Karnataka Times
Trending Stories, Viral News, Gossips & Everything in Kannada

WhatsApp New Feature: ವಾಟ್ಸಾಪ್ ನಲ್ಲಿ ಬಂತು ಮತ್ತೊಂದು ಹೊಸ ಫೀಚರ್, ಈಗಲೇ ತಿಳಿದುಕೊಳ್ಳಿ

Advertisement

ಸದ್ಯ ವಿಶ್ವದ (World) ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್​ಗಳಲ್ಲಿ (Messaging Application) ಒಂದಾಗಿರುವ ಈ ವಾಟ್ಸಾಪ್ (WhatsApp) ಅಪ್ಲಿಕೇಶನ್ ನಿರಂತರವಾಗಿ ತನ್ನ ಬಳಕೆದಾರರಿಗೆ ಒಂದಲ್ಲೊಂದು ಫೀಚರ್​ಗಳನ್ನು ಪರಿಚಯಿಸುವ ಮೂಲಕ ಭಾರೀ ಮೆಚ್ಚಗೆಯನ್ನು ಪಡೆದಿದೆ ಎನ್ನಬಹುದು. ಹೌದು ವಾಟ್ಸಾಪ್​ ಬಗ್ಗೆ ಹಿಂದಿನ ವರ್ಷವನ್ನು ಸ್ವಲ್ಪ ಮೆಲುಕು ಹಾಕುವುದಾರೆ ವಾಟ್ಸಾಪ್​ ಕಂಪೆನಿ ಕಳೆದ ವರುಷ ಹಲವಾರು ಅಪ್ಡೇಟ್​​ಗಳನ್ನು (Update) ಮಾಡಿದೆ.

ಅದೇ ರೀತಿ 2023ರಲ್ಲಿ ಇನ್ನೂ ಹಲವಾರು ಫೀಚರ್ಸ್​ಗಳು ಬರಲಿದೆ ಎಂದು ಹೇಳಿತದ್ದು ಅದೇ ರೀತಿಯಲ್ಲಿ ಈ ಬಾರಿ ಆರಂಭದ ತಿಂಗಳಿನಿಂದಲೇ ಹೊಸ ಅಪ್ಡೇಟ್​​ಗಳನ್ನು (New Updates) ಪರಿಚಯಿಸುತ್ತಾ ಬಂದಿತ್ತು. ಇದೀಗ ತನ್ನ ಬಳಕೆದಾರರಿಗಾಗಿ ವಿಶೇಷ ಫೀಚರ್​ ಒಂದು ಬಿಡುಗಡೆಯಾಗುತ್ತಿದ್ದು ಇದು ಬಳಕೆದಾರರಿಗೆ ಬಹಳಷ್ಟು ಅನುಕೂಲವಾಗಲಿದೆ.

Advertisement

ಹೌದು ಸದ್ಯ ಇದೀಗ ವಾಟ್ಸಾಪ್‌ ಐಒಎಸ್‌ನಲ್ಲಿ (Whatts App Ios) ಟೆಕ್ಸ್ಟ್‌ ಡಿಟೆಕ್ಷನ್‌ ಫೀಚರ್‌ ಅನ್ನು ಬಿಡುಗಡೆ ಮಾಡಲಾಗಿದ್ದು ಇದು ಬಳಕೆದಾರರಿಗೆ ಫೋಟೋಗಳಿಂದ ಟೆಕ್ಸ್ಟ್‌ ತೆಗೆದು ಹಾಕಲು ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ. ಇನ್ನು ವರದಿಯ ಪ್ರಕಾರವಾಗಿ iOS 23.5.77 ಗಾಗಿ ವಾಟ್ಸಾಪ್‌ ಅಪ್‌ಡೇಟ್‌ ಮಾಡಲಾಗಿತ್ತು.ಹೌದು ಸದ್ಯ ಕಂಪನಿ ಎಲ್ಲಾ ಬಳಕೆದಾರರಿಗೂ ಈ ಫೀಚರ್‌ ಅನ್ನು ಒದಗಿಸಲಿದ್ದು ಬಳಕೆದಾರರು ಟೆಕ್ಸ್ಟ್‌ ಹೊಂದಿರುವ ಫೋಟೋಸ್ (Photos) ತೆಗೆದಾಗ ಆ ಪಠ್ಯ ಅಥವಾ ಅಕ್ಷರಗಳನ್ನು ನಕಲಿಸಲು ಅನುಮತಿಸುವ ಹೊಸ ಬಟನ್ (New Button) ಲಭ್ಯವಾಗುತ್ತದೆ. ಇನ್ನು ಗೌಪ್ಯತೆ ಕಾರಣಗಳಿಗಾಗಿ ಈ ಫೀಚರ್‌ ಫೋಟೋಗಳ ವೀಕ್ಷಣೆಗೆ ಹೊಂದಿಕೆಯಾಗುವುದಿಲ್ಲ.

ಇನ್ನು ಕಳೆದ ತಿಂಗಳು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ ಐಒಎಸ್‌ನಲ್ಲಿ ಸ್ಟಿಕ್ಕರ್ ಮೇಕರ್ ಟೂಲ್ ಅನ್ನು ಬಿಡುಗಡೆ ಬಗ್ಗೆ ವರದಿಯಾಗಿದ್ದು ಅದು ಬಳಕೆದಾರರಿಗೆ ಫೋಟೋಗಳನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ. ಸದ್ಯ ಈ ವಾರದ ಆರಂಭದಲ್ಲಿ WhatsApp iOS ನಲ್ಲಿ ವಾಯ್ಸ್ ಸ್ಟೇಟಸ್ ಅಪ್‌ಡೇಟ್ (Voice status update) ಫೀಚರ್‌ ಕೂಡ ಅಳವಡಿಸಲಾಗಿದ್ದು ಬಳಕೆದಾರರು ವಾಯ್ಸ್‌ ನೋಟ್‌ಗಳನ್ನು ರೆಕಾರ್ಡ್‌ (Voice Note Record) ಮಾಡಿ ಸ್ಟೇಟಸ್ ಮೂಲಕ ಹಂಚಿಕೊಳ್ಳಬಹುದು. ಇನ್ನು ವಾಯ್ಸ್‌ ರೆಕಾರ್ಡಿಂಗ್‌ಗೆ ಗರಿಷ್ಠ ಸಮಯ 30 ಸೆಕೆಂಡುಗಳಿದ್ದು ಬಳಕೆದಾರರು ತಮ್ಮ ಸ್ಟೇಟಸ್‌ ಹಾಗೂ ಚಾಟ್‌ಗಳಿಗೆ ಈ ರೆಕಾರ್ಡಿಂಗ್‌ ಅನ್ನು ಫಾರ್ವರ್ಡ್ ಮಾಡಬಹುದಾಗಿದೆ.

Advertisement

Leave A Reply

Your email address will not be published.