ಮೊಬೈಲ್ ಫೋನ್ ಇದ್ರೆ ಸಾಕಾ, ಅದನ್ನ ಸರಿಯಾಗಿ ಬಳಸಿಕೊಳ್ಳಬೇಕು ಅಂದ್ರೆ ಅದರಲ್ಲಿ ಸಿಮ್ ಕಾರ್ಡ್ ಬೇಕೇ ಬೇಕು. SIM Card ಇಲ್ಲದೆ ಇದ್ರೆ ಫೋನ್ ವರ್ಕ್ ಆಗುವುದಿಲ್ಲ. ಆದರೆ ಹೀಗೆ ಅಂದುಕೊಳ್ಳುವವರಿಗೆ ಒಂದು ಗುಡ್ ನ್ಯೂಸ್ ಇದೆ. ಅದೇನು ಗೊತ್ತಾ? ಇನ್ನು ಮುಂದೆ ಇ- ಸಿಮ್ (E-SIM) ಅನ್ನು ಬಳಸಿ ಮೊಬೈಲ್ ಫೋನ್ ಕೆಲಸ ಮಾಡುತ್ತದೆ. ಸಾಮಾನ್ಯ ಸಿಮ್ ಕಾರ್ಡ್ ಬದಲು ಇ-ಸಿಮ್ ಕಾರ್ಡ್ ಅನ್ನು ಬಳಸಲಾಗುತ್ತದೆ. ಅಂದರೆ ಫೋನಿನಲ್ಲಿ ಭೌತಿಕ ಸಿಮ್ ಇರುವುದಿಲ್ಲ ಅದರ ಬದಲು ಸಿಮ್ಅನ್ನು ಫೋನಿನಲ್ಲಿ ಎಂಬೆಡ್ ಮಾಡಿರಲಾಗುತ್ತದೆ.
ಮೂರು ಕಂಪನಿಗಳಿಂದ ಆರಂಭ ಹೊಸ ಸೇವೆ:
ಪ್ರಮುಖ ಟೆಲಿಕಾಂ ಕಂಪನಿಗಳಾದ Airtel, Jioಹಾಗೂ ವಿ ಐ ಭಾರತದಲ್ಲಿ ಮೊಬೈಲ್ ನಲ್ಲಿ ಸಿಮ್ ಬಳಸದೆ E-SIM ಮೂಲಕ ಸೇವೆ ಒದಗಿಸುವುದಕ್ಕೆ ಮುಂದಾಗಿವೆ. ಆದರೆ ಎಲ್ಲಾ ಫೋನ್ ಗಳಲ್ಲಿಯೂ ಇ-ಸಿಮ್ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಅದಕ್ಕಾಗಿ ನಿಮ್ಮ ಭೌತಿಕ ಸಿಮ್ ಅನ್ನು ಇ-ಸಿಮ್ ಆಗಿ ಪರಿವರ್ತಿಸಿಕೊಳ್ಳಬೇಕಾಗುತ್ತದೆ. ಜಿಯೋ ಒದಗಿಸುತ್ತಿರುವ ಇ-ಸಿಮ್ ಕಾರ್ಡ್ ಸೇವೆಯನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಹೇಗೆ ಸಕ್ರಿಯಗೊಳಿಸಿಕೊಳ್ಳಬೇಕು ಎಂಬದನ್ನು ನಾವಿಲ್ಲಿ ಹೇಳುತ್ತಿದ್ದೇವೆ.
ರಿಲಯನ್ಸ್ ಜಿಯೋದ ಈ ಸಿಮ್ ಸೇವೆ:
ಇ-ಸಿಮ್ ನ್ನು ನೀವು ಪಡೆದುಕೊಳ್ಳಲು ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಇ-ಸಿಮ್ ಖಚಿತಪಡಿಸಿಕೊಳ್ಳಬೇಕು. ಇದನ್ನು ಜಿಯೋದ ಅಧಿಕೃತ ವೆಬ್ಸೈಟ್ ಮೂಲಕ ಪರಿಶೀಲಿಸಿಕೊಳ್ಳಬಹುದು. ನಂತರ ಮೊಬೈಲ್ ನಲ್ಲಿ ಸೆಟ್ಟಿಂಗ್ ಗೆ ಹೋಗಿ ಅಲ್ಲಿ ನಿಮ್ಮ ಐಎಂಈಐ ಮತ್ತು ಇಐಡಿ ಸಂಖ್ಯೆಯನ್ನು ಚೆಕ್ ಮಾಡಲು ಸಾಧ್ಯವಿದೆ. ಈಗ ನೀವು ಜಿಯೋ ಸಿಮ್ ಹೊಂದಿದ್ದರೆ ಆಂಡ್ರಾಯ್ಡ್ ಸಾಧನದಿಂದ GETSIM ಎಂದು ಟೈಪ್ ಮಾಡಿ ಅದರಲ್ಲಿ 32 ಡಿಜಿಟ್ ಆಕ್ಟಿವೇಶನ್ ಕೋಡ್ ಹಾಕಿ 199ಗೆ ಮೆಸೇಜ್ ಕಳುಹಿಸಬೇಕು. ನಂತರ 19 ಡಿಜಿಟ್ ಇ ಸಿಮ್ ನಂಬರ್ ಹಾಗೂ ಇ- ಸಿಮ್ ನ ಪರ್ಸನಲ್ ಡೀಟೇಲ್ಸ್ ಅನ್ನು ಪಡೆಯುತ್ತೀರಿ. ನೀವು ಮೆಸೇಜ್ ಕಳುಹಿಸಿದ 2 ಗಂಟೆಗಳ ನಂತರ ಇ- ಸಿಮ್ ಪ್ರಕ್ರಿಯೆಯ ಕುರಿತು ಅಪ್ಡೇಟ್ ಪಡೆಯುತ್ತೀರಿ.
ಎಸ್ಎಂಎಸ್ ಸ್ವೀಕರಿಸಿದ ನಂತರ ‘1’ ನ್ನು 183 ಗೆ ಕಳುಹಿಸಿ. ಹೀಗೆ ನೀವು ಖಚಿತಪಡಿಸಿದ ನಂತರ ಜೀಯೋ ಸಂಖ್ಯೆಗೆ ಒಂದು ಕರೆ ಬರುತ್ತದೆ. ಅದರಲ್ಲಿ ನೀವು ನಿಮಗೆ ಎಸ್ ಎಂ ಎಸ್ ಬಂದಿರುವ 19 ಅಂಕೆಯ ಇ-ಸಿಮ್ ಸಂಬರ್ ಅನ್ನು ಹೇಳಬೇಕು. ನಂತರ ನಿಮ್ಮ ಇ-ಸಿಮ್ ಕನ್ಫರ್ಮ್ ಆಗಿದೆ ಎಂದು ದೃಢೀಕರಣ ಎಸ್ ಎಂ ಎಸ್ ಬರುತ್ತದೆ. ಅಲ್ಲಿಂದ ಈ-ಸಿಮ್ ಸೇವೆ ಬಳಸಿಕೊಳ್ಳಬಹುದು.