SIM Card: ಸಿಮ್ ಹೊಂದಿರುವ ಪ್ರತಿಯೊಬ್ಬರಿಗೂ ಮಧ್ಯರಾತ್ರಿಯೇ ಟೆಲಿಕಾಂ ಕಂಪನಿ ಹೊಸ ಆದೇಶ!
ಹಿಂದೆಲ್ಲ ಬೇರೆ ಅವರಿಗೆ ನಾವು ಕರೆ ಮಾಡಲು ಮಾತ್ರ ರೀಚಾರ್ಜ್ ಮಾಡಿದರೆ ಸಾಕಿತ್ತು . ಹಾಗಾಗಿ ಎರಡು ಮೂರು ಸಿಮ್ ಇರುವವರು ಕೂಡ ಯಾವುದಾದರೂ ಒಂದು ಸಿಮ್ ಗೆ ರಿಚಾರ್ಜ್ ಮಾಡಿ ಬಿಡುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ. ಬೇರೆ ಅವರ ಕರೆಯನ್ನು ನಾವು ಸ್ವೀಕರಿಸಲು ಕೂಡ ಕರೆನ್ಸಿ ಹಾಕಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಿದ್ದು ಕೆಲವರು ಒಂದು ಸಿಮ್ ಮಾತ್ರ ಕರೆನ್ಸಿ ಹಾಕಿ ಉಳಿದ ಸಿಮ್ (sim) ಹಾಗೆ ಬಿಟ್ಟು ಬಿಡುತ್ತಾರೆ. ಕರೆನ್ಸಿ ಹಾಕದಿರುವ ಸಿಮ್ ನ ವ್ಯಾಲಿಡಿಟಿ ಇರುತ್ತಾ, ಮತ್ತೆ ಆ ಸಿಮ್ ಬ್ಲಾಕ್ ಆಗುತ್ತಾ ಎನ್ನುವ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಎರಡು ಸಿಮ್ ಬಳಸುವವರ ಸಾಮಾನ್ಯ ಕಾರಣ ಎಂದರೆ ಒಂದಿ ವೈಯಕ್ತಿಕ ಉದ್ದೇಶಕ್ಕೆ ಇನ್ನೊಂದು ಕೆಲಸ ನಿಮಿತ್ತ ಬಳಸುವುದು ಎನ್ನಬಹುದು. ಆದರೆ ಎರಡಕ್ಕೂ ರಿಚಾರ್ಜ್ ಮಾಡಬೇಕೆನ್ನುವಾಗ ಬಳಕೆ ದುಬಾರಿ ಎನಿಸಿ ಒಂದನ್ನು ಮಾತ್ರವೇ ಬಳಸುತ್ತಾರೆ. ರಿಚಾರ್ಜ್ (Recharge) ಮಾಡದ ಸಿಮ್ ಆ್ಯಕ್ಟಿವೇಟ್ ಇರಲಾರದು. ಹಾಗೆಂದು ನೀವು ರಿಚಾರ್ಜ್ ಮಾಡದಿದ್ದರೂ ಸಿಮ್ (Sim) ಇರುತ್ತೆ ಮತ್ತೆ ರೀಚಾರ್ಜ್ ಮಾಡಿಕೊಳ್ಳಬಹುದೆಂಬ ತಪ್ಪು ಕಲ್ಪನೆ ಬೇಡ ರೀಚಾರ್ಜ್ ಮಾಡದ ಸಿಮ್ ಅನ್ನು ಬ್ಲಾಕ್ ಮಾಡಿ ಆ ನಂಬರ್ ಅನ್ನು ಬೇರೊಬ್ಬರಿಗೆ ನೀಡಿ ಬಿಡುತ್ತದೆ.
