TATA Nexon EV: ನಾಳೆ ಲಾಂಚ್ ಆಗಲಿದೆ 453km ರೇಂಜ್ ನಲ್ಲಿ ಓಡಬಲ್ಲ ಟಾಟಾ ಕಾರು, ಇಲ್ಲಿದೆ ಬೆಲೆ
ಈಗಾಗಲೇ ಮಾರುಕಟ್ಟೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕಲ್ ವಾಹನಗಳ ಡಿಮ್ಯಾಂಡ್ ಹೆಚ್ಚಾಗುತ್ತಿದ್ದು ಅದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ಟಾಟಾ ಸಂಸ್ಥೆಯ TATA Nexon EV Max ನ ಹೊಸ ಕಾರ್ ಬಿಡುಗಡೆಯಾಗುತ್ತಿದೆ. ಅದು ಕೂಡ ನಾಳೆ ಅಂದರೆ ಏಪ್ರಿಲ್ 17ರಂದು. ಹಾಗಿದ್ದರೆ ಬನ್ನಿ ಇಂದಿನ ಲೇಖನಿಯಲ್ಲಿ ಈ ಕಾರಿನಲ್ಲಿ ಸಿಗುವಂತಹ ಹೊಸ ಫೀಚರ್ ಗಳು ಹಾಗೂ ವಿಶೇಷತೆಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಕಾರಿನ ಹೊರ ವಿನ್ಯಾಸ ಗ್ರೇ(Gray) ಕಲರ್ ನಲ್ಲಿ ಕಾಣಿಸಿಕೊಳ್ಳಲಿದ್ದು ಒಳ ವಿನ್ಯಾಸ ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ ಎಂಬುದಾಗಿ ಮೊದಲ ಲುಕ್ ನಿಂದ ತಿಳಿದು ಬಂದಿದೆ.
40.5kwh ನ ದೊಡ್ಡ ಮಟ್ಟದ ಬ್ಯಾಟರಿ ಬ್ಯಾಕಪ್ ಈ ಕಾರಿನಲ್ಲಿ ಸಿಗಲಿದೆ. ಇದರ ಮೋಟರ್ 141Bhp ಜೊತೆಗೆ 450Nm ಟಾರ್ಕ್ ಪವರ್ ಅನ್ನು ಜನರೇಟರ್ ಮಾಡುತ್ತದೆ. ಈ ಫೋರ್ ವೀಲರ್ ಕಾರ್ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 453 ಕಿಲೋ ಮೀಟರ್ ರೇಂಜ್ ಅನ್ನು ಕವರ್ ಮಾಡುತ್ತದೆ ಎಂಬುದಾಗಿ ಕೂಡ ಮೂಲಗಳಿಂದ ತಿಳಿದು ಬಂದಿದೆ. ಫಾಸ್ಟ್ ಚಾರ್ಜಿಂಗ್ ಕೂಡ ಈ ಕಾರಿನಲ್ಲಿ ಲಭ್ಯವಾಗಿರುತ್ತದೆ. ಚಾರ್ಜಿಂಗ್ ಗಾಗಿ 7.2kw ಎಸಿ ಚಾರ್ಜರ್ ಅನ್ನು ಕೂಡ ನೀಡಲಾಗಿದ್ದು ಇದರ ಜೊತೆಗೆ ಡಿಸಿ ಚಾರ್ಜಿಂಗ್ ಕೂಡ ಸಪೋರ್ಟ್ ಆಗುತ್ತದೆ. ಕಂಪನಿಯ ಮೂಲಗಳ ಪ್ರಕಾರ ಇದರಲ್ಲೂ ಸಂಪೂರ್ಣವಾಗಿ ಚಾರ್ಕೋಲ್ ಬ್ಲಾಕ್ ಬಣ್ಣದಲ್ಲಿ ಕಂಡು ಬರಲಿದೆ.
ಇಷ್ಟೊಂದು ಒಳ್ಳೆಯ ಫೀಚರ್ಗಳನ್ನು ಹೊಂದಿರುವಂತಹ ಈ ಕಾರಿನ ಬೆಲೆ ಎಷ್ಟಿರಬಹುದು ಎಂಬುದಾಗಿ ನೀವು ಅಂದಾಜು ಹಾಕುತ್ತಿರಬಹುದು ಬನ್ನಿ ಅದರ ಕುರಿತಂತೆ ಕೂಡ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಇದರ ಕುರಿತಂತೆ ಎಲ್ಲಿಯೂ ಕೂಡ ಕಂಪನಿ ಅಧಿಕೃತವಾಗಿ ಬೆಲೆಯ ಘೋಷಣೆಯನ್ನು ಮಾಡಿಲ್ಲ ಆದರೆ ಮಾಧ್ಯಮಗಳ ಮೂಲಗಳ ಪ್ರಕಾರ ಈ ಕಾರಿನ ಬೆಲೆ 16.49 – 18.99 ಲಕ್ಷ ರೂಪಾಯಿಗಳ ರೇಂಜಿನಲ್ಲಿ ಇರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಹೀಗಾಗಿ ಲಾಂಗ್ ರೇಂಜ್ ರನ್ನು ಕೊಡುವಂತಹ ಎಲೆಕ್ಟ್ರಿಕಲ್ ಕಾರ್ ಗಾಗಿ ನೀವು ಹುಡುಕುತ್ತಿದ್ದರೆ ಖಂಡಿತವಾಗಿ TATA Nexon EV Max ಕಾರ್ ನಿಮಗೆ ಹೇಳಿ ಮಾಡಿಸಿದ ಕಾರ್ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.