Recharge: ರಾಂಗ್ ನಂಬರ್ ಗೆ ರೀಚಾರ್ಜ್ ಮಾಡಿದ್ದೀರಾ? ಚಿಂತೆ ಬೇಡ ಹೀಗೆ ಮಾಡಿದ್ರೆ ಸಿಗುತ್ತೆ ಹಣ!
ಸಾಕಷ್ಟು ಬಾರಿ ತಪ್ಪಾದ ನಂಬರ್ ಗೆ ರಿಚಾರ್ಜ್ (Recharge) ಮಾಡಿ ಹಣ ಕಳೆದುಕೊಂಡವರು ಇದ್ದಾರೆ. ನೀರಿನಲ್ಲಿ ಹುಣಸೆಹಣ್ಣು ತೊಳೆದಂತೆ ಆಯಿತು ಎಂದು ಹಲವರು ಭಾವಿಸುತ್ತಾರೆ ಅಂದರೆ ಹೋದ ಹಣ ಮತ್ತೆ ತಿರುಗಿ ವಾಪಸ್ ಬರುವುದಿಲ್ಲ ಎಂದು ಅಂದುಕೊಳ್ಳುತ್ತಾರೆ. ಆದರೆ ನೀವೇನಾದ್ರೂ ಹೀಗೆ ತಪ್ಪಾಗಿ ಬೇರೆ ನಂಬರ್ ಗೆ ರಿಚಾರ್ಜ್ (Recharge) ಮಾಡಿದರೆ ಅದನ್ನ ಹಿಂತಿರುಗಿ ಪಡೆಯಲು ಕೂಡ ಮಾರ್ಗಗಳಿವೆ. ಇದಕ್ಕಾಗಿ ಟೆಲಿಕಾಂ ಆಪರೇಟರ್ ಗಳು ಮತ್ತು ಸರ್ಕಾರದ ಕೆಲವು ವ್ಯವಸ್ಥೆ ನಿಮಗೆ ಸಹಾಯ ಮಾಡಬಹುದು. ಅಂತಹ ಮಾರ್ಗಗಳು ಯಾವವು ನೋಡೋಣ ಬನ್ನಿ.
ಕಸ್ಟಮರ್ ಕೇರ್ ಸಂಪರ್ಕ ಮಾಡಿ:
ಒಂದು ವೇಳೆ ನೀವು ತಪ್ಪು ನಂಬರ್ ಗೆ ರೀಚಾರ್ಜ್ ಮಾಡಿದರೆ ಮೊದಲು ಸಂಬಂಧಪಟ್ಟ ಟೆಲಿಕಾಂ ಕಂಪನಿಯ ಕಸ್ಟಮರ್ ಕೇರ್ ಗೆ ಕರೆ ಮಾಡಬೇಕು ಅಥವಾ ಎಸ್ಎಂಎಸ್ ಕೂಡ ಕಳುಹಿಸಬಹುದು. ನೀವು ತಪ್ಪಾದ ನಂಬರ್ ಗೆ ರಿಚಾರ್ಜ್ ಮಾಡಿದ್ದೀರಿ ಎನ್ನುವುದು ನಿಮ್ಮ ಗಮನಕ್ಕೆ ಬಂದ ತಕ್ಷಣ ಈ ಕೆಲಸ ಮಾಡಿ. ನೀವು ಒಂದು ಅಥವಾ ಎರಡು ನಂಬರ್ ತಪ್ಪಾಗಿ ಟೈಪ್ ಮಾಡಿ ರಿಚಾರ್ಜ್ ವ್ಯತ್ಯಾಸವಾಗಿದ್ದರೆ ಈ ಎಲ್ಲಾ ವಿವರಗಳನ್ನು ಕಸ್ಟಮರ್ ಕೇರ್ ತಿಳಿಸಬೇಕು. ಯಾವ ದಿನಾಂಕದಂದು ರಿಚಾರ್ಜ್ ಮಾಡಲಾಗಿದೆ, ಎಷ್ಟು ಮೊತ್ತ ಯಾವ ಪ್ಲಾನ್ ಎಲ್ಲವನ್ನು ಕಸ್ಟಮರ್ ಕೇರ್ ತಿಳಿಸಬೇಕು.
