Karnataka Times
Trending Stories, Viral News, Gossips & Everything in Kannada

WhatsApp Feature: ವಾಟ್ಸಾಪ್ ನಲ್ಲಿಯೂ ಬಂತು ಹೊಸ ಅದ್ಬುತ ಫೀಚರ್, ಇಲ್ಲಿದೆ ಡಿಟೇಲ್ಸ್

ವಾಟ್ಸಪ್ ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ಹೊಸ ಫೀಚರ್ ಗಳನ್ನ ಪರಿಚಯಿಸಿದೆ. ಅದರಲ್ಲೂ ವಾಟ್ಸಪ್ ನಲ್ಲಿ ಗುಂಪು ಚಾಟ್ ಅಥವಾ ಗ್ರೂಪ್ ಚಾಟ್ ಹೆಚ್ಚು ಪ್ರಚಲಿತದಲ್ಲಿದೆ. ತಮ್ಮ ಸ್ನೇಹಿತರು ಕುಟುಂಬದ ಸದಸ್ಯರು ಸಹೋದ್ಯೋಗಿಗಳು ಹೀಗೆ ಬೇರೆ ಬೇರೆ ರೀತಿಯ ಸದಸ್ಯರನ್ನ ಸೇರಿಸಿಕೊಂಡು ಜನರು ಒಂದು ಗ್ರೂಪ್ ಕ್ರಿಯೇಟ್ ಮಾಡಿ ವಾಟ್ಸಪ್ ನಲ್ಲಿ ಚಾಟ್ ಮಾಡಬಹುದು.

ಇನ್ನು ಈ ರೀತಿಯಾದ ಗ್ರೂಪ್ಸ್ ಮಾಡಿಕೊಳ್ಳುವುದರ ಪ್ರಮುಖ ಪ್ರಯೋಜನ ಏನು ಅಂದರೆ ಕೆಲವು ಪ್ರಮುಖ ಫೈಲ್ ಗಳನ್ನು ಗುಂಪಿನಲ್ಲಿ ಕಳುಹಿಸಬಹುದು. ವಿಡಿಯೋ, ಆಡಿಯೋ ಎಲ್ಲವನ್ನು ಶೇರ್ ಮಾಡಬಹುದು. ಆದರೆ ಬಹುಕಾಲದ ಗ್ರೂಪ್ ಗಳಲ್ಲಿ ಈ ರೀತಿಯಾದಂತಹ ಫೈಲ್ ಗಳ ಹಂಚಿಕೊಳ್ಳುವಿಕೆಯಿಂದ ಮೊಬೈಲ್ ನ ಸ್ಟೋರೇಜ್ ಸಂಪೂರ್ಣ ಫುಲ್ ಆಗುತ್ತದೆ. ಗುಂಪುಗಳಲ್ಲಿನ ಸಂದೇಶಗಳನ್ನು ಅಳಿಸಲಾಗುವುದಿಲ್ಲ ಆದರೆ ಅನಗತ್ಯ ತಾತ್ಕಾಲಿಕ ಗುಂಪುಗಳಲ್ಲಿ ಸಂದೇಶವನ್ನು ಡಿಲೀಟ್ ಮಾಡಬಹುದು ಆಗ ನಿಮ್ಮ ಮೊಬೈಲ್ ಸ್ಟೋರೇಜ್ ಕೂಡ ಫ್ರೀ ಆಗುತ್ತಿದೆ.

Join WhatsApp
Google News
Join Telegram
Join Instagram

ನಿಮಗೆ ಅಗತ್ಯವಿಲ್ಲದ ಸಂದೇಶಗಳನ್ನು ಅಳಿಸಲು ವಾಟ್ಸಾಪ್ ಎಕ್ಸ್ಪೈರಿಂಗ್ ಗ್ರೂಪ್ಸ್ (Expiring Groups) ಎನ್ನುವ ಹೊಸ ಫೀಚರ್ ಬಳಸಿಕೊಳ್ಳಬಹುದು. ವಾಟ್ಸಪ್ ಬೀಟಾ ಮಾಹಿತಿ ಈ ವಿಶಿಷ್ಟ ಫೀಚರ್ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ.

