BSNL Recharge Plan: ರಿಚಾರ್ಜ್ ಪ್ಲಾನ್ಸ್ ನಲ್ಲಿ BSNL ನೀಡಿದ ಟ್ವಿಸ್ಟ್, 5 ತಿಂಗಳ ಕಾಲ ಎಲ್ಲವೂ ಫ್ರೀ.
ಸರ್ಕಾರಿ ಸ್ವಾಮ್ಯದ ಕಂಪನಿ ಆಗಿರುವ ಬಿ ಎಸ್ ಎನ್ ಎಲ್(BSNL), ಉಳಿದ ಖಾಸಗಿ ಟೆಲಿಕಾಂ(Telecom) ಕಂಪನಿಗಳಿಗೆ ಹೋಲಿಸಿದರೆ ಇಂದು ಮೂಲೆಗುಂಪಾಗಿದೆ ಎಂದು ಹೇಳಬಹುದು. ಏಕೆಂದರೆ ಗ್ರಾಹಕರನ್ನ ಆಕರ್ಷಿಸಲು ಹೊಸ ಹೊಸ ಆಫರ್ ಗಳನ್ನು ರಿಚಾರ್ಜ್ ಪ್ಲಾನ್(Recharge Plan) ನಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಅಳವಡಿಸಿಕೊಳ್ಳುತ್ತಿದ್ದರೆ, ಬಿಎಸ್ಎನ್ಎಲ್ ಮಾತ್ರ ತನ್ನ ಹಳೆಯ ಪದ್ಧತಿಯಲ್ಲಿ ಮುಂದುವರೆಯುತ್ತಿತ್ತು.
ಆದರೆ ಇದೀಗ ಮತ್ತೆ ಮೈನ್ ಸ್ಟ್ರೀಮ್‌ಗೆ ಬರಲು ಪ್ರಯತ್ನಿಸುತ್ತಿರುವ ಬಿಎಸ್ಎನ್ಎಲ್ ಈಗಾಗಲೇ ಗ್ರಾಹಕರಿಗೆ ಬೇಕಾಗುವಂತಹ ಹೊಸ ಯೋಜನೆಗಳನ್ನು ಪರಿಚಯಿಸಿದೆ. ಇಂದು ರಿಚಾರ್ಜ್ ಬೆಲೆ ಒಟ್ಟಾರೆಯಾಗಿ ಜಾಸ್ತಿ ಆಗಿದೆ ಈ ಹಿನ್ನೆಲೆಯಲ್ಲಿ 400 ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಯ ಯೋಜನೆಗಳನ್ನು ಬಿಎಸ್ಎನ್ಎಲ್ ಪರಿಚಯಿಸುತ್ತಿದೆ.
ಬಿಎಸ್ಎನ್ಎಲ್ ಪರಿಚಯಿಸುವ 397:
ಬಿಎಸ್ಎನ್ಎಲ್ 397 ಯೋಜನೆಯನ್ನು ಪ್ರಾರಂಭಿಸಿದ್ದು 400 ಗಳಿಗಿಂತ ಕಡಿಮೆ ಇರುವ ಹಾಗೂ ಇತರ ಕಂಪನಿಗಳಿಗೆ ಠಕ್ಕರ್ ಕೊಡುವ ಯೋಜನೆ ಇದಾಗಿದೆ. 150 ದಿನಗಳ ವ್ಯಾಲಿಡಿಟಿ (Validity)ಹೊಂದಿದೆ ಅಂದರೆ ಒಮ್ಮೆ ರಿಚಾರ್ಜ್ ಮಾಡಿದ್ರೆ ಸಾಕು ಐದು ತಿಂಗಳ ಕಾಲ ನೀವು ಆರಾಮಾಗಿ ಇರಬಹುದು. ಬಿಎಸ್ಎನ್ಎಲ್ ನ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಈ ಯೋಜನೆಯ ಇತರ ಉಪಯೋಗಗಳನ್ನು ನೋಡೋಣ.
ಎರಡು ಜಿಬಿ ದೈನಂದಿನ ಇಂಟರ್ನೆಟ್ ಡಾಟಾವನ್ನು(Internet Data) 60 ದಿನಗಳ ವರೆಗೆ ಪಡೆಯಬಹುದು ಜೊತೆಗೆ ಅನಿಯಮಿತ ಧ್ವನಿ ಕರೆಗಳ ಪ್ರಯೋಜನ ಕೂಡ ಇದರಲ್ಲಿ ಇದೆ. ಇದಷ್ಟೇ ಅಲ್ಲದೆ 397 ಯೋಜನೆಯಲ್ಲಿ ದಿನಕ್ಕೆ 100 ಉಚಿತ ಎಸ್ಎಂಎಸ್(MMS) ಹಾಗೂ ಉಚಿತ ಪರ್ಸನಲ್ ರಿಂಗ್ ಬ್ಯಾಕ್ ಟೋನ್ ಪ್ರಯೋಜನ ಕೂಡ ಪಡೆಯಬಹುದು. 60 ದಿನಗಳ ಬಳಿಕ ನೀವು ಅನಿಯಮಿತ ಡಾಟಾ ಮತ್ತು ಕರೆಯನ್ನು ಪಡೆಯಲು ವೊಚರ್ ರೀಫಿಲ್ಲಿಂಗ್ ಮಾಡಿದರೆ ಸಾಕು.
ಬಿಎಸ್ಎನ್ಎಲ್ ನ 399 ರೂಪಾಯಿಗಳ ಯೋಜನೆ:
ಇದು ಕೂಡ ಜನಪ್ರಿಯ ಯೋಜನೆ ಆಗಿದ್ದು 80 ದಿನಗಳ ಮಾನ್ಯತೆ ಹೊಂದಿದೆ. ದಿನವೂ ಉಚಿತವಾಗಿ 100 ಎಸ್ಎಂಎಸ್ ಹಾಗೂ ಯಾವುದೇ ನೆಟ್ವರ್ಕ್ ಗೆ(Internet) ಅನಿಯಮಿತ ಕರೆ ಸೌಲಭ್ಯವನ್ನು 80 ದಿನಗಳ ವರೆಗೆ ಪಡೆಯಬಹುದು.