SIM Card: ಭಾರತದ ಎಲ್ಲಾ ರಾಜ್ಯದ ಪೊಲೀಸರಿಗೂ ಸೂಚನೆ! ಸಿಮ್ ಕಾರ್ಡ್ ಇರುವ ಎಲ್ಲರಿಗೂ ಇಂದು ಮಧ್ಯರಾತ್ರಿಯಿಂದ ಹೊಸ ರೂಲ್ಸ್.
ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಆಗಾಗ ಹೊಸ ಹೊಸ ನಿಯಮಗಳು ಬರುತ್ತವೆ. ದೂರಸಂಪರ್ಕ ಇಲಾಖೆ ಇತ್ತೀಚಿಗಷ್ಟೇ 9 ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಗಳನ್ನು ಹೊಂದಿರುವಂತಹ ಗ್ರಾಹಕರು ತಮ್ಮ ಸಿಮ್ ಕಾರ್ಡ್ (SIM Card) ಗಳನ್ನು ಚೆಕ್ ಮಾಡಿಸಿಕೊಳ್ಳುವುದು ಅತ್ಯಂತ ಕಡ್ಡಾಯ ಎಂಬುದಾಗಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಿಮ್ ಕಾರ್ಡ್ ಗಳನ್ನು ಬಳಸಿಕೊಂಡು ಕೆಲವೊಂದು ಕಾನೂನುಬಾಹಿರ ಕೆಲಸಗಳ ನಡೆಯುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿಯೇ ಸರ್ಕಾರ ಇಂತಹ ನಿಯಮಗಳನ್ನು ಜಾರಿಗೆ ತರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಕೂಡ ಅರ್ಥಮಾಡಿಕೊಳ್ಳಬೇಕಾಗಿದೆ.
ಒಂದು ವೇಳೆ ನಿಮ್ಮ ಸಿಮ್ ಕಾರ್ಡ್ ಅನ್ನು ನೀವು ಪರಿಶೀಲಿಸದೆ ಹೋದಲ್ಲಿ ನಿಮ್ಮ ಸಿಮ್ ಕಾರ್ಡ್ ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುವುದಾಗಿ ದೂರ ಸಂಪರ್ಕ ಇಲಾಖೆ ಅಧಿಕೃತವಾಗಿ ನಿಯಮವನ್ನು ಹೊರಡಿಸಿದ್ದು ಇದು ಜಮ್ಮು ಹಾಗೂ ಕಾಶ್ಮೀರದಲ್ಲಿ (J&K) ಇಲ್ಲ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ಉಲ್ಲೇಖಿಸಿದೆ. ನಿಯಮಗಳ ಪ್ರಕಾರ ಇಲ್ಲದೇ ಇರುವಂತಹ ಸಿಮ್ ಕಾರ್ಡ್ ಗಳನ್ನು ಡಾಟಾಬೇಸ್ ನಿಂದ ತೆಗೆದುಹಾಕುವಂತೆ ಕೂಡ ದೂರ ಸಂಪರ್ಕ ಇಲಾಖೆ ಸೂಚಿಸಿದೆ.
ಟೆಲಿಕಾಂ (Telecom) ಸಂಸ್ಥೆಯ ಗ್ರಾಹಕರುಗಳಿಗೆ 9 ಕಿಂತ ಅಧಿಕ ಸಿಮ್ ಕಾರ್ಡ್ ಅನ್ನು ಅವರ ಹೆಸರಿನಲ್ಲಿ ಹೊಂದಿರುವ ಹಾಗೆ ಇಲ್ಲ ಎಂಬುದಾಗಿ ಸೂಚಿಸಲಾಗಿದ್ದು, ಒಂದು ವೇಳೆ ಟೆಲಿಕಾಂ ಸಂಸ್ಥೆಗಳ ಗಮನಕ್ಕೆ ಅವರ ಗ್ರಾಹಕರು 9 ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಗಳನ್ನು ಹೊಂದಿದ್ದರೆ ಅದನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುವುದು ಎಂಬುದಾಗಿ ತಿಳಿಸಿದೆ. ಹಣಕಾಸು ವ್ಯವಹಾರಗಳು ಸೇರಿದಂತೆ ಕಾನೂನಿಗೆ ಬಾಹಿರಣಿಸುವಂತಹ ಅಪರಾಧಗಳಲ್ಲಿ ಅದರಲ್ಲೂ ವಿಶೇಷವಾಗಿ ಕೆಲವರಿಗೆ ಕರೆ ಮಾಡಿ ಆ ಮೂಲಕ ಅವರಿಂದ ಹಣವನ್ನು ಪಡೆಯುವ ವಿಚಾರಕ್ಕಾಗಿ ಇಂತಹ ಸಿಮ್ ಕಾರ್ಡ್ ಗಳನ್ನು ಹೆಚ್ಚಾಗಿ ಬಳಸುತ್ತಿರುವ ಕಾರಣಕ್ಕಾಗಿ ಟೆಲಿಕಾಂ ಸಂಸ್ಥೆಗೆ ಈ ರೀತಿಯ ನಿಯಮವನ್ನು ಪಾಲಿಸಲು ಆದೇಶ ನೀಡಲಾಗಿದೆ.
ದೂರದರ್ಶಕ ಇಲಾಖೆ (DoT) ಈ ರೀತಿ ಒಂಬತ್ತಕ್ಕಿಂತ ಅಧಿಕ ಸಿಮ್ ಕಾರ್ಡ್ ಗಳನ್ನು ಹೊಂದಿರುವಂತಹ ಗ್ರಾಹಕರ ಸಿಮ್ ಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ನಂತರ 30 ದಿನಗಳ ಒಳಗೆ ಔಟ್ ಗೋಯಿಂಗ್ ಕಾರ್ಯಗಳನ್ನು ನಿಲ್ಲಿಸಿ ಹಾಗೂ 45 ದಿನಗಳ ನಂತರ ಇನ್ಕಮಿಂಗ್ ಕರೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಅವರ ಟೆಲಿಕಾಂ ಕಂಪನಿಗಳಿಗೆ ದೂರ ಸಂಪರ್ಕ ಇಲಾಖೆ ಕಡ್ಡಾಯವಾಗಿ ನಿಯಮವನ್ನು ಜಾರಿಗೆ ಬರುವಂತೆ ಅಧಿಸೂಚನೆಯನ್ನು ನೀಡಿದೆ. ಇದರ ನಡುವೆ ಒಂದು ವೇಳೆ ಹೆಚ್ಚಾದ ಸಿಮ್ ಕಾರ್ಡ್ಗಳನ್ನು ಹೊಂದಿರುವಂತಹ ಗ್ರಾಹಕರು ಅವರೇ ಹೆಚ್ಚಾದ ಸಿಮ್ ಗಳನ್ನು ಸರೆಂಡರ್ ಮಾಡಿದರೆ ಅವರಿಗೆ ಲಾಭ ಎಂದು ದೂರ ಸಂಪರ್ಕ ಇಲಾಖೆ ಹೇಳಿಕೊಂಡಿದೆ. ಹೀಗಾಗಿ ಒಂದು ವೇಳೆ ನೀವು ಹೆಚ್ಚಾದ ಸಿಮ್ ಕಾರ್ಡ್ ಗಳನ್ನು ಹೊಂದಿದ್ದರೆ ಸ್ವತಹ ನೀವೇ ಸರೆಂಡರ್ ಮಾಡಿಕೊಳ್ಳುವುದು ಒಳ್ಳೆಯದು.