ಭಾರತದ ಟೆಲಿಕಾಂ ಇಂಡಸ್ಟ್ರಿಯ ದೈತ್ಯ ಸಂಸ್ಥೆ ಆಗಿರುವ Jio ಭಾರತದಾದ್ಯಂತ 49 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದೆ. ಸದ್ಯದ ಮಟ್ಟಿಗೆ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಟೆಲಿಕಾಂ ಸಂಸ್ಥೆಯಾಗಿ ಜಿಯೋ (Jio) ಕಾಣಿಸಿಕೊಳ್ಳುತ್ತಿದೆ. ಜುಲೈ ತಿಂಗಳಲ್ಲಿ ಜಿಯೋ ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರಬಹುದು ತನ್ನ ರಿಚಾರ್ಜ್ ಪ್ಲಾನಿನ ಬೆಲೆಯನ್ನು ಹೆಚ್ಚು ಮಾಡಿತ್ತು. ಅದಾದ ನಂತರ ಸಾಕಷ್ಟು ಗ್ರಾಹಕರು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನಿನ ಹುಡುಕಾಟದಲ್ಲಿದ್ದರು. ಈಗ Airtel ಹಾಗೂ BSNL ಸಂಸ್ಥೆಗಳಿಗೆ ಟಕ್ಕರ್ ಕಾಂಪಿಟಿಷನ್ ನೀಡುವ ರೀತಿಯಲ್ಲಿ ಜಿಯೋ ಒಂದು ಹೊಸ ರಿಚಾರ್ಜ್ ಪ್ಲಾನ್ ಅನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬ ಜಿಯೋ ಗ್ರಾಹಕರು ಈ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.
ಜಿಯೋ ಪರಿಚಯಿಸಿದೆ 84 ದಿನಗಳ ವ್ಯಾಲಿಡಿಟಿಯ ಹೊಸ ರಿಚಾರ್ಜ್ ಪ್ಲಾನ್!
ದೀರ್ಘಕಾಲಕ್ಕೆ ಸ್ಪರ್ಧಾತ್ಮಕ ಬೆಲೆಯಲ್ಲಿ Jio ಸಂಸ್ಥೆ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಇದು ನಿಮಗೆ 1029 ರೂಪಾಯಿಗಳ ಬೆಲೆಯಲ್ಲಿ ಸಿಗಲಿದೆ. ಪದೇ ಪದೇ ರಿಚಾರ್ಜ್ ಮಾಡಬೇಕಾದಂತಹ ಯಾವುದೇ ರೀತಿಯ ಜಂಜಾಟಗಳು ಇನ್ಮುಂದೆ ಇರೋದಿಲ್ಲ. ಯಾಕೆಂದ್ರೆ ರಿಚಾರ್ಜ್ ಪ್ಲಾನ್ ಮೂಲಕ ಸರಿಸುಮಾರು ಮೂರು ತಿಂಗಳವರೆಗೂ ನೀವು ಯಾವುದೇ ಹೆಚ್ಚುವರಿ ರಿಚಾರ್ಜ್ ಇಲ್ಲದೆ ಈ ಸೇವೆಗಳನ್ನು ಆನಂದಿಸಬಹುದಾಗಿದೆ
ಈ ರಿಚಾರ್ಜ್ ಪ್ಲಾನ್ ನಲ್ಲಿ ಪ್ರತಿದಿನಕ್ಕೆ 2GB ಇಂಟರ್ನೆಟ್ ಲೆಕ್ಕಾಚಾರದಲ್ಲಿ ವ್ಯಾಲಿಡಿಟಿ ಇರುವವರೆಗೂ ಕೂಡ ಒಟ್ಟಾರೆ 168 ಜಿಬಿ ಇಂಟರ್ನೆಟ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ಅನಿಯಮಿತ 5G ಸೇವೆಗಳನ್ನು ಕೂಡ ನೀವು ಈ ಮೂಲಕ ಪಡೆದುಕೊಳ್ಳಬಹುದಾಗಿದೆ. ಸಿನಿಮಾಗಳನ್ನ ಹಾಗೂ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ನೋಡೋದಕ್ಕೆ ಇಷ್ಟಪಡುವವರು Amazon Prime ಚಂದದಾರಿಕೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ ಹಾಗೂ ಜಿಯೋ ಕ್ಲೌವ್ಡ್ ಸಬ್ಸ್ಕ್ರಿಪ್ಷನ್ ಸಹಿತ ಸಾಕಷ್ಟು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಜೊತೆಗೆ ಪ್ರತಿನಿತ್ಯ 100 ಉಚಿತ ಎಸ್ಎಂಎಸ್ ಗಳು ಕೂಡ ಈ ರಿಚಾರ್ಜ್ ಪ್ಲಾನ್ ನಲ್ಲಿ ಶಾಮಿಲಾಗಿದೆ. ಖಂಡಿತವಾಗಿ ದೀರ್ಘಕಾಲಿಕ ಸಮಯಾವಧಿಯಲ್ಲಿ ಜಿಯೋ ಗ್ರಾಹಕರಿಗೆ ಇದು ಬೆಸ್ಟ್ ರಿಚಾರ್ಜ್ ಆಫರ್ ಆಗಿದೆ.