WhatsApp: ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಹೊಸ ನಿಯಮ, ಕರ್ನಾಟಕದಾದ್ಯಂತ ಜಾರಿಗೆ
ಈಗಾಲೇ ಚುನಾವಣೆಯ (Election) ದಿನಾಂಕ ನಿಗದಿ ಯಾಗಿದೆ, ಅದರೊಡನೆ ಚುನಾವಣೆ ಪ್ರಚಾರ ಕೂಡ ಅಷ್ಟೇ ಭರದಿಂದ ನಡೆಯುತ್ತಿದೆ, ಇದೀಗ ಚುನಾವಣೆಗೆ ದಿನಾಂಕ ಘೋಷಣೆ ಆದ ದಿನದಿಂದ ಹಿಡಿದು, ಮತ ಎಣಿಕೆ ಮುಗಿಯೋವರೆಗೆ ನೀತಿ ಸಂಹಿತೆ ಯನ್ನು (Code of Ethics) ಜಾರಿಗೆ ಮಾಡಿದೆ, ನೀತಿ ಸಂಹಿತೆಯ ನೀತಿ ನಿಯಮಗಳನ್ನು ಜನರು ಪಾಲಿಸಲೇ ಬೇಕು, ಇದೀಗ ವಾಟ್ಸಪ್ (WhatsApp) ಬಳಕೆದಾರರಿಗೂ ಮಹತ್ವದ ಸೂಚನೆ ಯನ್ನು ನೀಡಿದೆ, ಯಾವುದೇ ರಿತೀಯ ರಾಜಕೀಯ ಸಂದೇಶ ರವಾನಿಸುವ ಗ್ರೂಪ್ ಅಡ್ಮಿನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿ:
ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ರಾಜ್ಯಾದ್ಯಂತ ಎಲ್ಲ ಗಡಿ ಪ್ರದೇಶಗಳಲ್ಲೂ ಭರ್ಜರಿ ತಪಾಸಣೆ ನಡೆಯುತ್ತಿದೆ. ಅಕ್ರಮ ಹಣ ವರ್ಗಾವಣೆ ತಡೆಗೆ ರಾಜ್ಯಾದಂತ ಈಗಾಗಲೇ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು , ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ, ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ, ಧರ್ಮ , ಜಾತಿ ವಿಷಯಾಧಾರಿತವಾಗಿ ಮತ ಕೇಳುವಂತಿಲ್ಲ ಎಂಬುದಾಗಿಯು ಸೃಷ್ಟ ಮಾಹಿತಿಯನ್ನು ನೀಡಿದೆ.
WhatsApp ಬಳಕೆ ದಾರರಿಗೆ ಚುನಾವಣಾ ಆಯೋಗದಿಂದ ರೂಲ್ಸ್:
ಭಾರತದ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ನಿಗದಿ ಮಾಡಿದೆ, ಕರ್ನಾಟಕದಲ್ಲಿ ಮೇ 10, 2023 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಮತ್ತು ಮೇ 13 ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಲಾಗಿದೆ, ನೀತಿ ಸಂಹಿತೆಯ ಅವಧಿಯಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಆಯೋಗದ ಪ್ರತಿಯೊಂದು ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ, ಅದೇ ರೀತಿ ಚುನಾವಣೆ ದಿನಾಂಕ ಆದ ಬೆನ್ನಲ್ಲೆ ರಾಜ್ಯದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಸಂದೇಶಗಳನ್ನು ಕಳಿಸಿ ತೊಂದರೆ ಉಂಟು ಮಾಡುವ ಸಂದೇಶ ರವಾನಿಸುವ ವಾಟ್ಸಾಪ್ ಗ್ರೂಪ್ ಅಡ್ಮಿನ್ ವಿರುದ್ಧ ಕಠಿಣ ಕ್ರಮಕೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಕೊಡಗಿನಲ್ಲಿ ಆಡ್ಮಿನ್ ವಿರುದ್ದ ಕ್ರಮ:
ಇನ್ಮುಂದೆ ಚುನಾವಣೆ ಮುಗಿಯುವ ತನಕ ವಾಟ್ಸಪ್ ಆಪ್ ಮೂಲಕ ಯಾವುದೇ ಸಂದೇಶಗಳನ್ನು ಹಂಚಿ ಕೊಳ್ಳಬಾರದು, ಇಲ್ಲದಿಂದರೆ ನಿಮ್ಮ ಮೇಲೆ ಕೇಸ್ ದಾಖಲೆಯಾಗುತ್ತೆ, ಈಗಾಗಲೇ ಕೊಡಗಿನಲ್ಲಿ ಗ್ರೂಪ್ ಅಡ್ಮಿನ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಏನೇ ಸಂದೇಶ ತಪ್ಪು ಮಾಹಿತಿ ಸೃಷ್ಟಿ ಯಾದಲ್ಲಿ , ಅಥವಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಸಂದೇಶ ರವಾನಿಸಿದರೆ ಗ್ರೂಪ್ ಆಡ್ಮಿನ್ ವಿರುದ್ದ ಕೇಸ್ ದಾಖಲಾಗುತ್ತೆ ಎನ್ನಲಾಗುತ್ತಿದೆ.