Karnataka Times
Trending Stories, Viral News, Gossips & Everything in Kannada

UPI: ಗೂಗಲ್ ಪೇ, ಫೋನ್ ಪೇ ಬಳಸುವ 90% ಜನರಿಗೆ ಈ ವಿಷಯ ಗೊತ್ತಿಲ್ಲ

ನಾವು ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿರುವಂತಹ ಕೆಲಸವನ್ನು ನೀವು ಸಾಕಷ್ಟು ಬಾರಿ ಮಾಡಿ ಪಶ್ಚಾತಾಪಟ್ಟಿರಬಹುದು. UPI ಮೂಲಕ ಪೇಮೆಂಟ್ ಮಾಡಲು ಹೋಗಿ ತಪ್ಪಾಗಿ ಅದನ್ನು ಬೇರೆಯವರ ಸಂಖ್ಯೆಗೆ ಕಳುಹಿಸಿರುವ ಸಾಧ್ಯತೆ ಕೂಡ ಇರುತ್ತದೆ. ಒಂದು ವೇಳೆ ಹೀಗೆ ಮಾಡಿದಾಗ ಅದನ್ನು ವಾಪಸ್ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

Advertisement

ಇತ್ತೀಚಿನ ದಿನಗಳಲ್ಲಿ ಬೀದಿ ಬದಿಯ ವ್ಯಾಪಾರಿಯಿಂದ ಹಿಡಿದು ದೊಡ್ಡ ಮಟ್ಟದ ವ್ಯಾಪಾರಿಗಳವರೆಗೂ ಕೂಡ ಡಿಜಿಟಲ್ ಟ್ರಾನ್ಸಾಕ್ಷನ್(Digital Transaction) ಲಭ್ಯವಿದೆ. ಡಿಜಿಟಲೀಕರಣದಲ್ಲಿ ಭಾರತ ದೇಶ ಇತ್ತೀಚಿನ ವರ್ಷಗಳಲ್ಲಿ ಪ್ರಾರಂಭಿಸಿರುವ ಕ್ರಾಂತಿ ನಿಜಕ್ಕೂ ಕೂಡ ಅಸಮಾನ್ಯ. ಇನ್ನು ನಾವು ಯಾವುದೇ ವಸ್ತುವನ್ನು ಖರೀದಿಸಿದರು ಕೂಡ ಅದನ್ನು ಹಣದ ಮೂಲಕ ಪಾವತಿಸಲು UPI ವಿಧಾನಗಳಾಗಿರುವ ಫೋನ್ ಪೇ ( Phone Pay) ಅಥವಾ ಗೂಗಲ್ ಪೇ (Google Pay) ಸೇರಿದಂತೆ ಇನ್ನಿತರ ಆಪ್ಷನ್ ಗಳನ್ನು ಆಯ್ಕೆ ಮಾಡುತ್ತೇವೆ. ಹೀಗಾಗಿ ಈ ಸಂದರ್ಭದಲ್ಲಿ ಹಣ ವರ್ಗಾವಣೆ ಮಾಡುವುದಕ್ಕಿಂತ ಮುಂಚೆ ಇಲ್ಲಿ ನಾವು ಹೇಳಲಾಗಿರುವಂತಹ ಕೆಲವೊಂದು ಅಂಶಗಳನ್ನು ಪ್ರಮುಖವಾಗಿ ಗಮನಿಸಿ.

