Karnataka Times
Trending Stories, Viral News, Gossips & Everything in Kannada

WhatsApp: ಬರಲಿದೆ ವಾಟ್ಸಾಪ್ ನಲ್ಲಿ ಹೊಸ ಫೀಚರ್ ಚಾಟ್ ಲಾಕ್! ಇದರ ಉಪಯೋಗ ಕೇಳಿದ್ರೆ ಖುಷ್ ಆಗ್ತೀರಾ.

Advertisement

ಮೆಟಾ (Meta) ಮಾಲೀಕತ್ವದ ಮೆಸೆಜಿಂಗ್ ಪ್ಲಾಟ್ ಫಾರ್ಮ್(Platform) ಆಗಿರುವ ವಾಟ್ಸ್ ಆಪ್ (whatsapp) ನಲ್ಲಿ ಹಲವಾರು ವೈಶಿಷ್ಟ್ಯತೆಗಳನ್ನು ಹೊರ ತರಲಾಗುತ್ತಿದೆ. ವಿಶೇಷವಾಗಿ ಸಂದೇಶಗಳನ್ನು ಅಥವಾ ಚಾಟ್ ಗಳನ್ನು ಲಾಕ್ ಮಾಡಲು ಅಥವಾ ಹೈಡ್ ಮಾಡಲು ಈ ಫೀಚರ್ ನಿಂದ ಸಾಧ್ಯ. ಹೆಚ್ಚಾಗಿ ಗೌಪ್ಯತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಬಳಕೆದಾರರಿಗೆ ಸಹಾಯಕವಾಗಲು ಈ ಫೀಚರ್ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು webatinfo ವರದಿ ಮಾಡಿದೆ.

ಏನಿದು ಚಾಟ್ ಲಾಕ್?:

ಚಾಟ್ ಲಾಕ್ (Chat Lock) ಅನ್ನು ಬಳಕೆದಾರರು ಫಿಂಗರ್ ಪ್ರಿಂಟ್ (Finger Print) ಅಥವಾ ಪಾಸ್ ಕೋಡ್ ಬಳಸಿ ಚಾಟ್ ಲಾಕ್ ಮಾಡಬಹುದು. ಯಾರಾದ್ರೂ ನಿಮ್ಮ ಮೊಬೈಲ್ ನಿಂದ ಚಾಟ್ ಲಾಗ್ ತೆರೆಯಲು ಪ್ರಯತ್ನಿಸಿ ಅದು ಸರಿಯಾದ ದೃಢೀಕರಣವನ್ನು ನೀಡದೆ ಇದ್ದರೆ, ಚಾಟ್ ಓಪನ್ ಮಾಡಲು ಈಗಾಗಲೇ ಇರುವ ಚಾಟ್ ಅನ್ನು ಡೀಲಿಟ್ (Delete) ಮಾಡಲು ಕೇಳಲಾಗುತ್ತದೆ. ಅಂದರೆ ಈ ಪ್ರಕ್ರಿಯೆಯಲ್ಲಿ ಈವರೆಗೆ ಇರುವ ಎಲ್ಲಾ ಚಾಟ್ ಗಳು ಕೂಡ ಡಿಲೀಟ್ ಆಗಬಹುದು. ಹಾಗೊಮ್ಮೆ ಡಿಲೀಟ್ ಆದರೆ ನಿಮ್ಮ ಚಾಟ್ ಯಾರೋ ಓದಲು ಪ್ರಯತ್ನಿಸಿದ್ದಾರೆ ಎಂಬುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು.

ಲಾಕ್ ಚಾಟ್ ನ ಇನ್ನೊಂದು ಪ್ರಯೋಜನ ಅಂದ್ರೆ ಫೋಟೋಗಳು ಮತ್ತು ವಿಡಿಯೋಗಳು ಮೊಬೈಲ್ ಗ್ಯಾಲರಿಯಲ್ಲಿ (Gallery ) ಸೇವ್ ಆಗಲು ನೀವು ಮೊದಲು ಖಚಿತ ಪಡಿಸಬೇಕು ನಂತರವಷ್ಟೇ ಇದರಲ್ಲಿ ಫೋಟೋ ಅಥವಾ ವಿಡಿಯೋಗಳು ಸೇವ್ ಆಗುತ್ತವೆ. ಈ ಮೂಲಕ ನಿಮ್ಮ ಚಾಟ್ ಅನ್ನು ಖಾಸಗಿಯಾಗಿ ಇಟ್ಟುಕೊಳ್ಳಲು ಸಹಾಯಕವಾಗುತ್ತದೆ. ಸದ್ಯ ಲಾಕ್ ಚಾರ್ಟ್ ಫೀಚರ್ ಅಭಿವೃದ್ಧಿಯ ಹಂತದಲ್ಲಿದ್ದು ಸದ್ಯದಲ್ಲಿಯೇ ವಿನೂತನ ಫೀಚರ್ ಬಿಡುಗಡೆಯಾಗಲಿದೆ ಎಂದು ವಾಟ್ಸಾಪ್ ಕಂಪನಿ ಮಾಹಿತಿ ನೀಡಿದೆ.

Leave A Reply

Your email address will not be published.