ದೇಶದಲ್ಲಿ ಪ್ರಮುಖ ನಗರಗಳಲ್ಲಿ ಫೈವ್ ಜಿ ಪರೀಕ್ಷೆ ಸಕ್ಸಸ್ ಆಗಿದ್ದು ಇದೀಗ ಎಲ್ಲ ಟೆಲಿಕಾಂ ಕಂಪನಿಗಳು 5ಜಿ ಆರಂಭಿಸಿವೆ. ಎರ್ಟೆಲ್ ಹಾಗೂ ಜಿಯೋ ಕಂಪನಿಗಳು ಈಗಾಗಲೇ ಜನರಿಗೆ 5ಜಿ ಪಡೆದುಕೊಳ್ಳುವುದಕ್ಕಾಗಿ ರಿಚಾರ್ಜ್ ನಲ್ಲಿ ವಿಶೇಷ ಪ್ಲಾನ್ ಗಳನ್ನು ಕೂಡ ಬಿಡುಗಡೆ ಮಾಡಿವೆ. ಆದರೆ ಗ್ರಾಹಕರು 5ಜಿ ವೇಗದ ಇಂಟರ್ನೆಟ್ ಪಡೆದುಕೊಳ್ಳಬೇಕು ಅಂದ್ರೆ ಅವರು ಬಳಸುವ ಮೊಬೈಲ್ ಕೂಡ 5ಜಿ ಸಪೋರ್ಟಿವ್ ಆಗಿರಬೇಕು. ಹಾಗಾಗಿ ಇತ್ತೀಚಿನ ಮೊಬೈಲ್ಗಳಲ್ಲಿ 5ಜಿ ಇದ್ದೇ ಇರುತ್ತದೆ ಆದರೂ ಬಳಕೆದಾರರು ಫೋನ್ ಖರೀದಿ ಮಾಡುವಾಗ ಈ ಬಗ್ಗೆ ಗಮನಿಸುತ್ತಾರೆ. 5g ಎಂದು ಹೇಳಿದ ಮಾತ್ರಕ್ಕೆ ಆ ಫೋನ್ ನಿಜವಾಗಿಯೂ 5g ಸಪ್ಪೋರ್ಟ್ ಮಾಡುತ್ತಾ ಇಲ್ಲವಾ ಎಂಬುದನ್ನ ಪರಿಶೀಲಿಸದೆ ಮನೆಗೆ ತಂದರೆ ಅದು ಮೂರ್ಖತನ ಎನಿಸಿಕೊಳ್ಳುತ್ತದೆ. ಹಾಗಾಗಿ ನಿಮ್ಮ ಫೋನ್ 5ಜಿ ಹೌದೋ ಅಲ್ಲವೋ ತಿಳಿದುಕೊಳ್ಳಲು ಈ ಸಣ್ಣ ಟ್ರಿಕ್ಸ್ ಬಳಸಿ.
5ಜಿ ಸ್ಮಾರ್ಟ್ ಫೋನ್ ನಲ್ಲಿ ಏನಿರುತ್ತೆ?
1. ಹೀಟ್ ಡಿಸಿಪ್ಷನ್ ಸಿಸ್ಟಮ್ (ಶಾಖ ಪ್ರಸರಣ):
ನೀವು 5ಜಿ ಸ್ಮಾರ್ಟ್ ಖರೀದಿಸುವಾಗ ಆ ಫೋನ್ ಶಾಖ ಪ್ರಸರಣ ಅಥವಾ ಹೀಟ್ ಡಿಸಿಪ್ಷನ್ ಹಾಗೂ ವಿಪೂರ್ ಕೂಲಿಂಗ್ ಚೇಂಬರ್ ಅಳವಡಿಸಲಾಗಿದೆಯಾ ಇಲ್ಲವಾ ಎಂಬುದನ್ನು ಗಮನಿಸಿ. ಯಾಕೆಂದರೆ ಈ ವೈಶಿಷ್ಟ್ಯತೆ ಅಳವಡಿಸುವುದು ಅನಿವಾರ್ಯ. ನೀವು ಆನ್ಲೈನ್ ಗೇಮಿಂಗ್ ಗಾಗಿ ಫೋನನ್ನು ಬಳಸಿದರೆ ಅಥವಾ ಇತರ ಕಾರಣಗಳಿಗಾಗಿ ಇಂಟರ್ನೆಟ್ ಹೆಚ್ಚಾಗಿ ಬಳಸುತ್ತಿದ್ದರೆ ಫೋನ್ ಬಿಸಿ ಆಗಬಾರದು. ಅದಕ್ಕಾಗಿ ಈ ವೈಶಿಷ್ಟ್ಯತೆಗಳನ್ನು ಮೊಬೈಲ್ ನಲ್ಲಿ ಅಳವಡಿಸಿಕೊಂಡಿರಬೇಕು ಇದರಿಂದ ಮೊಬೈಲನ ಕಾರ್ಯಕ್ಷಮತೆ ಕೂಡ ಸರಿಯಾಗಿರುತ್ತದೆ.