ಬಳಿಕ ಸಂಬಂಧಪಟ್ಟ ಟೆಲಿಕಾಂ ಕಂಪನಿಗೆ ಈ ಮೇಲ್ ಕಳುಹಿಸಬೇಕು. ಏರ್ಟೆಲ್ ಮೇಲ್ ಐಡಿ [email protected] ಜಿಯೋ ಮೇಲ್ ಐಡಿ [email protected] ಹಾಗೂ ವಿ ಐ ಕಸ್ಟಮರ್ ಮೇಲ್ ಐಡಿ [email protected] ಇದಕ್ಕೆ ನೀವು ಮೇಲ್ ಕಳುಹಿಸಬಹುದು ಸಂಬಂಧ ಪಟ್ಟ ಕಂಪನಿ ನಿಮ್ಮ ಮೇಲ್ ಹೋಗುತ್ತಿದ್ದ ಹಾಗೆ ಅದರ ಬಗ್ಗೆ ತನಿಖೆ ನಡೆಸಿ ನಿಮ್ಮ ಹಣ ಹಿಂತಿರುಗಿ ಸಿಗುವಲ್ಲಿ ಸಹಾಯ ಮಾಡಬಹುದು.
ಸರ್ಕಾರಿ ಪೋರ್ಟಲ್ ಮೂಲಕ ದೂರು ದಾಖಲಿಸಿ:
ಟೆಲಿಕಾಂ ಕಂಪನಿ ಗೆ ದೂರು ನೀಡಿದ ನಂತರವೂ ನಿಮ್ಮ ರಿಚಾರ್ಜ್ ಹಿಂತಿರುಗಿ ಸಿಗದೇ ಇದ್ದರೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ-ಸರ್ಕಾರಿ ಪೋರ್ಟಲ್ ಅನ್ನು ಕೂಡ ಸಂಪರ್ಕಿಸಬಹುದು ಅವರ ಕಸ್ಟಮರ್ ಸಂಖ್ಯೆ ಹೀಗಿದೆ 1800-11-4000 ಅಥವಾ 1915… ಅಥವಾ ಅವರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ದೂರನ್ನು ದಾಖಲಿಸಬಹುದು. ಎನ್ ಸಿ ಎಚ್ ವಾಟ್ಸಪ್ ಮೂಲಕ ಇದೀಗ ನಿಮ್ಮ ದೂರನ್ನು ನೋಂದಾಯಿಸಬಹುದು.
ಇನ್ನು ನೀವು ದೂರು ನೀಡಲು ಇನ್ನೂ ಕೆಲವು ಮಾರ್ಗಗಳೆಂದರೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸರ್ಕಾರಿ ಪೋರ್ಟ್ ಗಳ ಆಪ್ ಡೌನ್ ಲೋಡ್ ಕೂಡ ಮಾಡಿಕೊಂಡು ಅದರಲ್ಲಿಯೂ ದೂರನ್ನು ದಾಖಲಿಸಬಹುದು. ನಿಮ್ಮ ದೂರು ಸರಿಯಾಗಿದ್ದರೆ ನೀವು ತಕ್ಷಣವೇ ಕ್ರಮ ಕೈಗೊಂಡಿದ್ದರೆ ಹಾಗೆ ನೀವು ರಿಚಾರ್ಜ್ ಮಾಡಿದ ಸಂಖ್ಯೆ ಒಂದು ಎರಡು ಸಂಖ್ಯೆಯಲ್ಲಿ ಬದಲಾವಣೆ ಆಗಿದ್ದರೆ ನಿಮ್ಮ ತಪ್ಪಾದ ರಿಚಾರ್ಜ್ ಹಣ ವಾಪಸ್ ಸಿಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.