ವಾಟ್ಸಾಪ್ ಬೀಟಾ ಮಾಹಿತಿಯ ಪ್ರಕಾರ ವಾಟ್ಸಾಪ್ ಬಳಕೆದಾರರು ತಾವು ಬಳಸುತ್ತಿರುವ ಗುಂಪುಗಳ ಮುಕ್ತಾಯ ದಿನಾಂಕವನ್ನು ಕೂಡ ಸೆಟ್ ಮಾಡಿಕೊಳ್ಳಬಹುದು. ಮುಕ್ತಾಯದ ಇದು ದಿನಾಂಕ ಬಂದ ಕೂಡಲೇ ವಾಟ್ಸಪ್ ಗ್ರೂಪ್ ಅನ್ನು ಡಿಲೀಟ್ ಮಾಡಲು ಅಥವಾ ಅದರಲ್ಲಿ ಇರುವ ಮಾಹಿತಿಯನ್ನು ಡಿಲೀಟ್ ಮಾಡಲು ಗ್ರಾಹಕರಿಗೆ ಪ್ರಾಂಪ್ಟ್ ಎಚ್ಚರಿಕೆ ಕಳುಹಿಸಲಾಗುತ್ತದೆ. ತಾತ್ಕಾಲಿಕವಾಗಿ ರಚಿಸಲಾದ ಗುಂಪಿನಲ್ಲಿ ಇರುವ ವಿಷಯವನ್ನು ಯಾರು ಡಿಲೀಟ್ ಮಾಡುವುದಿಲ್ಲ ಆದರೆ ಇದು ನಿಮ್ಮ ಮೊಬೈಲ್ ಸ್ಟೋರೇಜ್ ನಲ್ಲಿ ಉಳಿದುಕೊಳ್ಳಬಹುದು. ತಾತ್ಕಾಲಿಕ ಗುಂಪುಗಳು ಆ ಸಮಯಕ್ಕೆ ಬಳಸಿ ನಂತರ ಅದು ಗುಂಪು ಚಾರ್ಟ್ ಪಟ್ಟಿಯಿಂದ ಕೆಳಗೆ ಹೋಗುತ್ತದೆ. ಅದರಲ್ಲಿ ಹೊಸ ಸಂದೇಶಗಳನ್ನು ಹಂಚಿಕೊಳ್ಳುವುದಿಲ್ಲ. ಆದರೆ ಅದರಲ್ಲಿ ಕಳುಹಿಸಿದ ಮಾಹಿತಿ ಮಾತ್ರ ಹಾಗೆಯೇ ಫೋನ್ ಸ್ಟೋರೇಜ್ ನಲ್ಲಿ ಇರುತ್ತದೆ. ಇದಕ್ಕಾಗಿ ನೀವು ವಾಟ್ಸಪ್ ನಲ್ಲಿ ಎಕ್ಸ್ಪರಿಂಗ್ ಗ್ರೂಪ್ ಸೆಟ್ ಮಾಡಿಕೊಳ್ಳಬಹುದು. ಹೀಗೆ ಮಾಡಿದರೆ ಆ ಗ್ರೂಪ್ ನ ಅವಧಿ ಮುಗಿದ ನಂತರ ನಿಮಗೆ ಎಚ್ಚರಿಕೆ ಕಳುಹಿಸಲಾಗುತ್ತದೆ ಆಗ ನೀವು ಅದನ್ನು ಡಿಲೀಟ್ ಮಾಡಿಕೊಳ್ಳಬಹುದು.

ವಾಟ್ಸಪ್ ಬೀಟಾ ಆವೃತ್ತಿ ಈ ವಿಚಾರದ ಕುರಿತು ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು ಅದರಲ್ಲಿ ಸಂಪೂರ್ಣವಾದ ಮಾಹಿತಿ ಕಾಣಿಸುತ್ತದೆ. ಒಂದು ದಿನ ಒಂದು ವಾರ ಅಥವಾ ತಮಗೆ ಬೇಕಾದ ದಿನಾಂಕಕ್ಕೆ ದಿನಾಂಕವನ್ನು ಕಸ್ಟಮ್ ಮಾಡಿಕೊಳ್ಳಬಹುದು ನಂತರ ನಿಗದಿತ ದಿನಾಂಕ ಸೆಟ್ ಮಾಡಬಹುದು. ಮುಕ್ತಾಯ ದಿನಾಂಕವನ್ನು ತೆಗೆದುಹಾಕಿ ಎಂದು ಆಯ್ಕೆ ಇರುತ್ತದೆ ಇದರ ಮೂಲಕ ನೀವು ವೈಯಕ್ತಿಕವಾಗಿ ಗ್ರೂಪ್ ಇರಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬಹುದು.

ವಾಟ್ಸಪ್ ಬಳಕೆದಾರರು ವಾಟ್ಸಾಪ್ನಲ್ಲಿ ತಮ್ಮ ಗ್ರೂಪ್ ಚಾಟ್ ಉತ್ತಮವಾಗಿ ನಿರ್ವಹಿಸಲು ಈ ವೈಶಿಷ್ಟ್ಯತೆ ಸಹಾಯ ಮಾಡುತ್ತದೆ ಜೊತೆಗೆ ಮೊಬೈಲ್ ಸ್ಟೋರೇಜ್ ಕೂಡ ಉಳಿಯುತ್ತದೆ. ನಿರ್ದಿಷ್ಟ ವಿಷಯಕ್ಕಾಗಿ ನೀವು ತಾತ್ಕಾಲಿಕ ಗುಂಪು ರಚನೆ ಮಾಡಿಕೊಂಡು ನಂತರ ಅದನ್ನು ಡಿಲೀಟ್ ಮಾಡಲು ಈ ವಿಶಿಷ್ಟವಾದ ಫೀಚರ್ ಸಹಾಯಕವಾಗಲಿದೆ. ಇನ್ನು ಅಭಿವೃದ್ಧಿ ಹಂತದಲ್ಲಿದ್ದು ಸದ್ಯದಲ್ಲಿಯೇ ಗ್ರಾಹಕರ ಬಳಕೆಗೆ ಸಿಗಬಹುದು.

Leave A Reply

Your email address will not be published.