2. ಫೋನಿನ ರಾಮ್(RAM):
5ಜಿ ಫೋನ್ ಹೆಚ್ಚು ಸಮಯ ಬಾಳಿಕೆ ಬರಬೇಕು ಅಂದ್ರೆ ನೀವು ಮುಖ್ಯವಾಗಿ ಉತ್ತಮ ರಾಮ್ ಇರುವ ಫೋನ್ ಖರೀದಿ ಮಾಡಬೇಕು. ಮೊದಲಿನಂತೆ 4ಜಿಬಿ ಅಥವಾ 6ಜಿಬಿ RAMಗಳು ವೇಗವಾದ ನೆಟ್ವರ್ಕ್ ಪಡೆದುಕೊಳ್ಳುವಲ್ಲಿ ಸಮಸ್ಯೆ ಉಂಟುಮಾಡಬಹುದು ಯಾಕೆಂದರೆ ವೇಗವಾದ ನೆಟ್ವರ್ಕ್ ಹೆಚ್ಚು ಮೆಮೊರಿಯನ್ನು ಬಳಸಿಕೊಳ್ಳುತ್ತದೆ. ಹಾಗಾಗಿ ನಿಮ್ಮ 5ಜಿ ಸ್ಮಾರ್ಟ್ ಫೋನ್ ಕನಿಷ್ಠ 8gb RAM ಹೊಂದಿರುವಂತೆ ನೋಡಿಕೊಳ್ಳಿ.
3. 5ಜಿ ಬ್ಯಾಂಡ್ ಬೆಂಬಲ:
ಈಗಾಗಲೇ ದೇಶದ ಪ್ರಮುಖ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ 5ಜಿ ಸೇವೆಯನ್ನು ಆರಂಭಿಸಿವೆ. ಏರ್‌ಟೆಲ್ ನ ಬ್ಯಾಂಡ್ ಗಳು ಇಂತಿವೆ. 900 MHz ನN8, 1800 MHz ನ N3, 2100 MHz ನ N1, 3300 MHzನ N78 ಮತ್ತು 26 GHz ನ N258. ಇದರಲ್ಲಿ ಎರ್ಟೆಲ್ ಈಗ N8 ಮತ್ತು N3 ಬ್ಯಾಂಡ್‌ಗಳನ್ನು ಬಳಸುತ್ತಿದೆ. ಇನ್ನು ಜಿಯೋ 700MHz ನ n28, 3300MHz ನ n78 ಮತ್ತು 26GHz ನ n58 ಬ್ಯಾಂಡ್ ಹೊಂದಿದೆ ಅವುಗಳಲ್ಲಿ ಈಗ ಗ್ರಾಹಕರ ಬಳಕೆಗೆ ಲಭ್ಯವಿರುವುದು, N28 ಮತ್ತು N78. ಅದೇ ರೀತಿ ವಡಾಫೋನ್ ಐಡಿಯಾ (VI) 3300MHz ನ n78 ಮತ್ತು 26 GHz ನ n258 ಬ್ಯಾಂಡ್‌ಗಳನ್ನು ಬಳಸುತ್ತಿದೆ. ಹಾಗಾಗಿ ನೀವು ಇದನ್ನು ಗಮನದಲ್ಲಿ ಇಟ್ಟುಕೊಂಡು ಸ್ಮಾರ್ಟ್ ಫೋನ್ ಖರೀದಿ ಮಾಡಿ. ಗರಿಷ್ಠ 5ಜಿ ಬ್ಯಾಂಡ್ ಬೆಂಬಲ ಇರುವ ಫೋನ್ ಅನ್ನೇ ಖರೀದಿಸಿ.
