5G Smartphone: ಈ 5ಜಿ ಸ್ಮಾರ್ಟ್ ಫೋನ್ ಅಗ್ಗದ ಬೆಲೆ, 12ನಿಮಿಷದಲ್ಲಿ ಚಾರ್ಜ್ ಆಗುತ್ತೆ ಫೋನ್

Advertisement
ಈಗ ಎಲ್ಲಾ ಟೆಲಿಕಾಂ ಕಂಪನಿಗಳೂ 5 ಜಿ ಸೇವೆಯನ್ನು ಆರಂಭಿಸಿವೆ. ಈ ಹೈ ಸ್ಪೀಡ್ ನೆಟ್ ವರ್ಕ್ ಪಡೆದುಕೊಳ್ಳಲು 5ಜಿ ಸ್ಮಾರ್ಟ್ ಫೋನ್ (5G Smartphone) ಕೂಡ ಬೇಕು. ಇದೀಗ ಬೇರೆ ಬೇರೆ ಕಂಪನಿಗಳು ಕಡಿಮೆ ಬೆಲೆಗೆ 5ಜಿ ಬೆಂಬಲಿಸುವ ಮೊಬೈಲ್ ಗಳನ್ನು ಬಿಡುಗಡೆ ಮಾಡಿವೆ. ಅದರಲ್ಲೂ ನೀವು iQoo Neo 6 5ಜಿ ಖರೀದಿಸಲು ಬಯಸಿದರೆ ಇಲ್ಲಿದೆ ನೋಡಿ ಬೆಸ್ಟ್ ಆಫರ್. iQoo Neo 6 5G, 8GB + 128GB ಆಂತರಿಕ ಸ್ಟೋರೇಜ್ ಹೊಂದಿರುವ ಫೋನ್ ಅಮೆಜಾನ್ ನಲ್ಲಿ ಎಷ್ಟು ಕಡಿಮೆ ಬೆಲೆಗೆ ಸಿಗಲಿದೆ ಗೊತ್ತಾ?
iQoo Neo 6 5G ಬೆಲೆ ಎಷ್ಟು?
ಈ ಫೋನ್ ಬೆಲೆಯು 29,999 ರೂ.ಗಳು ಆದರೆ ಅಮೇಜಾನ್ ನಲ್ಲಿಇದೇ ಫೋನ್ ಅನ್ನು ರೂ 24,999ಗೆ ಖರೀದಿಸಬಹುದು. ಅಂದರೆ ನೀವು ಈಸ್ಮಾರ್ಟ್ ಫೊನ್ ಮೇಲೆ ಬರೋಬ್ಬರಿ 5,000 ರೂ.ಗಳ ದೊಡ್ಡ ರಿಯಾಯಿತಿ ಸಿಗುತ್ತಿದೆ. ಆಫರ್ ಇಷ್ಟಕ್ಕೆ ಮುಗಿತು ಅನ್ಕೋಬೇಡಿ ಅಮೆಜಾನ್ ನಲ್ಲಿ 22 ಸಾವಿರ ರೂಪಾಯಿಗಳವರೆಗಿನ ಎಕ್ಸ್ಚೇಂಜ್ ಡಿಸ್ಕೌಂಟ್ ಕೂಡ ಇದೆ. ಇದರ ಜೊತೆಗೆ ನೊ-ಕಾಸ್ಟ್ ಇಎಂಐ ಆಯ್ಕೆಯನ್ನು ಕೂಡ ನೀವು ಮಾಡಿಕೊಳ್ಳಬಹುದು ಇದರ ಜೊತೆಗೆ ಬ್ಯಾಂಕ್ ಆಫರ್ ಗಳು ಕೂಡ ನಿಮಗೆ ಸಿಗುತ್ತವೆ.

IQoo Neo 6 ವಿಶೇಷತೆಗಳೇನು?
5 ಜಿ ಬೆಂಬಲಿಸುವ ಇ ಸ್ಮಾರ್ಟ್ ಫೋನ್ 6.62 ಇಂಚಿನ ಡಿಸ್ಪ್ಲೇ ಹೊಂದಿದೆ. E4 AMOLED ಡಿಸ್ಪ್ಲೇ ಹೊಂದಿದ್ದು, 1080*2400 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿದೆ. ಸ್ನ್ಯಾಪ್ ಡ್ರ್ಯಾಗನ್ 87 ಪ್ರೋಸೆಸರ್ ಹೊಂದಿರುವ 12 ಜಿಬಿ ರಾಮ್ ಜೊತೆಗೆ ಬರುತ್ತದೆ. ಇನ್ನು 64 ಎಂಪಿ ಪ್ರೈಮರಿ ಕ್ಯಾಮೆರಾ 8 ಎಂಪಿ ಅಲ್ ಕ್ಯಾಮೆರಾ ಹಾಗೂ 2 ಎಂಪಿ ಹಿಂಭಾಗದ ಮೈಕ್ರೋ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು 16 ಎಂಪಿ ಕ್ಯಾಮೆರಾವನ್ನು ಸೆಲ್ಫಿ ಹಾಗೂ ವಿಡಿಯೋ ಕಾಲ್ ಗಳಿಗಾಗಿ ಅಳವಡಿಸಲಾಗಿದೆ.
ಫಾಸ್ಟ್ ಚಾರ್ಜಿಂಗ್ ಬ್ಯಾಟರಿ ಬೆಂಬಲಿಸುವ ಈ ಫೋನ್ 4700 ಎಂಎಎಚ್ ಬ್ಯಾಟರಿ ಹೊಂದಿದೆ. ಅಂದ್ರೆ ಕೇವಲ 12 ನಿಮಿಷಗಳಲ್ಲಿ 50% ಚಾರ್ಜ್ ಮಾಡಬಹುದು. ಕೆಲವು ದಿನಗಳವರೆಗೆ ಮಾತ್ರ ಲಭ್ಯವಿರುವ ಈ ಆಫರ್ ಪ್ರಯೋಜನವನ್ನು ಕೂಡಲೇ ಪಡೆದುಕೊಳ್ಳಿ.