ ಕಡಿಮೆ ಬೆಲೆಗೆ ಪರಿಚಯಿಸಿದೆ. ಕೇವಲ 155 ರೂಪಾಯಿಗಳ ಮಾಸಿಕ ವೆಚ್ಚದ ರಿಚಾರ್ಜ್ಗೆ ಹೆಚ್ಚಿನ ಸೌಲಭ್ಯವನ್ನು ಏರ್ಟೆಲ್ ಒದಗಿಸಿ ಕೊಡಲಿದೆ.
155 ರೂಪಾಯಿಗಳ ಮಾಸಿಕ ವೆಚ್ಚದ ರಿಚಾರ್ಜ್ ಪ್ಲಾನ್!
ಏರ್ಟೆಲ್ ಪೋರ್ಟ್ ಪೋಲಿಯೋ (Airtel Portfolio) ದಲ್ಲಿ ಹೊಸ ರಿಚಾರ್ಜ್ ಪ್ಲಾನ್ ಸೇರ್ಪಡೆಗೊಂಡಿದ್ದು, ಅತಿ ಕಡಿಮೆ ರಿಚಾರ್ಜ್ ಮಾಡಿಸಿ ದೀರ್ಘಾವಧಿಯ ವ್ಯಾಲಿಡಿಟಿಯನ್ನು ಪಡೆಯಬಹುದಾಗಿದೆ. ಜೊತೆಗೆ ಅನ್ಲಿಮಿಟೆಡ್ ಫೋನ್ ಕಾಲ್ಸ್ ಸೌಲಭ್ಯವನ್ನು ಆಡ್ ಆನ್ ಮಾಡಲಾಗಿದೆ.
155 ರೂಪಾಯಿಗಳ ಮಾಸಿಕ ವೆಚ್ಚದ ರಿಚಾರ್ಜ್ಗೆ 180 ದಿನಗಳ ವ್ಯಾಲಿಡಿಟಿ ನೀಡಲಾಗುವುದು. ಅಂದರೆ 930 ರೂಪಾಯಿಗಳನ್ನು ರಿಚಾರ್ಜ್ ಮಾಡಿಸಿದರೆ ಆರು ತಿಂಗಳವರೆಗಿನ ವ್ಯಾಲಿಡಿಟಿ ಪಡೆಯಬಹುದು. ಅಲ್ಲಿಗೆ ಕೇವಲ 155 ರೂಪಾಯಿಗಳ ಮಾಸಿಕ ವೆಚ್ಚದಲ್ಲಿ ದೀರ್ಘಾವಧಿಯ ರಿಚಾರ್ಜ್ ಪ್ಲಾನ್ ನಿಮಗೆ ದೊರೆತಂತೆ ಆಗುತ್ತದೆ. ಅನಿಯಮಿತ ಕರೆ ಸೌಲಭ್ಯದ ಜೊತೆಗೆ ಪ್ರತಿದಿನ 50 SMS ಉಚಿತವಾಗಿ ಪಡೆದುಕೊಳ್ಳಬಹುದು.
5G ಇಂಟರ್ನೆಟ್ ಸೌಲಭ್ಯ!
1.5GB ಡಾಟಾ ವನ್ನು ಫೈವ್ ಜಿ ಸ್ಪೀಡ್ನೊಂದಿಗೆ ಪಡೆದುಕೊಳ್ಳಬಹುದು. ಜಿಯೋಗೆ ಕಂಪೇರ್ ಮಾಡಿದರೆ ಆರ್ಥಿಕವಾಗಿ ಹೆಚ್ಚು ಬೆನಿಫಿಟ್ ಸಿಗಲಿದೆ.
ಒಂದು ವರ್ಷದ ರಿಚಾರ್ಜ್ ಪ್ಲಾನ್!
ಪ್ರತಿ ತಿಂಗಳು ರಿಚಾರ್ಜ್ ಮಾಡಿಸುವ ತೊಂದರೆ ತಪ್ಪಿಸಿಕೊಳ್ಳಲು ನೀವು ಏರ್ಟೆಲ್ ಈ ಹೊಸ ರಿಚಾರ್ಜ್ ಪ್ಲಾನ್ ಆಯ್ದುಕೊಳ್ಳಬಹುದು. ರಿಚಾರ್ಜ್ ಯೋಜನೆಯ 3359 ರೂಪಾಯಿಗಳದ್ದಾಗಿರುತ್ತದೆ. ಈ ಯೋಜನೆಯಲ್ಲಿ ಸಾಕಷ್ಟು ಪ್ರೀಮಿಯಂ ಬೆನಿಫಿಟ್ಸ್ ಸಿಗಲಿದೆ. ಏರ್ಟೆಲ್ ರಿಚಾರ್ಜ್ ಪ್ಲಾನಿನ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.