Karnataka Times
Trending Stories, Viral News, Gossips & Everything in Kannada

iPhone 14: ಕೇವಲ 38,000 ಸಿಗಲಿದೆ ಹೊಸ ಬಣ್ಣದ iPhone 14! ಮುಗಿಬಿದ್ದು ಖರೀದಿಸುತ್ತಿದ್ದಾರೆ ನೆಟ್ಟಿಗರು!

Advertisement

iPhone 14 ಅನ್ನು ಇಷ್ಟಪಡದವರು ಯಾರಿಲ್ಲ ಹೇಳಿ. iPhone ಕೇವಲ ಕ್ವಾಲಿಟಿಯ ವಿಚಾರಕ್ಕೆ ಮಾತ್ರವಲ್ಲದೆ ಪ್ರತಿಷ್ಠೆಯ ಒಂದು ವಸ್ತುವಾಗಿ ಕೂಡ ಸಮಾಜದಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ಗಮನಿಸಬೇಕಾಗಿರುವಂತಹ ವಿಚಾರವಾಗಿದ್ದು iPhone 14 ಅನುಸಂಸ್ಥೆ ಕೆಲವು ಸಮಯಗಳ ಹಿಂದೆ ಬಿಡುಗಡೆ ಮಾಡಿದ್ದು ಈಗ ಅದರ ಹೊಸ ಕಲರ್ ಅನ್ನು ಕೊಡ ಲಾಂಚ್ ಮಾಡಿದ್ದು ಪ್ರತಿಯೊಬ್ಬ ಗ್ರಾಹಕರಿಗೂ ಕೂಡ ಇಷ್ಟವಾಗಿದೆ. ಆದರೆ ಅದನ್ನು ಈಗ ಕಡಿಮೆ ಬೆಲೆಯಲ್ಲಿ ಕೂಡ ಖರೀದಿಸಬಹುದಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಯಾವ ರೀತಿಯಲ್ಲಿ ಖರೀದಿಸಬಹುದೆಂಬುದನ್ನು ತಿಳಿಯೋಣ.

iPhone 14 ಲಾಂಚಿಂಗ್ ಬೆಲೆ 79,900 ಆಗಿದ್ದು ಇದನ್ನು ನೀವು ಫ್ಲಿಪ್ಕಾರ್ಟ್ ನಲ್ಲಿ 9 ಪ್ರತಿಶತ ಡಿಸ್ಕೌಂಟ್ ನಲ್ಲಿ 71999 ರೂಪಾಯಿ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಹಲವಾರು ಬ್ಯಾಂಕ್ ಹಾಗೂ ಎಕ್ಸ್ಚೇಂಜ್ ಯೋಜನೆಗಳ ಆಫರ್ ಗಳು ಕೂಡ ಸಿಗುತ್ತದೆ. ಒಂದು ವೇಳೆ ನೀವು ಈ ಫೋನ್ ಅನ್ನು ಖರೀದಿಸಲು HDFC ಬ್ಯಾಂಕಿನ ಕಾರ್ಡ್ ಅನ್ನು ಉಪಯೋಗಿಸುತ್ತಿದ್ದರೆ ನಾಲ್ಕು ಸಾವಿರಗಳ ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಇದರಿಂದಾಗಿ ಈ ಫೋನಿನ ಬೆಲೆ 67,999 ಆಗಲಿದೆ. ಅದಾಗಲೇ iPhone 14 ನ ಬೆಲೆ ಯಾವ ಮಟ್ಟಕ್ಕೆ ಕಡಿಮೆ ಆಯಿತು ಎಂಬುದು ನಿಮಗೆ ಈಗಾಗಲೇ ತಿಳಿದಿರಬಹುದು. ಬನ್ನಿ ಇದಕ್ಕೂ ಮಿಗಿಲಾಗಿ ಇನ್ನಷ್ಟು ಮೊತ್ತ ಹೇಗೆ ಕಡಿಮೆಯಾಗುತ್ತದೆ ಎಂಬುದನ್ನು ತಿಳಿಯೋಣ.

iPhone 14 ವಿಚಾರದಲ್ಲಿ ಎಕ್ಸ್ಚೇಂಜ್ ಆಫರ್ ನಲ್ಲಿ ನೀವು ರೂ.30,000ಗಳವರೆಗೂ ಕೂಡ ಹಣವನ್ನು ಕಡಿತುಗೊಳಿಸಬಹುದಾಗಿದೆ. ನಿಮ್ಮ ಹಳೆಯ ಫೋನ್ ಅನ್ನು ಇದರ ಜೊತೆಗೆ ಎಕ್ಸ್ಚೇಂಜ್ ಮಾಡುವಾಗ ಎಷ್ಟು ಹಣದ ರಿಯಾಯಿತಿ ನಿಮಗೆ ಸಿಗುತ್ತದೆ ಆದರೆ ನಿಮ್ಮ ಹಳೆಯ ಫೋನ್ ಉತ್ತಮ ಕಂಡೀಶನ್ ನಲ್ಲಿ ಇದ್ದರೆ ಮಾತ್ರ ನೀವು ಹೇಳಿದ ಬೆಲೆಗೆ ಆಫರ್ ಸಿಗುತ್ತದೆ. ಇದರ ಜೊತೆಗೆ ನೀವು ಎಕ್ಸ್ಚೇಂಜ್ ಮಾಡಲು ಇಚ್ಚಿಸಿರುವಂತಹ ಫೋನಿನ ಮಾಡೆಲ್ ಕೂಡ ಲೇಟೆಸ್ಟ್ ಆಗಿರಬೇಕು. ಇವೆಲ್ಲ ಪ್ರಕ್ರಿಯೆಗಳು ನಡೆದ ನಂತರವಷ್ಟೇ ನಿಮಗೆ ನಿಮ್ಮ ನೆಚ್ಚಿನ ಕಲರ್ ನ iPhone 14 ನ ಬೆಲೆ ರೂ.37,999 ರೂಪಾಯಿ ದೊರಕಲಿದೆ. ಹೀಗಾಗಿ ಇಷ್ಟೊಂದು ಕಡಿಮೆ ಬೆಲೆಗೆ ಈ ಪ್ರತಿಷ್ಠಿತ ಫೋನ್ ಅನ್ನು ಪಡೆಯಲು ನೀವು ಇಷ್ಟೆಲ್ಲಾ ಪ್ರಕ್ರಿಯೆಗಳನ್ನು ಪೂರೈಸಲೇಬೇಕಾಗುತ್ತದೆ.

Leave A Reply

Your email address will not be published.