ಸಮಯಾವಕಾಶ ಇದೆ:
ಸಿಮ್ ಬ್ಲಾಕ್ ಮಾಡಲು ಸಹ ಒಂದು ನಿರ್ದಿಷ್ಟ ಸಮಯಾವಕಾಶ ಇದೆ. ನೀವು ಸಿಮ್ ರಿಚಾರ್ಜ್ ಮಾಡದಿದ್ದಾಗ ನಿಮ್ಮ ಔಟ್ಗೋಯಿಂಗ್ (Out going) ಸೇವೆ ಮೊದಲು ನಿಷ್ಕ್ರಿಯ ವಾಗುತ್ತದೆ. ಬಳಿಕ ಇನ್ ಕಮ್ಮಿಂಗ್ (incoming) ಸಹ ಇರಲಾರದು ಹಾಗೇ ಮಾಡಿ 60ದಿನಗಳವರೆಗೆ ಸಿಮ್ ನಿಷ್ಕ್ರಿಯ ಎಂದೇ ಮಾಹಿತಿ ನೀಡುತ್ತದೆ. ಹಾಗೇ ನೀವು ನಿಷ್ಕ್ರಿಯ ವಾದ ಸಿಮ್ ಅನ್ನು 6ರಿಂದ 9ತಿಂಗಳ ಕಾಲ ರಿಚಾರ್ಜ್ ಮಾಡದಿದ್ದರೂ ಅದು ಆ್ಯಕ್ಟಿವ್ ಸಿಮ್ ಎಂದು ಕಂಪೆನಿ ಪರಿಗಣಿಸುತ್ತದೆ.
ನೀವು 7ಅಥವಾ 8ನೇ ತಿಂಗಳಲ್ಲೂ ರಿಚಾರ್ಜ್ ಮಾಡಿದರೆ ಮತ್ತೆ ಇನ್ ಕಮ್ಮಿಂಗ್ ಹಾಗೂ ಔಟ್ಗೋಯಿಂಗ್ ಇರುತ್ತದೆ. ಆದರೆ ನಿಮ್ಮ ಸಿಮ್ ಒಂದು ವರ್ಷ ಮೇಲ್ಪಟ್ಟು ಕೂಡ ರಿಚಾರ್ಜ್ ಮಾಡದಿದ್ದರೆ ಅದು ನಿಷ್ಕ್ರಿಯ ಆಗುವ ಜೊತೆಗೆ ತನ್ನ ಆಕ್ಟಿವ್ ಅನ್ನು ಸಹಹೊಂದಿರದೆ ಕಂಪೆನಿ (company) ಅದೇ ಸಂಖ್ಯೆಯ ನಂಬರ್ ಅನ್ನು ಬೇರೆಯವರಿಗೆ ನೀಡಿಬಿಡುತ್ತದೆ. ಹಾಗಾಗಿ ಬರಿ ರಿಚಾರ್ಜ್ ಮಾಡಿ ಸಿಮ್ ಬಳಕೆ ಸರಿಯಾಗಿಲ್ಲ ಎಂದು ಕಂಡು ಬಂದರೂ ಸಿಮ್ ನಿಷ್ಕ್ರಿಯ ವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಂದು ವರ್ಷಕ್ಕಿಂತ ಮೇಲ್ಪಟ್ಟು ನೀವು ರೀಚಾರ್ಜ್ ಮಾಡದೇ ಫೋನ್ ಬಳಸದಿದ್ದರೆ ಸಿಮ್ ತನ್ನ ಕಾರ್ಯ ಮಾಡುವುದನ್ನೇ ನಿಲ್ಲಿಸಿ ಬೇರೊಬ್ಬ ಬಳಕೆದಾರನಿಗೆ ಅದೇ ನಂಬರ್ ಸಿಗುವ ಸಾಧ್ಯತೆ ಇದೆ.
ಇಂದು ಆಧಾರ್, ಬ್ಯಾಂಕ್ (Adhar card, bank) ವೈಯಕ್ತಿಕ ಇನ್ನು ಅನೇಕ ಕಾರಣಗಳಿಗೆ ಫೋನ್ ನಿತ್ಯ ಉಪಯೋಗಿತ ವಸ್ತುವಾಗಿದ್ದು ಫೋನಿನ ಜೀವಕವಾಗಿರುವ ಸಿಮ್ ಅನ್ನು ಸದಾ ಕಾರ್ಯದಲ್ಲಿರುವಂತೆ ನೋಡಿಕೊಳ್ಳುವುದು ಸಹ ನಮ್ಮ ಕರ್ತವ್ಯವೇ ಆಗಿದೆ.