Advertisement

ಮೊದಲಿಗೆ ನೀವು ನಮೂದಿಸುವ ಆ ನಂಬರ್ ಅನ್ನು ಮೊದಲಿಗೆ ಒಂದು ನೀವೇ ಹಾಕಿ ಇಲ್ಲವೇ ಈಗಾಗಲೇ ಆ ಕಾಂಟಾಕ್ಟ್ ನಂಬರ್ ನಿಮ್ಮ ಬಳಿ ಇದ್ದಲ್ಲಿ ಅದನ್ನು ಪರೀಕ್ಷಿಸಿ ಹಾಕಿ. ಒಮ್ಮೆ ಅವರ ಡಿಟೇಲ್ಸ್ ಅನ್ನು ಹಾಕಿದ ನಂತರ ಪರೀಕ್ಷಿಸಿ. ಹೀಗಿದ್ದು ಕೂಡ ನೀವು ಒಂದುವೇಳೆ ತಪ್ಪಾಗಿ ಬೇರೆಯವರ ಖಾತೆಗೆ ಹಣವನ್ನು ವರ್ಗಾಯಿಸಿದ್ದಾರೆ ಅದನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವ ವಿಧಾನಗಳನ್ನು ತಿಳಿಯೋಣ. ಒಂದು ವೇಳೆ ನೀವು ಗೊತ್ತಿಲ್ಲದೆ ಬೇರೆಯವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ ನೀವು ಮಾಡಿರುವ ಅಪ್ಲಿಕೇಶನ್(UPI Apps) ನಲ್ಲಿ ಮೊದಲಿಗೆ ಈ ಕುರಿತಂತೆ ದೂರನ್ನು ನೀಡಬೇಕು. ಅವರ ಕಸ್ಟಮರ್ ಕೇರ್ ಗೆ ಈ ಕುರಿತಂತೆ ದೂರನ್ನು ಸಲ್ಲಿಸಬಹುದಾಗಿದೆ. ಒಂದು ವೇಳೆ ಆ ಅಪ್ಲಿಕೇಶನ್ ವಿಭಾಗದಿಂದ ಯಾವುದೇ ಸರಿಯಾದ ರೆಸ್ಪಾನ್ಸ್ ಬರದೇ ಹೋದರೆ RBI ನ Ombudsman ಅನ್ನು ಸಂಪರ್ಕಿಸಬಹುದಾಗಿದೆ.

Advertisement

ಒಂದು ವೇಳೆ ತಪ್ಪಾಗಿ ಹಣವನ್ನು ಟ್ರಾನ್ಸ್ಯಾಕ್ಷನ್ ಮಾಡಿದಾಗ ಅಥವಾ ನೀವು ತಪ್ಪಾಗಿ ಹಣವನ್ನು ಟ್ರಾನ್ಸ್ಯಾಕ್ಷನ್ ಮಾಡಿದ ಮೇಲು ಕೂಡ ಅದಕ್ಕೆ ಸಂಬಂಧಪಟ್ಟ ಅಪ್ಲಿಕೇಶನ್ ಕಸ್ಟಮರ್ ಕೇರ್ ನಿಮಗೆ ಸರಿಯಾಗಿ ಪ್ರತಿಸ್ಪಂದನೆ ನೀಡದಿದ್ದಾಗ ನೀವು ಇಲ್ಲಿ ದೂರನ್ನು ದಾಖಲಿಸಬಹುದಾಗಿದೆ. Ombudsman ಅಂದರೆ ಈ ರೀತಿಯ ಬ್ಯಾಂಕಿಂಗ್ ಕೊರತೆಗಳನ್ನು ನಿವಾರಿಸಲು ಇರುವಂತಹ RBI ನಿಯೋಜಿಸಿರುವಂತಹ ಹಿರಿಯ ಅಧಿಕಾರಿ. ಬ್ಯಾಂಕಿಂಗ್ ಶರತ್ತು 8ರ ಅಡಿಯಲ್ಲಿ ನಿರ್ದಿಷ್ಟ ಪಡಿಸಿರುವ ಕೆಲವು ದೂರುಗಳನ್ನು ಈ ಮೂಲಕ ನೀವು ಪರಿಹರಿಸಿಕೊಳ್ಳಬಹುದಾಗಿದೆ. ಇದಕ್ಕೂ ಮುನ್ನವೇ ನೀವು ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಎರಡೆರಡು ಬಾರಿ ಅದನ್ನು ಚೆಕ್ ಮಾಡುವುದು ಉತ್ತಮ.

Leave A Reply

Your email address will not be published.