4. ಬ್ಯಾಟರಿ:
5g ಫೋನ್ ತೆಗೆದುಕೊಳ್ಳುವವರು ಬ್ಯಾಟರಿ ಬಗ್ಗೆಯೂ ಕೂಡ ತಿಳಿದುಕೊಳ್ಳಬೇಕು ಕಡಿಮೆ ಅಥವಾ ಹೆಚ್ಚಿನ ಬ್ಯಾಟರಿ ಇರುವ ಫೋನ್ ಖರೀದಿಸಬೇಡಿ. ಅಲ್ಲದೆ ಫಸ್ಟ್ ಚಾರ್ಜಿಂಗ್ ಇದಿಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ. 44W ಅಥವಾ ಅದಕ್ಕಿಂತ ಹೆಚ್ಚಿನ ಚಾರ್ಜಿಂಗ್ ಇರುವ ಫೋನಿನ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.
5. ರೆಸುಲ್ಯೂಷನ್ ಸ್ಕ್ರೀನ್ ಗಮನಿಸಿ:
ಮೊಬೈಲ್ ಸ್ಕ್ರೀನ್ ವೈಶಿಷ್ಟ್ಯತೆ ಹಾಗೂ ಅದರ ರೆಸುಲ್ಯೂಷನ್ ಕೂಡ ಬಹಳ ಮುಖ್ಯವಾಗಿರುತ್ತದೆ. ಇತ್ತೀಚಿಗೆ ಹೆಚ್ಚಾಗಿ ಅಮೂಲ್ಲೆಡ್ ಅಥವಾ ಒಲೆಡ್ ಸ್ಕ್ರೀನ್ ಪ್ಯಾನಲ್ ಬಳಸಲಾಗುತ್ತಿದೆ. 90 ಎಚ್ z ಸ್ಕ್ರೀನ್ ರಿಫ್ರೆಶ್ ದರ ಹಾಗೂ 120, 144 ಹೆಚ್‌ಝೆಡ್ ರಿಫ್ರೆಶ್ ದರ ಇರುವ ಫೋಟೋ ಉತ್ತಮ ಎಂದು ಪರಿಗಣಿಸಲಾಗಿದೆ.
6. ಡಾಲ್ಬಿ ಇಂಟಿಗ್ರೇಶನ್:
ಫೈವ್ ಜಿ ಸ್ಮಾರ್ಟ್ ಫೋನ್ ಖರೀದಿ ಮಾಡುವಾಗ ಧ್ವನಿ ಕೆಪ್ಯಾಸಿಟಿ ಕೂಡ ಚೆಕ್ ಮಾಡಬೇಕು. 5ಜಿಯನ್ನು ಹೆಚ್ಚಾಗಿ ಮನೋರಂಜನೆ ಹಾಗೂ ಗೇಮಿಂಗ್ ಗಾಗಿ ಬಳಸಿಕೊಳ್ಳುವವರು ಹೆಚ್ಚು. ಹಾಗಾಗಿ ಮಾಹಿತಿ ತೆಗೆದುಕೊಂಡು ನಂತರ ಫೋನ್ ಖರೀದಿಸಿ. ಇವಿಷ್ಟು 5ಜಿ ಸ್ಮಾರ್ಟ್ ಫೋನ್ ಖರೀದಿಗೂ ಮೊದಲು ನೀವು ವಿಶೇಷವಾಗಿ ಗಮನಹರಿಸಬೇಕಾದ ಮುಖ್ಯ ವಿಚಾರಗಳು.