ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್ ಫಾರ್ಮ್ ಆಗಿರುವ ವಾಟ್ಸಪ್ ತನ್ನ ಬಳಕೆದಾರರಿಗೆ ಅಗತ್ಯಕ್ಕೆ ತಕ್ಕ ಹಾಗೆ ಹೊಸ ಹೊಸ ವೈಶಿಷ್ಟ್ಯತೆಗಳನ್ನು ಪರಿಚಯಿಸುತ್ತದೆ. ವಾಟ್ಸಪ್ (WhatsApp) ಅನ್ನು ನಾವು ಬಳಸುತ್ತೇವೆ ಆದರೆ ಅದರಲ್ಲಿ ಅದೆಷ್ಟು ಹೊಸ ಹೊಸ ಫೀಚರ್ ಗಳನ್ನ ಅಳವಡಿಸಲಾಗಿದೆ. ಈ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇಲ್ಲ ವಾಟ್ಸಪ್ ನಲ್ಲಿ ಸರಿಯಾಗಿ ನೋಡಿದರೆ ನಿಮಗೆ ಸಾಕಷ್ಟು ವಿಶಿಷ್ಟವಾದ ಫೀಚರ್ ಗಳು ದೊರೆಯುತ್ತವೆ. ಅದರಲ್ಲೂ ಈಗ ವಾಟ್ಸಪ್ ಆಂಡ್ರಾಯ್ಡ್ ಬೀಟಾ ಹೊಸ ಫೀಚರ್ ಅನ್ನು ಪರಿಚಯಿಸಿದ್ದು ಗುಂಪು ಚಾರ್ಟ್ ನಲ್ಲಿ ಪ್ರೊಫೈಲ್ ಐಕಾನ್ ಪ್ರದರ್ಶಿಸುವ ಫೀಚರ್ ಇದಾಗಿದೆ.
ಹೌದು, ವಾಟ್ಸಪ್ ಬೀಟಾ (WhatsApp Beta) ಇನ್ಫೋ ವರದಿ ಮಾಡಿರುವ ಪ್ರಕಾರ ವಾಟ್ಸಾಪ್ ಯುಸರ್ಸ್ ಗ್ರೂಪ್ ಚಾಟ್ ಇನ್ನು ಮುಂದೆ ಇನ್ನಷ್ಟು ವಿಶೇಷವಾಗಲಿದೆ. ಬಳಕೆದಾರರು ಪ್ರೊಫೈಲ್ ಐಕಾನ್ ತೋರಿಸುವ ಮೂಲಕ ಗುಂಪಿನ ಸದಸ್ಯರ ಜೊತೆಗೆ ಸಂಭಾಷಣೆ ನಡೆಸಬಹುದು. ಸಾಮಾನ್ಯವಾಗಿ ಗುಂಪಿನ ಸದಸ್ಯರ ಹೆಸರುಗಳು ಒಂದೇ ಆಗಿದ್ದಾಗ ಅಥವಾ ಅವರ ಪ್ರೊಫೈಲ್ ನಲ್ಲಿ ಯಾವುದೇ ಫೋಟೋ ಇಲ್ಲದೆ ಇದ್ದಾಗ ವಾಟ್ಸಪ್ ನ ಈ ಹೊಸ ಫೀಚರ್ ಉಪಯೋಗಕ್ಕೆ ಬರುತ್ತದೆ. ಆದರೆ ಒಂದು ವೇಳೆ ಪ್ರೊಫೈಲ್ ಫೋಟೋ ಇಲ್ಲದೆ ಇದ್ದರೆ ಅಥವಾ ಪ್ರೈವಸಿ ಕಾರಣಕ್ಕೆ ಫೋಟೋವನ್ನು ಹೈಡ್ ಮಾಡಿದರೆ ಅಥವಾ ಒಂದೇ ಬಣ್ಣದಿಂದ ಕಾಂಟ್ಯಾಕ್ಟ್ ಹೈಲೈಟ್ ಮಾಡಿದರೆ ಪ್ರೊಫೈಲ್ ಫೋಟೋ ಕಾಣಿಸುವುದಿಲ್ಲ.
ವರದಿಯ ಪ್ರಕಾರ ಆಂಡ್ರಾಯ್ಡ್ ಗಾಗಿ ವಾಟ್ಸಾಪ್ ಬೀಟಾ ಇತ್ತೀಚಿಗೆ ಹೊಸ ನವೀಕರಣವನ್ನು ವಾಟ್ಸಪ್ ಪ್ಲೇ ಸ್ಟೋರ್ ನಲ್ಲಿ ಇನ್ಸ್ಟಾಲ್ ಮಾಡಿದ ನಂತರ ಬೀಟಾ ಟೆಸ್ಟರ್ಗಳಿಗೆ ಈ ಹೊಸ ಫೀಚರ್ ಲಭ್ಯವಾಗಲಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಜನ ಈ ಫೀಚರ್ ಬಳಸುವಂತೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಮೆಸೇಜಿಂಗ್ ಪ್ಲ್ಯಾಟ್ ಫಾರ್ಮ್ ಆಗಿರುವ ವಾಟ್ಸಾಪ್ ಆಂಡ್ರಾಯ್ಡ್ ಬೇಕಾದಲ್ಲಿ ಹೊಸ ವೈಶಿಷ್ಟ್ಯತೆಯನ್ನು ಇದೇ ತಿಂಗಳು ಆರಂಭ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಬಳಕೆದಾರರು ವಾಟ್ಸಾಪ್ ಆಂಡ್ರಾಯ್ಡ್ ಅಪ್ಡೇಟ್ ಮಾಡಿಕೊಳ್ಳಬೇಕು.