ನೀವು ಅತಿ ಕಡಿಮೆ ಬೆಲೆಗೆ ಬ್ರಾಂಡೆಡ್ ಫೋನ್ ಖರೀದಿ ಮಾಡಬೇಕು ಅಂತಂದ್ರೆ ಇದೇ ಸರಿಯಾದ ಸಮಯ. ಯಾಕೆ ಅಂತೀರಾ!? ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ನಡೆಯುತ್ತದೆ. ಗ್ರಾಹಕರು ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಗಳನ್ನು ಖರೀದಿ ಮಾಡಬಹುದು. ಅದರಲ್ಲೂ ರಿಯಲ್ ಮಿ, ರೆಡ್ಮಿ, ಝಿಯೋಮಿ ಮೊದಲಾದ ಭ್ರ್ಯಾಂಡ್ ಮೇಲೆ ಅತಿ ದೊಡ್ಡ ರಿಯಾಯಿತಿ ಘೋಷಿಸಲಾಗಿದೆ. 50 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ Redmi 10 ಅನ್ನು ಖರೀದಿ ಮಾಡಲು ಬಯಸಿದರೆ ನಿಮಗೆ ಅತ್ಯುತ್ತಮ ಆಫರ್ ಸಿಗಲಿದೆ.
14,999 ರೂಪಾಯಿ ರೆಡ್ಮಿ ಫೋನ್ ಅನ್ನು ಕೇವಲ 8,549 ರೂಪಾಯಿಗಳಿಗೆ ಖರೀದಿ ಮಾಡಬಹುದು. ಅಂದರೆ ಈ ಫೋನ್ ಮೇಲೆ ಬರೋಬ್ಬರಿ 6,450 ರೂ. ಗಳ ರಿಯಾಯಿತಿ ಪಡೆಯುತ್ತೀರಿ. ಇನ್ನು ರೆಡ್ ಮೀ 10 (Redmi 10) ಫೋನಿನ ವಿಶೇಷತೆ ಅಂದ್ರೆ 6000mah ಬ್ಯಾಟರಿ. ಈ ಫೋನಿನ ಇತರ ವೈಶಿಷ್ಟ್ಯತೆ ನೋಡುವುದಾದರೆ 6.71 ಇಂಚಿನ ಐಪಿಎಸ್ ಡಿಸ್ಪ್ಲೇ ಹೊಂದಿದೆ. ವೈಡ್ ವೈನ್ ಎಲ್1 ನ್ನು ಬೆಂಬಲಿಸುತ್ತದೆ ಜೊತೆಗೆ ಡಿಸ್ಪ್ಲೇ ಸೇಫ್ಟಿ ಗಾಗಿ ಗೊರಿಲ್ಲಾ ಗ್ಲಾಸ್ ಕೂಡ ಅಳವಡಿಸಲಾಗಿದೆ. ಮಲ್ಟಿ ಟಾಸ್ಕಿಂಗ್ ಹಾಗೂ ಫೋನಿನ ವೇಗ ಹೆಚ್ಚಿಸುವ ಸಲುವಾಗಿ ಸ್ನ್ಯಾಪ್ ಡ್ರ್ಯಾಗನ್ 680 6mn, ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು Adreno 610 GPU ಕೂಡ ಬಳಸಲಾಗಿದೆ.
ಇನ್ನು ಕ್ಯಾಮರಾ ವಿಚಾರಕ್ಕೆ ಬರೋಣ. Redmi 10 ಫೋನಿನಲ್ಲಿ ಹಿಂಭಾಗದಲ್ಲಿ ಡುಯಲ್ ರಿಯರ್ ಕ್ಯಾಮರಾ ನೀಡಲಾಗಿದೆ. 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಕ್ಯಾಮೆರಾ ಕೂಡ ಇದರಲ್ಲಿ ಅಳವಡಿಸಲಾಗಿದೆ. ಇನ್ನು ಈ ಮೊಬೈಲ್ ಫೋನ್ ನ ಇನ್ನೊಂದು ವಿಶೇಷತೆ ಅಂದ್ರೆ 6000 ಎಂ ಎ ಎಚ್ ಸಾಮರ್ಥ್ಯದ ಬ್ಯಾಟರಿ. 18w ವೇಗದ ಚಾರ್ಜಿಂಗ್ ಸೌಲಭ್ಯವಿದೆ. 3.5 ಎಂಎಂ ಹೆಡ್ ಫೋನ್ ಜಾಕ್, ಹಾಗೂ 1.5w ಸ್ಪೀಕರ್ ನೀಡಲಾಗಿದೆ. ಕಡಿಮೆ ಬಜೆಟ್ ಹಾಗೂ ಉತ್ತಮ ಸೌಲಭ್ಯ ಇರುವ ಈ ಫೋನ್ ನಿಮ್ಮ ಖರೀದಿಗೆ ಬೆಸ್ಟ್ ಆಯ್ಕೆ.