ಸದ್ಯಕ್ಕೆ ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ BSNL ಸಂಸ್ಥೆ ಬೇರೆ ಬೇರೆ ಕಂಪನಿಗಳ ಗ್ರಾಹಕರನ್ನು ತನ್ನ ಕಡೆಗೆ ಸೆಳೆದುಕೊಳ್ಳುವ ನಿಟ್ಟಿನಲ್ಲಿ ರಿಚಾರ್ಜ್ ಬೆಲೆನ ಕಡಿಮೆ ಮೌಲ್ಯದಲ್ಲಿ ನೀಡುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದರ ಜೊತೆಗೆ ಈಗ ತನ್ನ ಗ್ರಾಹಕರಿಗೆ ಮನೆಮನೆಗೂ 4G ಸರ್ವಿಸ್ ಗಳನ್ನು ತಲುಪಿಸುವ ಮೂಲಕ ಇನ್ನಷ್ಟು ಹೆಚ್ಚಿನ ಗ್ರಾಹಕರನ್ನು ಕೂಡ ತನ್ನ ಕಡೆಗೆ ಸೆಳೆದುಕೊಳ್ಳುವಂತಹ ಪ್ರಯತ್ನವನ್ನು ಮಾಡಲು ಹೊರಟಿದೆ. ದುಬಾರಿ ರಿಚಾರ್ಜ್ ಪ್ಲಾನ್ ಗಳಿಂದ ಬೇಸತ್ತಿದ್ದ ಬೇರೆ ಕಂಪನಿಗಳ ಗ್ರಾಹಕರಿಗೆ ಬಿಎಸ್ಎನ್ಎಲ್ ಸಂಸ್ಥೆ ಅತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಅನ್ನು ನೀಡಿರುವುದು ಮಾತ್ರವಲ್ಲದೆ ಈಗ ವೇಗದ ಇಂಟರ್ನೆಟ್ ಸೇವೆಯನ್ನು ನೀಡುವಂತಹ ಪ್ಲಾನಿಂಗ್ ಕೂಡ ಮಾಡಿಕೊಂಡಿದೆ.
ಬಿಎಸ್ಎನ್ಎಲ್ 4G ಸೇವೆ ಪ್ರತಿಯೊಬ್ಬರಿಗೂ ಸಿಗಲಿದೆ!
4G ಇಂಟರ್ನೆಟ್ ಸೇವೆಯನ್ನು ಪ್ರತಿಯೊಬ್ಬರಿಗೂ ಕೂಡ ತಲುಪಿಸುವ ನಿಟ್ಟಿನಲ್ಲಿ BSNL ಸಂಸ್ಥೆ ಈಗಾಗಲೇ ತನ್ನ ಕಾರ್ಯ ಯೋಜನೆಯನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡುತ್ತಿದೆ. ಸದ್ಯಕ್ಕೆ 1 ಲಕ್ಷಕ್ಕೂ ಹೆಚ್ಚಿನ ಟವರ್ ಗಳನ್ನು ಭಾರತದ ಎಲ್ಲೆಡೆ ಸ್ಥಾಪಿಸುವಂತಹ ಗುರಿಯನ್ನು ಬಿಎಸ್ಎನ್ಎಲ್ ಸಂಸ್ಥೆ ಹೊಂದಿದೆ.
ಈ ಟವರ್ ಗಳನ್ನು ಸ್ಥಾಪಿಸಿದ ನಂತರ 5G ನೆಟ್ವರ್ಕ್ ಅನ್ನು ಕೂಡ ಗ್ರಾಹಕರಿಗೆ ನೀಡುವಂತಹ ಯೋಜನೆಯನ್ನ ಹೊಂದಿದೆ. BSNL ಸಂಸ್ಥೆ ಗ್ರಾಹಕರಿಗೆ 4G ಸಿಮ್ ಕಾರ್ಡ್ಗಳನ್ನು ಮನೆಯಲ್ಲಿ ಕುಳಿತುಕೊಂಡಲ್ಲೇ ಆರ್ಡರ್ ಮಾಡುವಂತಹ ಅವಕಾಶವನ್ನು ಕೂಡ ಕಲ್ಪಿಸಿಕೊಟ್ಟಿದೆ. Purne ಕಂಪನಿಯ ಜೊತೆಗೆ ಪಾರ್ಟ್ನರ್ ಶಿಪ್ ನಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಕ್ವಿಕ್ ಸಿಮ್ ಡೆಲಿವರಿ ಮಾಡುವಂತಹ ಯೋಜನೆಯನ್ನು ಜಾರಿಗೆ ತಂದಿದೆ.
ಬಿಎಸ್ಎನ್ಎಲ್ 4G ಸಿಮ್ ಅನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡುವ ವಿಧಾನ!
- BSNL ಸಂಸ್ಥೆಯ 4G ಸಿಮ್ ಕಾರ್ಡ್ ಆರ್ಡರ್ ಮಾಡೋದಕ್ಕೆ ಮೊದಲಿಗೆ ನೀವು Purne ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಈ ವೆಬ್ ಸೈಟಿಗೆ ಹೋದ ನಂತರ Busy Sim Card ಆಪ್ಷನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.
- ಇಲ್ಲಿ ಆಪರೇಟರ್ ಆಪ್ಷನ್ ನಲ್ಲಿ ಬಿಎಸ್ಎನ್ಎಲ್ ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ.
- ಇಲ್ಲಿ ನಿಮ್ಮ ಲಭ್ಯತೆಗೆ ತಕ್ಕಂತೆ ಎಫ್ ಆರ್ ಸಿ ಆಕ್ಷನ್ ಅನ್ನು ಆಯ್ಕೆ ಮಾಡಬಹುದಾಗಿದೆ.
- ನಂತರ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಅನ್ನು ಸೆಂಡ್ ಮಾಡಲಾಗುತ್ತದೆ.
- ಈ ರೀತಿ ಪ್ರತಿಯೊಂದು ಹಂತಗಳನ್ನು ಪೂರೈಸಿದ ನಂತರ ನಿಮ್ಮ ಮನೆಗೆ ಹತ್ತು ನಿಮಿಷದಲ್ಲಿ ಬಿಎಸ್ಎನ್ಎಲ್ 4G ಸಿಮ್ ಕಾರ್ಡ್ ಅನ್ನು ಡೆಲಿವರಿ ಮಾಡಲಾಗುತ್ತದೆ.