Food Delivery: ಬೆಂಗಳೂರಲ್ಲಿ Swiggy, Zomato ಆಟಕ್ಕೆ ಅಂತ್ಯ, ಬರಲಿದೆ ಹೊಸ ಅಪ್ಲಿಕೇಶನ್
ಜಗತ್ತು ಆಧುನಿಕವಾಗಿ ಬದಲಾಗುತ್ತಿದ್ದಂತೆ ಎಲ್ಲ ಸೌಲಭ್ಯಗಳು ಸುಲಭವಾಗಿ ಎಲ್ಲರ ಬಳಿಗೂ ಬಂದು ತಲುಪುವಂತೆ ಆಯಿತು. ಅದೇ ರೀತಿ ಫುಡ್ ಡೆಲಿವರಿ (Food Delivery) ಮಾಡೋ ಕಂಪೆನಿಗಳ ಸಂಖ್ಯೆ ಹೆಚ್ಚಾದಂತೆ ಅಧಿಕ ಫೀಸ್ ಬರಿಸಬೇಕಾಗುತ್ತಿದೆ. ಅಷ್ಟು ಮಾತ್ರವಲ್ಲದೆ ತಮ್ಮದೆ ಆದ ಫುಡ್ ಡೆಲಿವರಿ ಆ್ಯಪ್ ಹೊಂದಿದ್ದ ಕಂಪೆನಿಗಳು ಬಿಡುಗಡೆ ಮಾಡಿದೆ. ಈಗ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಆ್ಯಪ್ ಗಳಿಗೆ ಕೌಂಟರ್ ನೀಡಲು ಹೊಟೇಲ್ ಉದ್ಯಮ ರೆಡಿಯಾಗಿದೆ. ಈ ಮೂಲಕ ಶೆ. 30 (30%) ಹೊಟೇಲ್ ಉದ್ಯಮ ಇ ಕಾಮರ್ಸ್ (E commerce) ಗೆ ನೇರ ಲಗ್ಗೆ ಇಡಲು ಮುಂದೆ ಬಂದಿದ್ದಾರೆ.
ಯಾಕೆ ಈ ಹೊಸ ಆ್ಯಪ್?
ರಾಜಧಾನಿ ಬೆಂಗಳೂರಿನಲ್ಲಿ ಆನ್ ಲೈನ್ ಫುಡ್ ಗೆ ಬಹುವಾಗೇ ಬೇಡಿಕೆ ಇದೆ. ಫುಡ್ ಡೆಲಿವರಿ ಆ್ಯಪ್ ಗಳು ಬೇಕಾಬಿಟ್ಟಿ ಸರ್ವಿಸ್ ಚಾರ್ಜ್ ಮಾಡುವ ಕಾರಣ ಹೊಟೇಲ್ ನಲ್ಲಿ ಸಹ ಆಹಾರದ ಬೆಲೆ ಹೆಚ್ಚಿಸುತ್ತದೆ. ಅದೇ ರೀತಿ ಇದು ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹೊಟೇಲ್ ಅಸೋಸಿಯೇಷನ್ ನಲ್ಲಿ ಹೊಸ ಆ್ಯಪ್ ಮಾಡುವ ತೀರ್ಮಾನಕ್ಕೆ ಬರಲಾಗಿದೆ.
ಯಾವುದು ಈ ಹೊಸ ಆ್ಯಪ್?
ಫೋನ್ ಪೇ (Phone Pe) ಮೂಲಕ ಜಾರಿಗೆ ಬಂದ ಪಿನ್ಕೋಡ್ ಆ್ಯಪ್ ಗೆ ಹೊಟೇಲ್ ಅಸೋಸಿಯೇಶನ್ ಬೆಂಬಲಿಸುತ್ತಿದೆ. ಈ ಆ್ಯಪ್ ನ ಮೂಲಕ ಅಗ್ಗದ ದರದಲ್ಲಿ ಮನೆಗಳಿಗೆ ಫುಡ್ ಡೆಲಿವರಿ ಆಗುತ್ತದೆ. ಅಷ್ಟು ಮಾತ್ರವಲ್ಲದೆ ಇ ಆ್ಯಪ್ ನಲ್ಲಿ ಆಫರ್ ಇರುವ ಜೊತೆ ಬೆಲೆ ಕೂಡ ನಾರ್ಮಲ್ ಆ್ಯಪ್ ಗೆ ಹೋಲಿಸಿದರೆ ಕಡಿಮೆ ಇರಲಿದೆ.
ಅಸೋಸಿಯೇಶನ್ ಅಧ್ಯಕ್ಷ ಹೇಳಿದ್ದೇನು?
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್ ಅಧ್ಯಕ್ಷ ಪಿಸಿ ರಾವ್ (PC Rao) ಅವರು ಮಾತನಾಡಿ, ನಮ್ಮ ಕೇಂದ್ರ ಸರಕಾರದಿಂದ ಆನ್ ಲೈನ್ ಆಗಿ ಒಪನ್ ONC ಪ್ರಾರಂಭ ಮಾಡಿದ್ದಾರೆ , ಈ ಮೂಲಕ ಫೋನ್ ಪೇ ಅವರು ಎರಡು ಆ್ಯಪ್ ಪ್ರಾರಂಭ ಮಾಡುತ್ತಿದ್ದಾರೆ. ಇದನ್ನು ಹೊಟೇಲ್ ಅಸೋಸಿಯೇಷನ್ ಸ್ವಾಗತಿ ಸಲಿದ್ದೇವೆ. ಇದರಿಂದ ಗ್ರಾಹಕರಿಗೆ ಮತ್ತು ಹೊಟೇಲ್ ಮಾಲಕರಿಗೆ ಒಳ್ಳೆದು ಆಗುತ್ತದೆ ಎಂದು ಈ ನಿರ್ಣಯಕ್ಕೆ ಅಸೋಸಿಯೇಶನ್ ಬೆಂಬಲ ನೀಡುತ್ತಿದೆ. ಈ ಮೂಲಕ ಸ್ಪರ್ಧಾತ್ಮಕ ಬೆಳವಣಿಗೆ ಆಗುತ್ತದೆ ಎಂದಿದ್ದಾರೆ.