SIM Card: ಒಂದು ಆಧಾರ್ ಕಾರ್ಡ್ ನಿಂದ ಎಷ್ಟು ಸಿಮ್ ಖರೀದಿಸಬಹುದು, ಕೇಂದ್ರದ ಹೊಸ ನಿಯಮ

Advertisement
ಎಷೋ ಸಲ ನಮ್ಮ ಮೊಬೈಲ್ ಕಳ್ಳತನವಾಗಬಹುದು ಅಥವಾ ಕಳೆದು ಹೋಗಬಹುದು ಇನ್ನೂ ಕೆಲವು ಸಂದರ್ಭಗಳಲ್ಲಿ ಮೊಬೈಲ್ ಕೆಳಗಡೆ ಬಿದ್ದು ಸಿಮ್ ಕಾರ್ಡ್ ಡ್ಯಾಮೇಜ್ ಆಗುವ ಸಂಭವವು ಇರುತ್ತದೆ. ಈ ಸಂದರ್ಭದಲ್ಲಿ ನಾವು ಬಳಸುತ್ತಿದ್ದ ಅದೇ ನಂಬರಿನ ಹೊಸ ಸಿಮ್ ಪಡೆದುಕೊಳ್ಳುವುದು ಅಗತ್ಯ. ಮೊದಲಿನ ಸಿಮ್ ಖರೀದಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅದರ ಪ್ರಕ್ರಿಯೆ ಬಹಳ ಸುಧೀರ್ಘವಾಗಿತ್ತು ಎರಡು ಮೂರು ದಿನಗಳು ಆ ಸಿಮ್ ಮರು ಕೆಲಸ ಮಾಡಲು ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಹಾಗಲ್ಲ. ನಿಮ್ಮ ಆಧಾರ್ ಕಾರ್ಡ್ ಇದ್ದರೆ ಸಾಕು ಅದರಿಂದಲೇ ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳಬಹುದು ಅಲ್ಲದೇ ತಕ್ಷಣ ಅದು ಸಕ್ರಿಯಗೊಳ್ಳುತ್ತದೆ ಕೂಡ. ಒಂದು ಆಧಾರ್ ಕಾರ್ಡ್ ನಿಂದ ಎಷ್ಟು ಸಿಮ್ ಕಾರ್ಡ್ ಖರೀದಿ ಮಾಡಬಹುದು ನಾವು ಹೇಳ್ತಿವಿ ಮುಂದೆ ಓದಿ.
ಇದನ್ನು ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು ಏಕೆಂದರೆ ಒಂದು ಆಧಾರ್ ಕಾರ್ಡ್ ನಿಂದ ಒಂದು ಸಿಮ್ ಅಲ್ಲ ನೀವು ಬರೋಬ್ಬರಿ 9 ಸಿಮ್ ಕಾರ್ಡ್ ಖರೀದಿ ಮಾಡಬಹುದು. ಇಲ್ಲಿ ನೀವು ಯಾರಿಗಾದರೂ ದಾಖಲೆಯನ್ನು ನೀಡಿದ್ದರೆ ಅವರು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಿಂದ ಮತ್ತೊಂದು ಸಿಮ್ ಖರೀದಿಸಬಹುದು. ಇದರಿಂದ ನಿಮ್ಮ ದಾಖಲೆಗಳು ದುರುಪಯೋಗ ಆಗುತ್ತವೆ. ನೀವು ಯಾವುದಾದರೂ ದಾಖಲೆಯನ್ನು ಬೇರೆಯವರಿಗೆ ನೀಡಿದಾಗ ಅದನ್ನ ಯಾಕೆ ನೀಡಿದ್ದೀರಿ ಅದರ ಉದ್ದೇಶ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಹೀಗೆ ಮಾಡುವುದರಿಂದ ದಾಖಲೆಗಳಿಂದ ಸಿಮ್ ತೆಗೆದುಕೊಳ್ಳುವ ಅಥವಾ ಯಾವುದೇ ಮೋಸ ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ.
Advertisement
ಆಧಾರ್ ಸಂಖ್ಯೆಯೊಂದಿಗೆ ಎಷ್ಟು ಮೊಬೈಲ್ ಸಂಖ್ಯೆ ಲಿಂಕ್ ಮಾಡಬಹುದು? ಇದನ್ನು ಮುಖ್ಯವಾಗಿ ಪ್ರತಿಯೊಬ್ಬರು ತಿಳಿದುಕೊಂಡಿರಲೇಬೇಕು ತಿಳಿದುಕೊಂಡಿದ್ದರೆ ಖಂಡಿತವಾಗಿಯೂ ನಿಮ್ಮ ಆಧಾರ್ ದುರುಪಯೋಗ ಆಗದಂತೆ ನೀವು ಎಚ್ಚರ ವಹಿಸಬಹುದು. ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬೇಕು. ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಂಖ್ಯೆಗಳು ಸಕ್ರಿಯವಾಗಿವೆ ಎಂಬುದನ್ನು ನೀವು ತಿಳಿದುಕೊಳ್ಳಲು ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿದರೆ ಸುಲಭ. ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಿಂದ ಯಾವುದೇ ಸಿಮ್ ಲಿಂಕ್ ಆಗಿದ್ಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು ಅಂದರೆ ಟ್ರ್ಯಾಕ್ ಮಾಡಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.
ಮೊದಲಿಗೆ https://tafcop.dgtelecom.gov.in/ ಮೇಲೆ ಕ್ಲಿಕ್ ಮಾಡಿ ಈ ವೆಬ್ಸೈಟ್ನಲ್ಲಿ ನೀಡಿರುವ ಕಾಲಂ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ. ಓಟಿಪಿಯನ್ನು ಕೂಡ ನೀವು ಹಾಕಿದ ನಂತರ ಓಕೆ ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಒಂದು ಆಧಾರ್ ಕಾರ್ಡ್ ಲಿಂಕ್ ಆಗಿರುವ ಎಲ್ಲಾ ಮೊಬೈಲ್ ನಂಬರ್ ಕೂಡ ಕಾಣಿಸುತ್ತದೆ.
ಅಲ್ಲಿ ಸಾಕಷ್ಟು ಬೇರೆಬೇರೆ ನಂಬರ್ ಗಳು ಕಾಣಿಸಬಹುದು ಆ ಸಂಖ್ಯೆ ನಿಮ್ಮ ಮೊಬೈಲ್ ನಂಬರ್ ಅಲ್ಲದೆ ಇದ್ದರೆ “ದಿಸ್ ಇಸ್ ನಾಟ್ ಮೈ ನಂಬರ್” ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ವರದಿ ಸರ್ಕಾರಕ್ಕೆ ತಲುಪುತ್ತದೆ ನಂತರ ಆ ಸಂಖ್ಯೆಯನ್ನು ಡಿ ಆಕ್ಟಿವೇಟ್ ಮಾಡಲಾಗುತ್ತದೆ.
Advertisement