SIM Corner: 99%ರಷ್ಟು ಜನರಿಗೆ ಈ ವಿಷಯ ಗೊತ್ತೇ ಇಲ್ಲ, ಸಿಮ್ ನ ಒಂದು ಮೂಲೆಯಲ್ಲಿ ಯಾಕೆ ಕಟ್ಟಾಗಿರುತ್ತೆ?

Advertisement
ಮೊಬೈಲ್ ಫೋನ್ ಅನ್ನು ಯಾವಾಗ ಕಂಡು ಹಿಡಿಯಲಾಯಿತೋ ಅಂದಿನಿಂದ ಅದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಅಂದಹಾಗೆ ನಾವು ಮೊಬೈಲ್ ಬಳಕೆ ಯಾವಾಗ ಆರಂಭಿಸಿದೆವೋ ಅಲ್ಲಿಂದ ಸಿಮ್ ಕೂಡ ಬಳಕೆಗೆ ಬಂದಿದ್ದು, ಅದನ್ನು ಜನ ಬಳಸುತ್ತಾರೆ ಯಾಕೆಂದರೆ ಸಿಮ್ ಇಲ್ಲದೆ ಇದ್ರೆ ಮೊಬೈಲ್ ಫೋನ್ ಉಪಯೋಗಕ್ಕೆ ಬರೋದಿಲ್ಲ. ಮೊದಲೆಲ್ಲ ಮೊಬೈಲ್ ಫೋನ್ ನಲ್ಲಿ ಒಂದು ಸಿಮ್ ಇರುತ್ತಿದ್ದರೆ ಈಗ ಡ್ಯೂಯಲ್ ಸಿಮ್ ಮಾಮೂಲಿಯಾಗಿ ಬಿಟ್ಟಿದೆ. ಅಂದ ಹಾಗೆ ದಿನವೂ ಸಿಮ್ ಮೂಲಕವೇ ಇತರರೊಂದಿಗೆ ಸಂಪರ್ಕ ಮಾಡುವ ನೀವು ಯಾವತ್ತಾದರೂ ಸಿಮ್ ಅನ್ನು ಗಮನಿಸಿದ್ದೀರಾ. ಸಿಮ್ ಒಂದು ಮೂಲೆಯಲ್ಲಿ ಕಟ್ಟಾದಂತೆ ಇರುತ್ತದೆ ಅದು ಯಾಕೆ ಎಂಬುದು ನಿಮಗೆ ಗೊತ್ತಾ?
ಹೌದು ಈ ಕಾರಣವನ್ನು ತಿಳಿದುಕೊಳ್ಳಲೇಬೇಕು ಸಿಮ್ ಒಂದು ಮೂಲೆಯಲ್ಲಿ ಕತ್ತರಿಸಿದಂತೆ ಇರುತ್ತೆ ಅಥವಾ ಕತ್ತರಿಸಿ ಇದರಿಂದ ಮೊಬೈಲ್ ಫೋನ್ ನಲ್ಲಿ ಸಿಮ್ ಅನ್ನ ಸರಿಯಾದ ಸ್ಥಳದಲ್ಲಿ ಇಡಬಹುದು ಇದ್ದರೆ ಅಥವಾ ತಲೆಕೆಳಗಾಗಿ ಹಾಕಿದ್ದರೆ ಅದರ ಸಂಭವವಿರುತ್ತದೆ.
Advertisement
ಇನ್ನು ಸಿಮ್ ಕಾರ್ಡ್ ನಲ್ಲಿ ಕಟ್ ಮಾರ್ಕ್ ಇಲ್ಲದೆ ಇದ್ರೆ ಮೊಬೈಲ್ನಲ್ಲಿ ಅದನ್ನ ಸರಿಯಾಗಿ ಕೂರಿಸುವುದು ಕಷ್ಟ. ಹಾಗೇನೇ ಮೊಬೈಲ್ ಫೋನ್ ನಲ್ಲಿ ಸಿಮ್ ಕಾರ್ಡ್ ಅನ್ನು ಸರಿಯಾದ ಸ್ಥಳದಲ್ಲಿ, ಹಾಕಲು ಹಲವರಿಗೆ ಬರುವುದಿಲ್ಲ ಈ ರೀತಿ ಮಾರ್ಕ್ ಮಾಡಿ ಇರುವುದರಿಂದ ಸುಲಭವಾಗಿ ಸಿಮ್ ಕಾರ್ಡ್ ಆಯಾ ಸ್ಲಾಟ್ ನಲ್ಲಿ ಹಾಕಬಹುದು. ಸಿಮ್ ಕಾರ್ಡ್ ನ ಅಗಲ 25 ಎಂಎಂ ಉದ್ದ 15 ಎಂ ಎಂ ಹಾಗೂ ದಪ್ಪ 0.76 ಇರುತ್ತದೆ.
ಅಂದ ಹಾಗೆ ಸಿಮ್ ನ ಫುಲ್ ಫಾರ್ಮ್ ನಿಮಗೆ ಗೊತ್ತಾ? SIM ಅಂದ್ರೆ ಚಂದಾದಾರರ ಗುರುತು/ಮಾಹಿತಿ ಮಾಡ್ಯೂಲ್ (Subscriber Identity Module) ಇಂದು ಅರ್ಥ. ಇದು ಇಂಟರ್ನ್ಯಾಷನಲ್ ಮೊಬೈಲ್ ಸಬ್ಸ್ಕ್ರೈಬರ್ ಐಡೆಂಟಿಫಿಕೇಷನ್ (IMSI) ನಂಬರ್ ಹಾಗೂ ಅದರ ಸಂಯೋಜಿತ ಕೀಲಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿ ಇಡುವ ಕಾರ್ಡ್ ಆಪರೇಟಿಂಗ್ ಸಿಸ್ಟಮ್ (COS) ನಿರ್ವಹಿಸುವ ಇಂಟಿಗ್ರೇಟೆಡ್ ಸರ್ಕ್ಯೂಟ್ ಆಗಿದೆ. ಮೊಬೈಲ್ ಸಾಧನಗಳಲ್ಲಿ ಚಂದಾದಾರರನ್ನು ಗುರುತಿಸಲು ಮತ್ತು ಅವರ ದೃಢೀಕರಣಕ್ಕಾಗಿ ಈ ಸಂಖ್ಯೆ ಹಾಗೂ ಕೀಲಿಯನ್ನು ಬಳಸಲಾಗುತ್ತದೆ.
Advertisement